Advertisement
ಯಡಿಯೂರಪ್ಪ, ಈಶ್ವರಪ್ಪ ಹಾಗೂ ದಿ| ಅನಂತ್‌ಕುಮಾರ್ ಬಿಜೆಪಿಯ ತ್ರಿಮೂರ್ತಿ ಗಳೆಂದೇ ರಾಜಕೀಯ ವಲಯದಲ್ಲಿ ಗುರುತಿಸ ಲ್ಪಟ್ಟವರು. ಎಬಿವಿಪಿ ಕಾಲದಿಂದ ಹೋರಾಟದ ಮುಂಚೂಣಿಯಲ್ಲಿದ್ದ ಈಶ್ವರಪ್ಪ , ಶಿವಮೊಗ್ಗದ ವಿಎಚ್‌ಪಿ ಮುಖಂಡ ನರಸಿಂಹ ಮೂರ್ತಿ ಅಯ್ಯಂಗಾರ್ ಅವರಿಂದ ಆರ್‌ಎಸ್‌ಎಸ್‌ಗೆ ಪರಿಚಯಿಸಲ್ಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕರಾಗಿಯೂ ಕೆಲಸ ಮಾಡಿರುವ ಈಶ್ವರಪ್ಪ ಇಂದಿಗೂ ಸಂಘ ಹಾಕಿದ ಗೆರೆಯನ್ನು ದಾಟದ ವ್ಯಕ್ತಿ ಎಂದೇ ಗುರುತಿಸಿಕೊಂಡವರು.
Related Articles
Advertisement
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಮೊದಲಿನಿಂದಲೂ ಸ್ಪಷ್ಟತೆ ಹೊಂದಿರದ ಅವರು, ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು. 80 ವರ್ಷವಾದರೂ ರಾಜಕಾರಣದಲ್ಲಿ ಇರಬೇಕೇನ್ರಿ ? ಎಂದು ಪ್ರಶ್ನಿಸುತ್ತಿದ್ದ ಈಶ್ವರಪ್ಪನವರ ನಡೆ ಪಕ್ಷದ ಇನ್ನಿತರ ಹಿರಿಯರಿಗೆ ಮಾದರಿಯಾಗುವ ಸಾಧ್ಯತೆ ಇದ್ದು, ಸುಮಾರು 45 ವರ್ಷಗಳ ವರ್ಣರಂಜಿತ ಹಾಗೂ ಹೋರಾಟದ ರಾಜಕಾರಣ ಯಡಿಯೂ ರಪ್ಪನವರ ಜತೆಗೇ ನೇಪಥ್ಯಕ್ಕೆ ಸರಿದಿದೆ.
ಅಭ್ಯರ್ಥಿ ಯಾರು?ಈಶ್ವರಪ್ಪ ಅವರೇನೋ ಕಣದಿಂದ ಹಿಂದೆ ಸರಿದರು. ಆದರೆ ಆ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲಕ್ಕೆ ಮೊದಲ ಪಟ್ಟಿಯಲ್ಲಿ ಉತ್ತರ ಸಿಕ್ಕಿಲ್ಲ. ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್ ಅವರಿಗಾಗಿ ನಿವೃತ್ತಿ ಘೋಷಿಸಿದರು ಎಂದು ಹೇಳಲಾಗಿತ್ತಾದರೂ ಮೊದಲ ಪಟ್ಟಿಯಲ್ಲಿ ಹೆಸರನ್ನು ಘೋಷಿಸಿಲ್ಲ. ಇನ್ನೊಂದೆಡೆ ವಿಪ ಸದಸ್ಯ ಆಯನೂರು ಮಂಜುನಾಥ್ ಬಂಡೆದಿದ್ದರು. ಶಿವಮೊಗ್ಗ ಕಣದಲ್ಲಿ ತ್ರಿಮೂರ್ತಿಗಳಿಲ್ಲ
ಶಿವಮೊಗ್ಗ: ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ, ಡಿ.ಎಚ್.ಶಂಕರ ಮೂರ್ತಿ ಇಲ್ಲದ ರಾಜಕೀಯ ಚಿತ್ರಣ ನೆನಪಿಸಿಕೊಳ್ಳಲು ಅಸಾಧ್ಯ. ಈಗಾಗಲೇ ಡಿ.ಎಚ್.ಶಂಕರಮೂರ್ತಿ ತೆರೆಗೆ ಸರಿದಿದ್ದು, ಬಿಎಸ್‌ವೈ ಕೂಡ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈಗ ಈಶ್ವರಪ್ಪ ಕೂಡ ಅದೇ ಹಾದಿಯಲ್ಲಿ ಸಾಗಲು ಮುಂದಾಗಿದ್ದು, ಜಿಲ್ಲೆಯ ಪಾಲಿಗೆ ದೊಡ್ಡ ಹಿನ್ನಡೆಯಂತಿದೆ. 4 ದಶಕಗಳಿಂದ ಸೈಕಲ್ ತುಳಿದು ಪಕ್ಷ ಕಟ್ಟಿ ರಾಜ್ಯದಲ್ಲಿ ಅಧಿಕಾರ ಹಿಡಿಯುವವರೆಗೂ ಶಿವಮೊಗ್ಗದ ಈ ಮೂವರು ನಾಯಕರ ಕೊಡುಗೆ ಅಪಾರ. ಮೂರೂ ನಾಯಕರ ಚುನಾವಣೆ ನಿವೃತ್ತಿ ಬಳಿಕ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಕಾಲವೇ ನಿರ್ಧರಿಸಲಿದೆ. ಹಿಂದೂ ಹುಲಿ, ಪಕ್ಷದ ಕಟ್ಟಾಳು ಎಂದೇ ಕರೆಸಿಕೊಂಡಿರುವ ಈಶ್ವರಪ್ಪ ಇಲ್ಲದ ಶಿವಮೊಗ್ಗ ನಗರದ ಚುನಾವಣೆಯನ್ನು ಕನಸಲ್ಲೂ ಊಹಿಸುವುದು ಕಷ್ಟ. 1989ರಲ್ಲಿ ಕಾಂಗ್ರೆಸ್‌ನ ಪ್ರಬಲ ಶಾಸಕರಾಗಿದ್ದ ಕೆ.ಎಚ್.ಶ್ರೀನಿವಾಸ್‌ರನ್ನು ಮಣಿಸಿ ತಾವೊಬ್ಬ ಉತ್ತಮ ಸಂಘಟನಾ ಚತುರ, ರಾಜಕಾರಣಿ ಎಂದು ಈಶ್ವರಪ್ಪ ತೋರಿಸಿಕೊಟ್ಟಿದ್ದರು. ಅಲ್ಲಿಂದ ಶುರುವಾಗಿದ್ದೆ ಗೆಲುವಿನ ಓಟ. ಶಾಸಕರು ಕೈಗೆ ಸಿಗುವುದೇ ಕಷ್ಟ. ಸಿಕ್ಕರೂ ಕೆಲಸ ಆಗುವುದು ಇನ್ನೂ ಕಷ್ಟ ಎಂಬಂತಹ ದಿನಗಳಲ್ಲಿ ಈಶ್ವರಪ್ಪ, ಜನಸಾಮಾನ್ಯರ ನಡುವಿನ ಶಾಸಕರಾಗಿ ಗಮನ ಸೆಳೆದರು. ಏನಣ್ಣಾ’ ಎಂದು ಹೆಗಲ ಮೇಲೆ ಕೈ ಹಾಕಿ, ಆತ್ಮೀಯತೆಯಿಂದ ಮಾತನಾಡಿಸುವ ಶಾಸಕರಾಗಿ ಅಚ್ಚರಿ ಮೂಡಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಎರಡು ಬಾರಿ ಮಾತ್ರ ಸೋತಿದ್ದು ಬಿಟ್ಟರೆ ಶಿವಮೊಗ್ಗದಂತಹ ಕ್ಷೇತ್ರವನ್ನು ಗೆದ್ದಿದ್ದು ಅವರ ಚಾಣಕ್ಯತನದಿಂದ ಮಾತ್ರ. ಒಮ್ಮೊಮ್ಮೆ ಏನೋ ಮಾತನಾಡಿ ಎಷ್ಟೇ ವಿವಾದಗಳನ್ನು ಮೈಮೇಲೆ ಎಳೆದುಕೊಂಡರೂ ಅದಕ್ಕೆ ತಲೆಕೆಡಿಸಿಕೊಂಡವರಲ್ಲ. ಪಕ್ಷ ತಾಯಿ ಇದ್ದಂತೆ ಎನ್ನುತ್ತಿದ್ದ ಅವರು ಕೊನೆವರೆಗೂ ಅದೇ ರೀತಿ ನಡೆದುಕೊಂಡಿದ್ದು ರಾಜಕೀಯದಲ್ಲಿ ಒಂದು ಅಚ್ಚರಿ. ಈಗ ಚುನಾವಣ ರಾಜಕೀಯದಿಂದ ದೂರ ಸರಿಯುವ ನಿರ್ಧಾರದಿಂದಲೂ ಈಶ್ವರಪ್ಪ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.