Advertisement

ಬಿಎಸ್ ವೈ ಅವರನ್ನು ಸಿಎಂ ಮಾಡುವ ಗುರಿ ಇಲ್ಲ: ಈಶ್ವರಪ್ಪ ಟಾಂಗ್

11:30 AM Jan 10, 2017 | Sharanya Alva |

ಕಲಬುರಗಿ: ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಇಲ್ಲ. ಜನರೇ ನನ್ನ ಸಿಎಂ ಆಗಿ ಮಾಡುತ್ತಾರೆ.ನನಗೆ ಬ್ರಿಗೇಡ್ ಬೆಂಬಲ ಬೇಡ ಎಂದು ಬಿಎಸ್ ವೈ ಹೇಳಿದ್ದಾರೆ. ಹಾಗಾಗಿ ರಾಯಣ್ಣ ಬ್ರಿಗೇಡ್ ನಿಲುವನ್ನು ಬದಲಾಯಿಸಿದ್ದೇವೆ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತೆ ಟಾಂಗ್ ನೀಡುವ ಮೂಲಕ ಬಿಜೆಪಿಯೊಳಗಿನ ಜಟಾಪಟಿ ಮತ್ತಷ್ಟು ಜಟಿಲವಾಗತೊಡಗಿದೆ.

Advertisement

ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಾಗಲ್ಲ. ಮಠಾಧೀಶರ ಸಲಹೆಯಂತೆ ಯಾರಿಗೂ ಬೆಂಬಲ ನೀಡಲ್ಲ ಎಂದು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜನರು ಬೇಡ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ರಾಯಣ್ಣ ಬ್ರಿಗೇಡ್ ಹಿಂದುಳಿದ ವರ್ಗಗಳ ಸಂಘಟನೆಯಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next