Advertisement

ಕಾಂಗ್ರೆಸ್ ಇಂದಲ್ಲ ನಾಳೆ ನಿಧಾನಕ್ಕೆ ಸಾಯುವಂತಹ ಪಕ್ಷ : ಕೆ ಎಸ್ ಈಶ್ವರಪ್ಪ

02:29 PM May 29, 2021 | Team Udayavani |

ಶಿವಮೊಗ್ಗ : ಬಿಜೆಪಿಗೆ ನಾಯಕತ್ವ ಬದಲಾವಣೆಯ ರೋಗ ಹಿಡಿದಿದೆ ಎಂಬ  ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಕಿಡಿಕಾರಿದ್ದಾರೆ. ಕಾಂಗ್ರೆಸ್ ಗೆ ಕ್ಯಾನ್ಸರ್ ರೋಗ, ಆ ಕ್ಯಾನ್ಸರ್ ರೋಗ ಗುಣವೇ ಆಗಲ್ಲ. ಹೊಸ ಔಷಧಿ ಕಂಡು ಹಿಡಿಯುತ್ತಿದ್ದಾರೆ. ನಿಮ್ಮ ಕ್ಯಾನ್ಸರ್ ರೋಗಕ್ಕೆ ಇವತ್ತಿನವರೆಗೆ ಔಷಧಿ ಇಲ್ಲ. ನಿಮ್ಮ ಪಕ್ಷದ ಕ್ಯಾನ್ಸರ್ ರೋಗದಿಂದಲೇ ಅನೇಕ ನಿಮ್ಮ ಶಾಸಕರು ಪಕ್ಷ ಬಿಟ್ಟು ಹೊರ ಬಂದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಈಶ್ವರಪ್ಪ ಗುಡುಗಿದ್ದಾರೆ.

Advertisement

ನಿಮ್ಮಲ್ಲಿ ಕ್ಯಾನ್ಸರ್ ರೋಗ ಇಟ್ಟುಕೊಂಡು ಬಿಜೆಪಿಯಲ್ಲಿ ರೋಗ ಇದೆ ಅಂತಾ ಹುಡುಕುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಈ ರೋಗಕ್ಕೆ ನಮ್ಮಲ್ಲಿ ಕೇಂದ್ರದ ನಾಯಕರು ಇದ್ದಾರೆ. ಅದಕ್ಕೆ ಪರಿಹಾರ ಕಂಡು ಹಿಡಿದಿದ್ದಾರೆ. ಕೇಂದ್ರದ ನಾಯಕರಲ್ಲಿ ಔಷಧಿ ಇದೆ. ಆ ಔಷಧಿಯಿಂದ ಬಿಜೆಪಿ ಪಕ್ಷ ಏನು ಸಮಸ್ಯೆ ಇಲ್ಲದ ಹಾಗೆ ಅಧಿಕಾರ ಅವಧಿ ಪೂರೈಸುತ್ತೇವೆ. ಇದರಲ್ಲಿ ಯಾವ ಅನುಮಾನ ಇಲ್ಲ ಎಂದರು.

ಕಾಂಗ್ರೆಸ್ ನಲ್ಲಿರುವ ಕ್ಯಾನ್ಸರ್ ರೋಗಕ್ಕೆ ಔಷಧಿ ಇಲ್ಲ. ಕಾಂಗ್ರೆಸ್ ಇಂದಲ್ಲ ನಾಳೆ ನಿಧಾನಕ್ಕೆ ಸಾಯುವಂತಹ ಪಕ್ಷವೇ ಇದು. ಕಾಂಗ್ರೆಸ್ ಇತಿಹಾಸ ನೋಡಿದರೆ ಮೂರು ಮೂರು ಮುಖ್ಯಮಂತ್ರಿಗಳು ಯಾರು ಬದಲಾಗಿದ್ದರು ಅಂತಾ ಗೊತ್ತಾಗುತ್ತೆ.. ವೀರೇಂದ್ರ ಪಾಟೀಲ್ ಅವರಂತಹ ಪ್ರಾಮಾಣಿಕ ಮುಖ್ಯಮಂತ್ರಿ ಅವರನ್ನು ಏರ್ ಪೋರ್ಟ್ ನಲ್ಲೇ ಬದಲಾವಣೆ ಮಾಡಿದ್ರು. ಕಾಂಗ್ರೆಸ್ ಪಕ್ಷದಲ್ಲಿರುವ ಗುಂಪುಗಾರಿಕೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಇದ್ದಷ್ಟು ಯಾವ ಕಾಲದಲ್ಲಿ ಇರಲಿಲ್ಲ. ಅದಕ್ಕೆ ಸಾಕ್ಷಿಯೇ 2018 ರ ಚುನಾವಣಾ ಫಲಿತಾಂಶ..

ಮುಖ್ಯಮಂತ್ರಿ ಆಗಿದ್ದಂತಹ ಸಿದ್ದರಾಮಯ್ಯ ಸೋತು, ಅನೇಕ ಕಾಂಗ್ರೆಸ್ಸಿನ ಮಂತ್ರಿಗಳು ಸೋತರು. ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಾಗೆ ಮಾಡಿದರು. 28 ಲೋಕಾಸಭಾ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲು ಸಾಧ್ಯವಾಯ್ತು. ಕಾಂಗ್ರೆಸ್ ಗೆ ಗುಂಪುಗಾರಿಕೆಯ ರೋಗ ಇದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ.

ಇದೇ ವೇಳೆ ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರ ಪಕ್ಷದ ಮಂತ್ರಿಗಳು ಶಾಸಕರು ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿ ಹಾಕಿಕೊಂಡಿಲ್ಲವಾ.. ಮುಖ್ಯಮಂತ್ರಿ ಅವರೇ ಸ್ವತಃ ಮೇಟಿಯವರನ್ನು ರಕ್ಷಣೆ ಮಾಡಿದ್ರಲ್ಲಾ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಮೇಟಿಯನ್ನು ರಕ್ಷಣೆ ಮಾಡಿಲ್ಲ ಅಂತಾ ಬಹಿರಂಗವಾಗಿ ಹೇಳಿ ನೋಡೋಣ. ಅವರು ಮಾಡಿರುವ ತಪ್ಪುಗಳನ್ನು ಬಿಜೆಪಿಯಲ್ಲಿ ಆಗಿದೆ ಅಂತಾ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. ಆಗದೇ ಇರುವಂತಹದ್ದನ್ನು ಸೃಷ್ಟಿ ಮಾಡ್ತಿದ್ದಾರೆ. ರಾಜ್ಯ ಸರಕಾರದ ಕೋವಿಡ್ ನಿರ್ವಹಣೆಯ ಬಗ್ಗೆ ರಾಜ್ಯದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ತೃಪ್ತಿ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಇಬ್ಬರಿಗೂ ಸಮಾಧಾನ ಇಲ್ಲ ಎಂದರು.

Advertisement

ಪ್ರತಿದಿನ ಎಲ್ಲದರಲ್ಲೂ ಹುಳುಕು ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ ಅವರು ಭಗವಂತನ ಮುಂದೆ ಪ್ರಮಾಣ ಮಾಡಿಬಿಡಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಬಿಡಲಿ. ನರೇಂದ್ರ ಮೋದಿಯವರು ವ್ಯಾಕ್ಸಿನ್ ತಂದಾಗ ಈ ವ್ಯಾಕ್ಸಿನ್ ಹಾಕೋಬೇಡಿ ಅಂತಾ ತಾನು ಹೇಳಿಲ್ಲ ಅಂತಾ ಪ್ರಮಾಣ ಮಾಡಿ ಬಿಡಲಿ. ಜನರನ್ನು ಗೊಂದಲದಲ್ಲಿ ಇಡುವ ಪ್ರಯತ್ನ ಮಾಡಿದರು. ಈ ವ್ಯಾಕ್ಸಿನ್ ನಲ್ಲಿ ಡಿಸ್ಟಿಲರಿ ವಾಟರ್ ಇದೆ. ಪುರುಷತ್ವ ಹೋಗುತ್ತೆ ಅಂತಾ ಸುಳ್ಳು ಹೇಳಿಲ್ಲ ಅಂತಾ ಹೇಳಿ ನೋಡೋಣ.

ಎಲ್ಲಾ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ವಿರುದ್ದ ಅಪ ಪ್ರಚಾರ ಮಾಡಿದರು. ಈ ವ್ಯಾಕ್ಸಿನ್ ಹಾಕಿಸಿಕೊಂಡರೆ ದೇಶದಿಂದ ಕೋವಿಡ್ ಬೇಗ ಹೋಗುತ್ತೆ. ಕಾಂಗ್ರೆಸ್ ನವರಿಗೆ ಇನ್ನು ಉದ್ಯೋಗ ಇರುವುದಿಲ್ಲ. ಟೀಕೆ ಮಾಡಲು ಅವಕಾಶ ತಪ್ಪುತ್ತದೆ ಎನ್ನುವ ಒಂದೇ ಕಾರಣಕ್ಕೆ ಅಪ ಪ್ರಚಾರ ಮಾಡಿದ್ರು. ಇಡಿ ದೇಶದಲ್ಲಿ ಕೋವಿಡ್ ಹೆಚ್ಚಾಗಲು ಕಾರಣವೇ ಕಾಂಗ್ರೆಸ್ ಎಂದು ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next