Advertisement
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಯಾವುದೇ ತಪ್ಪು ಮಾಡಿಲ್ಲ, ಸೀತೆಯಷ್ಟೆ ಪವಿತ್ರ ಎನ್ನುವುದಾದರೆ ತನಿಖೆ ಎದುರಿಸಲಿ. ಈ ಹಿಂದೆ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆದಾಗ ಹವಾಲಾ ಹಣ, ಅಕ್ರಮ ದಾಖಲೆಗಳು ದೊರಕಿದ್ದವು. ಆಗ ಜೈಲಿಗೆ ಹೋಗಿ ಬಂದಿದ್ದರು. ಈಗ ಪುನಃ ದಾಳಿಯಾಗಿದೆ. ಈಗಲೂ ಹಣ, ದಾಖಲೆಗಳು ದೊರಕಿವೆ.
Related Articles
ಮೀಸಲಾತಿ ಕೊಡಬೇಕು ಎನ್ನುವ ಕೂಗಿಗೆ ಸ್ವಾಮೀಜಿಗಳು ನೇತೃತ್ವ ವಹಿಸಿದ್ದಾರೆ. ಹಿಂದುಳಿದ ಸಮಾಜಕ್ಕೆ ಮೀಸಲಾತಿ
ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಅದಕ್ಕೆ ನನ್ನ ಬೆಂಬಲವಿದೆ ಎಂದರು.
Advertisement
ಗ್ರಾಪಂ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಆದರೆ, ಜನ ಚುನಾವಣೆಗೆ ಸಿದ್ಧರಿಲ್ಲ. ಕೊರೊನಾ ವೇಳೆ ಚುನಾವಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ತಜ್ಞರು ಕೂಡ ಚುನಾವಣೆ ಬೇಡ ಎನ್ನುತ್ತಿದ್ದಾರೆ ಎಂದರು. ಮಾಸ್ಕ್ ಧರಿಸದಿದ್ದಲ್ಲಿ ದಂಡ ಹಾಕಲು ವಿರೋಧ ಬರುತ್ತಿರುವ ಕಾರಣ ದಂಡದ ಮೊತ್ತ ಕಡಿಮೆ ಮಾಡಲಾಗಿದೆ ಎಂದರು.