Advertisement
– ಗ್ರಾಮೀಣ ಭಾಗದಲ್ಲಿ ಕೊರೊನಾ ನಿಯಂತ್ರಣ ಹೇಗಿದೆ ?ಗ್ರಾ. ಪಂ. ಮಟ್ಟ ಮತ್ತು ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯ ಪಡೆಯ ಸದಸ್ಯರಿಗೆ, ಸ್ವಯಂ ಸೇವಕರಿಗೆ ತರಬೇತಿ ನೀಡ ಲಾಗಿದೆ. ಕಾರ್ಯಪಡೆಗಳು ನಗರದಿಂದ ಹಳ್ಳಿಗ ಳಿಗೆ ಮರಳಿ ಬಂದ ವಲಸಿಗರ ಕುಟುಂಬಗಳಿಗೆ ವೈದ್ಯಕೀಯ ಸೇವೆ ಸೇರಿ ಸಾಮಾಜಿಕ ಭದ್ರತೆ ಸೇವೆ ಗಳನ್ನು ಪರಿಣಾಮಕಾರಿಯಾಗಿ ನೀಡುತ್ತಿವೆ.
ನರೇಗಾ ಅಡಿ ನಾವು ಉದ್ಯೋಗ ನೀಡುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ನಮಗೆ 13 ಕೋಟಿ ಮಾನವ ದಿನ ಸೃಜನೆಗೆ ಅವಕಾಶ ಇತ್ತು, 15 ಕೋಟಿ ಮಾನವ ದಿನ ಸೃಜನೆ ಮಾಡಿ ಹೆಚ್ಚುವರಿಯಾಗಿ ಅಗತ್ಯ ಇದ್ದವರಿಗೆ ಕೆಲಸ ನೀಡಿದ್ದೆವು. ಈ ವರ್ಷ ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಿರುವುದರಿಂದ 40 ಜನರಿಗೆ ಸೀಮಿತವಾಗಿ ಕಾಮಗಾರಿ ಕೈಗೊಳ್ಳಲು ಹಾಗೂ ಎಲ್ಲ ರೀತಿಯ ಎಚ್ಚರಿಕೆ ವಹಿಸಲು ಮಾರ್ಗಸೂಚಿ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿಯ ಮೊತ್ತ 299 ರೂ.ಗೆ ಏರಿಸಲಾಗಿದೆ. ರಾಜ್ಯ ಸರಕಾರವು ಪಡಿತರದಾರರಿಗೆ ನೀಡುವ ಆಹಾರ ಧಾನ್ಯದ ಜತೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. – ಶಿವಮೊಗ್ಗದಲ್ಲಿ ಕೊರೊನಾ ನಿಯಂತ್ರಣ ಹೇಗಿದೆ?
ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಿ ಪ್ರಕರಣಗಳ ನಿಯಂತ್ರ ಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಯಲ್ಲಿ ಕೋವಿಡ್, ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ, ಇರುವ ವ್ಯವಸ್ಥೆ ಹಾಗೂ ಕೊರತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ತತ್‌ಕ್ಷಣಕ್ಕೆ ಆಗಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಪಾಸಿಟಿವ್ ಬಂದ ವ್ಯಕ್ತಿಗಳಿಗೆ ತತ್‌ಕ್ಷಣ ಹೋಂ ಐಸೊಲೇಶನ್ ಜಾರಿಗೊಳಿಸಿ ಅವರಿಗೆ ಮೆಡಿಕಲ್ ಕಿಟ್ ಒದಗಿಸ ಬೇಕೆಂಬ ಸೂಚನೆ ನೀಡ ಲಾಗಿದೆ. ಅಗತ್ಯ ಇರುವ ಕಡೆ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ.
Related Articles
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾದ ನರೇಂದ್ರಸಿಂಗ್ ತೋಮರ್ ಅವರ ಸೂಚನೆಯಂತೆ ಎಲ್ಲ ಜಿಲ್ಲಾ, ತಾಲೂಕು, ಗ್ರಾ. ಪಂ. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿ ಸೂಕ್ತ ಮಾರ್ಗದರ್ಶನ ಸಹ ನೀಡಲಾಯಿತು. ಅಅನಂತರ ಪ್ರತಿ ವಾರ ಕೊರೊನಾ ಕಾರ್ಯಪಡೆಗಳ ಕಾರ್ಯವೈಖರಿ ಮತ್ತು ಫಲಿತಾಂಶದ ಬಗ್ಗೆ ವರದಿ ಪಡೆಯಲಾಗುತ್ತಿದೆ.
Advertisement