Advertisement
ಶಿವಮೊಗ್ಗದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಕುರಿತು ಪ್ರತಿಕ್ರಿಯಿಸಿದ ಅವರು ರಾಜಸ್ಥಾನದಲ್ಲಿ ಕನ್ನಯ್ಯ ಅವರ ಕಗ್ಗೊಲೆ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ. ಇಡೀ ಹಿಂದು ಸಮಾಜಕ್ಕೆ ಇದು ಸವಾಲಾಗಿದೆ. ನಮ್ಮ ಶ್ರದ್ಧಾಕೇಂದ್ರಗಳು ನೂರಾರು ವರ್ಷದಿಂದ ಅಪವಿತ್ರಗೊಂಡಿವೆ. ಅಯೋಧ್ಯೆಯಲ್ಲಿದ್ದ ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಿದ್ದರು. ಇದು ಗೊತ್ತಿದ್ದರೂ ಕೂಡ ಅಪಮಾನವನ್ನು ನೂರಾರು ವರ್ಷ ಸಹಿಸಿಕೊಂಡು ಬಂದಿದ್ದೆವು. ಇಂದಿಗೂ ಕಾಶಿಯಲ್ಲಿ ವಿಶ್ವನಾಥನ ಲಿಂಗ ನೀರಿನಲ್ಲಿತ್ತು. ಆ ನೀರಿನಲ್ಲಿ ಮುಸಲ್ಮಾನರು ಕಾಲು ತೊಳೆದುಕೊಂಡು ಹೋಗಿ ನಮಾಜು ಮಾಡುತ್ತಿದ್ದರು. ಮಥುರಾದಲ್ಲಿ ಶ್ರೀಕೃಷ್ಣನ ಜನ್ಮ ಸ್ಥಳದ ದೇವಾಲಯ ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೆ. ಈ ಮೂರು ದೇವಸ್ಥಾನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Related Articles
Advertisement
ನೂಪುರ್ ಅವರ ಹೇಳಿಕೆಯಿಂದ ಇಷ್ಟು ಪ್ರತಿಭಟನೆ ಮಾಡುತ್ತಾರೆ ಎಂದರೆ ಕನ್ನಯ್ಯ ರೀತಿಯಲ್ಲೇ ಮೋದಿಯನ್ನು ಕೊಲೆ ಮಾಡುತ್ತೇವೆ ಎಂದವರನ್ನು ನಾವು ಸುಮ್ಮನೆ ಬಿಡಬೇಕಾ. ಅಲ್ಲದೆ ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ.ಮದರಸಾಗಳನ್ನು ಬ್ಯಾನ್ ಮಾಡಬೇಕು. ಇಲ್ಲವೇ ಅಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದರು. ಪ್ರಧಾನಿಯನ್ನ ಕೊಲ್ಲುತ್ತೇವೆ ಎಂದು ಹೇಳಿರುವ ಹೇಳಿಕೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕು. ಜೊತೆಗೆ ಉಗ್ರರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕು. ಮುಂದೆ ಹಿಂದುಗಳ ಆಕ್ರೋಶದಿಂದ ದೇಶದಲ್ಲಿ ಏನುಬೇಕಾದರೂ ಆಗಬಹುದು ಪ್ರದಾನಿ ಮೋದಿ ಅವರು ತುರ್ತು ಅಧಿವೇಶನ ಕರೆದು ಈ ರೀತಿಯ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮದ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು, ಕನ್ನಯ್ಯ ಕೊಲೆ ಪ್ರಕರಣ ಎನ್ ಐಎಗೆ ವಹಿಸುವುದಾಗಿ ಸರಕಾರ ಹೇಳಿದೆ, ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಈಶ್ವರಪ್ಪ ಆಗ್ರಹಿಸಿದರು.