Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಬಿಎಸ್ವೈ ಬಗ್ಗೆ ಯತ್ನಾಳ ಹೇಳಿಕೆಯು ಫೂಲಿಶ್ ತನದ್ದಾಗಿದೆ. ಪದೆ ಪದೆ ಇಂತಹ ಹೇಳಿಕೆಯಿಂದ ರಾಜ್ಯ ಬಿಜೆಪಿಗೆ ಏನೂ ಆಗಲ್ಲ. ಕೆಲವರಿಗೆ ಮಾತನಾಡಲು ಬಾಯಿ ಚಪಲ ಇರುತ್ತೆ. ಮೊನ್ನೆ ತಾನೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಅಲ್ಲಿ ಯತ್ನಾಳ ಸಹ ಬಂದಿದ್ದರು. ಸಿಎಂ ಸಹಿತ ಎಲ್ಲ ಶಾಸಕರ ಕ್ಷೇತ್ರದ ಸಮಸ್ಯೆಗಳ ಕುರಿತು ಕೇಳಿದ್ದಾರೆ.ಅಲ್ಲಿ ಬಾಯಿ ಮುಚ್ಚಿಕೊಂಡು ಕೂಳಿತುಕೊಂಡು ಈಗ ಇದ್ದಕ್ಕಿದ್ದಂತೆ ಉತ್ತರನ ಪೌರುಷನ ತರ ಹೇಳಿಕೆ ಕೊಟ್ಟು ಸಿಎಂ ಬದಲಾವಣೆ ಆಗ್ತಾರೆ, ಮೋದಿ ಭರವಸೆ ನೀಡಿದ್ದಾರೆ ಅಂದ್ರೆ ಹೇಗೆ ? ಎಂದರು.
Related Articles
ಉ.ಕ ಭಾಗದಲ್ಲಿ 103 ವರ್ಷದ ನಂತರ ಇಂತಹ ನೆರೆ ಬಂದಿದೆ. ನಾನು ಈಗಾಗಲೆ ನಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಏನೇನು ಹಾನಿಯಾಗಿದೆ ಸರ್ವೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಪರಿಹಾರ ಕಾರ್ಯ ಆರಂಭವಾಗಲಿದೆ ಎಂದರು.
Advertisement
ಕಳೆದ ಬಾರಿ ನೆರೆ ಬಂದಾಗ ನಮ್ಮ ಇಲಾಖೆಯಿಂದ 1500 ಕೋಟಿ ನಾವು ಬಿಡುಗಡೆ ಮಾಡಿದ್ದೆವು. ಈ ಹಿಂದೆ ಯಾವ ಸರ್ಕಾರವು ಇಷ್ಟು ಪರಿಹಾರ ಕೊಟ್ಡಿರಲಿಲ್ಲ. ಈಗ ಮತ್ತೆ ನೆರೆ ಬಂದಿದೆ.
ನಮ್ಮಲ್ಲಿ ದುಡ್ಡಿಲ್ಲದೆ ಇರಬಹುದು ಆದರೆ ನಾವು ಸುಮ್ಮನೆ ಕುಳಿತಿಲ್ಲ. ನಾವು ಕುರ್ಚಿ ಬಿಟ್ಟು ಹೋಗಲ್ಲ. ಸಿದ್ದು, ಡಿಕೆಶಿ ಕುರ್ಚಿ ಕನಸು ಕಾಣಬೇಡಿ ಎಂದರಲ್ಲದೆ ಬಡವರಿಗೆ, ನೆರೆ ಸಂತ್ರಸ್ತರಿಗೆ ನಾವು ಪರಿಹಾರ ಕೊಡುವ ಕೆಲಸ ಮಾಡಲಿದ್ದೇವೆ ಎಂದರು.