Advertisement
ಕೊಪ್ಪಳದ ಮುನಿರಾಬಾದ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗಿದೆ. ಮೋದಿ ಮತ್ತೆ ಪ್ರಧಾನಿ ಆಗಲ್ಲ , ಬಿಜೆಪಿ ಅಧಿಕಾರಕ್ಕೆ ಬರಲ್ಲ , ಯಡಿಯೂರಪ್ಪ ಸಿಎಂ ಆಗಲ್ಲ , ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2 ಸೀಟೂ ಗೆಲ್ಲಲ್ಲ ಎಂದಿದ್ರು 25 ಸ್ಥಾನ ಬಂದವು. ನಾನು ಮತ್ತೆ ಸಿಎಂ ಆಗ್ತೇನೆ ಎಂದಿದ್ರು, 37 ಸಾವಿರ ಓಟಿನಲ್ಲಿ ಸೋತರು. ಹೀಗೆ ಅವರು ಹೇಳಿದ್ದೆಲ್ಲವೂ ಉಲ್ಟಾ ಆಗಿದೆ. ಈಗ ಬಿಜೆಪಿ 8 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲ್ಲ ಎಂದೆನ್ನುತ್ತಿದ್ದಾರೆ. 8 ಸ್ಥಾನಗಳನ್ನು ಗೆಲ್ಲಲಾಗದಿದ್ದರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ಎಂದು ಸವಾಲ್ ಹಾಕಿದ್ದಾರೆ. ಒಂದು ವೇಳೆ 8ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ಅವರು ವಿಪಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡ್ತಾರಾ ಎಂದು ತಿರುಗೇಟಿನ ಮೂಲಕ ಪ್ರತಿ ಸವಾಲ್ ಹಾಕಿದರು.
Related Articles
Advertisement
ಇನ್ನು ರಾಜಕಾರಣವೇ ಗೊಂದಲವಾಗಿರುತ್ತದೆ. ಯಾವ ಪಕ್ಷದಲ್ಲಿ ಗೊಂದಲ ಇಲ್ಲ. ಕೆಲವೊಂದು ಕ್ಷೇತ್ರಗಳಲ್ಲಿ ಗೊಂದಲ ಇವೆ. ಒಂದು ಕುಟುಂಬ ಅಂದರೆ ಗೊಂದಲ ಇರುತ್ತೆ ಅಲ್ವಾ. ಹಾಗೆ ಕೆಲವೊಂದು ಕ್ಷೇತ್ರದಲ್ಲಿ ಗೊಂದಲ ಇವೆ. ಅವೆಲ್ಲವನ್ನು ಸರಿ ಮಾಡುವ ಕೆಲಸ ಮಾಡಿದ್ದೇವೆ. ಈ ಹಿಂದೆ ಬಿಜೆಪಿ, ಜನ ಸಂಘ ಅಂದರೆ ಅಭ್ಯರ್ಥಿಗಳೇ ಸ್ಪರ್ಧೆಗೆ ಮುಂದಾಗುತ್ತಿರಲಿಲ್ಲ. ಠೇವಣಿ ಹೋಗುತ್ತೆ ಎಂದು ಬರುತ್ತಿರಲಿಲ್ಲ. ಈಗ ಆಕಾಂಕ್ಷಿಗಳು ತುಂಬ ಜನ ಇದ್ದಾರೆ ನಮ್ಮದು ಗೆಲ್ಲುವಂತ ಪಕ್ಷ ಎಂದರು.
ಬಿಜೆಪಿಗೆ ಬಹುಮತ ಬಂದರೂ ಜೆಡಿಎಸ್ ಬೆಂಬಲ ನೀಡಿದ್ರೆ ನಾವು ಬೇಡ ಅನ್ನಲ್ಲ. ಕೇಂದ್ರದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಇದೆ. ಆದರೂ ಕೆಲವು ಮಿತ್ರ ಪಕ್ಷಗಳು ನಮ್ಮೊಟ್ಟಿಗೆ ಇವೆಯಲ್ಲ. ಬಿಜೆಪಿಗೆ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷದವರು ಬಂದರೂ ನಾವು ಸ್ವಾಗತ ಮಾಡುತ್ತೇವೆ ಎಂದರು.