ಶಿವಮೊಗ್ಗ: ಸಿಎಂ ಸಿದ್ದರಾಮಯ್ಯನವರೇ, ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ. ಈ ದೇಶದಲ್ಲಿ ನಿಮಗು ಅದೇ ಕಾನೂನು, ನನಗೂ ಅದೇ ಕಾನೂನು. ನನ್ನ ವಿರುದ್ದ ತನಿಖೆ ನಡೆದು ನಾನು ತಪ್ಪಿತಸ್ಥನಲ್ಲ ಎಂದು ಹೊರಗೆ ಬಂದೆ. ನೀವು ಹಾಗೆಯೇ ತನಿಖೆ ಎದುರಿಸಿ. ತಪ್ಪಿತಸ್ಥರಲ್ಲದಿದ್ದರೆ ತಪ್ಪಿತಸ್ಥರಲ್ಲ ಎಂದು ಹೊರಗೆ ಬನ್ನಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶನಿವಾರ (ಸೆ.28) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ತೀರ್ಪಿಗೆ ಯಾರು ದೊಡ್ಡವರಲ್ಲ. ಸಿಎಂ ನ್ಯಾಯಾಲಯದ ಆದೇಶ ಪಾಲಿಸಬೇಕು. ಕೋರ್ಟ್ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಆದೇಶ ಕೊಟ್ಟಿದೆ. ಅವರು ತಪ್ಪಿತಸ್ಥರೆಂದು ಗೊತ್ತಾಗಿದೆ. ತಪ್ಪಿತಸ್ಥರಲ್ಲ ಎಂದು ಕ್ಲೀನ್ ಚಿಟ್ ತಗೊಂಡು ಬನ್ನಿ. ರಾಜ್ಯದ ಜನರಿಗೆ ನೀವು ತಪ್ಪಿತಸ್ಥರೆಂದು ಸ್ಪಷ್ಟವಾಗಿ ಗೊತ್ತಾಗಿದೆ ಎಂದರು.
ನಿಮ್ಮ ಶ್ರೀಮತಿ ಮುಗ್ಧೆ. ಆ ತಾಯಿ ಎಂದು ಹೊರಗೆ ಬಂದವರಲ್ಲ. ಆ ತಾಯಿಗೆ ಅನ್ಯಾಯ ಆಗಬಾರದು. ನೀವು ಅವರ ಹತ್ತಿರ ಸಹಿ ಮಾಡಿಸಿಕೊಂಡಿದ್ದೀರಾ. ನಾನು ಸಹ ಏನು ತಪ್ಪು ಮಾಡಿರಲಿಲ್ಲ. ನನ್ನ ಮೇಲೆ ಆಪಾದನೆ ಮಾಡಿದರು. ಡಿಕೆಶಿ ಮತ್ತು ಸಿದ್ದರಾಮಯ್ಯ ಹಗಲು ರಾತ್ರಿ ಧರಣಿ ಮಾಡಿದರು. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಲೀನ್ ಚಿಟ್ ತಗೊಂಡೆ ಎಂದು ಈಶ್ವರಪ್ಪ ಹೇಳಿದರು.
ಹಿಂದುತ್ವ ತುಳಿಯಬೇಡಿ
ಗಣಪತಿ ಮೆರವಣಿಗೆಯಲ್ಲಿ ಗಲಾಟೆ ವಿಚಾರಕ್ಕೆ ಮಾತನಾಡಿದ ಅವರು, ಗಣಪತಿ ಮೆರವಣಿಗೆಯಲ್ಲಿ ಗಲಾಟೆ ನಡೆಯುತ್ತಿವೆ. ಮಸೀದಿಯಿಂದ ತಲ್ವಾರ್, ಮಚ್ಚು ಬರುತ್ತಿವೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಕೇಸ್ ದಾಖಲಾಗುತ್ತಿವೆ. ಗಣಪತಿ ಕೂರಿಸಿದವರು ಎ1, ಎ2 ಆರೋಪಿಗಳಾಗುತ್ತಿದ್ದಾರೆ. ಸಿದ್ದರಾಮಯ್ಯ ಈ ಪಾಪದಲ್ಲೇ ಸಿಕ್ಕಿ ಹಾಕಿಕೊಂಡಿರುವುದು. ಹಿಂದುತ್ವ ತುಳಿಯಬೇಡಿ, ಹಿಂದುತ್ವ ರಕ್ಷಣೆ ಮಾಡಿ. ಹಿಂದುತ್ವ ತುಳಿಯುವುದು ಕಾಂಗ್ರೆಸ್ ನೀತಿ, ಸಿದ್ದರಾಮಯ್ಯ, ಡಿಕೆಶಿ ನೀತಿ. ಈ ನೀತಿ ಚಾಮುಂಡೇಶ್ವರಿ ತಾಯಿ ಒಪ್ಪಲ್ಲ. ಹಿಂದುತ್ವ, ಗೋವುಗಳ ಸಂರಕ್ಷಣೆ ಮಾಡಿದರೆ ಚಾಮುಂಡೇಶ್ವರಿ ತಾಯಿ ನಿಮ್ಮ ಸಿಎಂ ಸ್ಥಾನ ಉಳಿಸಿಕೊಡುತ್ತಾಳೆ ಎಂದು ಕಿಡಿಕಾರಿದರು.
ಗೋವುಗಳ ಕಳವು ನಡೆಯುತ್ತಿದೆ. ಗೋವು ಕಳ್ಳರ ವಿರುದ್ದ ಕ್ರಮ ಇಲ್ಲ. ಗೋವು ಕಳ್ಳರ ಹಿಡಿದರೆ ಮುಸ್ಲೀಮರ ವೋಟು ಸಿಗಲ್ಲ ಎಂದು ಒಲೈಕೆ ಮಾಡುತ್ತಿದ್ದಾರೆ. ಮುಸ್ಲೀಮರು ಹಿಂದುಗಳು ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನೀವೇ ಎತ್ತಿ ಕಟ್ಟುತ್ತಿರುವುದು. ದೇಶದ್ರೊಹಿ ಮುಸ್ಲಿಂಮರು ಈ ಕೃತ್ಯಗಳನ್ನು ಮಾಡತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.