ಶಿವಮೊಗ್ಗ: ಹಲಾಲ್ ಕಟ್ಟೋ… ಹಲ್ಕಟ್ಟೋ.. ನನಗಂತೂ ಒಂದು ಅರ್ಥ ಆಗುತ್ತಿಲ್ಲ ಎಂದು ರಾಜ್ಯದಲ್ಲಿ ಹಲಾಲ್ ಕಟ್ ವಿರೋಧಿ ಆಂದೋಲನ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಅವರು ಅವರ ದೇವರಿಗೆ ಎಡೆ ಇಡುತ್ತಾರೆ. ಹಲಾಲ್ ಕಟ್ ಮಾಡಿ ಎಡೆ ಇಡ್ತಾರಂತೆ, ನಾವು ನಮ್ಮ ದೇವರಿಗೆ ಇಡುತ್ತೇವೆ. ಅವರು ಎಡೆ ಇಟ್ಟಿದನ್ನು ತಗೊಂಡು ನಮ್ಮ ದೇವರಿಗೆ ಇಡಬೇಕಂತೆ ನಮಗೇನು ಗ್ರಹಚಾರನಾ ಎಂದು ಕೇಳಿದರು.
ಸ್ಪಷ್ಟವಾಗಿ ಹೇಳುತ್ತೇನೆ. ನಾನು ಹಲಾಲ್ ಕಟ್ ಮಾಂಸ ತಿಂದಿಲ್ಲ. ತಿನ್ನೋದು ಇಲ್ಲ. ಕೊಲೆ, ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಾದ ನಂತರ ಇದೆಲ್ಲಾ ಆರಂಭವಾಗಿದೆ. ಯಾವಾಗ ವಾಪಸ್ ಒದೆ ಬೀಳಲು ಆರಂಭವಾಯ್ತೋ ಅಂದಿನಿಂದ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದಾರೆ. ಈ ಹಿಂದೆ ಯುಗಾದಿ ಸಂದರ್ಭದಲ್ಲಿ ಹಲಾಲ್ ಕಟ್ ಬಗ್ಗೆ ಮಾತನಾಡಿದ್ರು ಆದ್ರೇ, ಈ ಬಾರಿ ಒಬ್ಬರೂ ಸಹ ಮಾತನಾಡ್ತಿಲ್ಲ ಎಂದು ಹೇಳಿದರು.
ಸ್ವಾಭಾವಿಕವಾಗಿ ಹಿಂದೂ ಸಮಾಜ ಎದ್ದು, ಜಾಗೃತವಾಗಿದೆ. ಅವರಿಗೆ ಸಿಗುವ ಲಾಭ, ಹಣವನ್ನು ದೇಶದ್ರೋಹಿ ಚಟುವಟಿಕೆಗೆ ಬಳಸುತ್ತಾರೆ. ಬಾಂಬ್ ತಯಾರಿಸಲು, ಭಯೋತ್ಪಾದನಾ ಕೃತ್ಯಕ್ಕೆ ಹಣ ಬಳಸ್ತಾರೆ. ನಮ್ ದುಡ್ಡಲ್ಲಿ ಲಾಭ ಮಾಡ್ಸಿ, ನಾವೇ ಬಾಂಬ್ ಹಾಕ್ಸೋಬೇಕಾ ಎಂದು ಪ್ರಶ್ನಿಸಿದರು.
ಯಾವ ಕಾರಣಕ್ಕೂ ಹಿಂದೂ ಸಮಾಜ ಸಹಿಸಲ್ಲ. ದಿನೇ ದಿನೇ ಜಾಗೃತಿಯಾಗುತ್ತಲೇ ಇದೆ. ನಾನಂತೂ ಜೀವನದಲ್ಲಿ ಹಲಾಲ್ ಮಾಂಸ ತಿಂದಿಲ್ಲ, ತಿನ್ನೋದೂ ಇಲ್ಲ. ನಾನು ಯಾವುದೇ ಮುಸಲ್ಮಾನರ ಮನೆಯಲ್ಲಿ ತಿಂದಿಲ್ಲ. ಯಾವುದೇ ಮುಸಲ್ಮಾನರ ಮನೆಗೆ ಹೋಗಿ ಅವರು ಸ್ಪಷ್ಟವಾಗಿ ಹೇಳ್ತಾರೆ, ಹಲಾಲ್ ಕಟ್ ಅಗಿರೋದಕ್ಕೆ ತಿನ್ನುತ್ತಿದ್ದೆವೆ ಎಂದು. ಆದರೆ ಯಾವುದೇ ಮುಸಲ್ಮಾನರ ಮನೆಗೆ ಹೋಗೋಕೆ ನಾನಂತೂ ಇಷ್ಟಪಡಲ್ಲ ಎಂದರು.