Advertisement
ಶ್ರೀನಿವಾಸಪುರ ಕ್ಷೇತ್ರದ 20 ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಕೊಳವೆ ಬಾವಿ ಕೊರೆದಿರುವ ಹಣ ಪಾವತಿಯಾಗದ ಬಗ್ಗೆ ರಮೇಶ್‌ಕುಮಾರ್ ಪ್ರಸ್ತಾಪಿಸಿದಾಗ ಹಣಕಾಸಿನ ಲಭ್ಯತೆ ಇಲ್ಲದಿರುವುದು, ಹಣಕಾಸು ಇಲಾಖೆ ಅಧಿಕಾರಿಗಳ ಆಕ್ಷೇಪ, ಕಾರ್ಯಪಡೆಯಲ್ಲಿ ಕ್ರಿಯಾಯೋಜನೆ ರೂಪಿಸಿ ಅನುಮತಿ ಪಡೆಯದಿದ್ದರೆ ಮಂಜೂರಾತಿ ಕಷ್ಟ . ಈಗಲೇ ಅಲ್ಲ ಸಿದ್ದರಾಮಯ್ಯ ಅವರ ಅವಧಿಯಲ್ಲೂ ಹೀಗೇ ಆಗಿತ್ತು ಎಂದು ಈಶ್ವರಪ್ಪ ಹೇಳಿದರು.
Related Articles
Advertisement
ಆಗ, ಈಶ್ವರಪ್ಪ ಅವರು ಆಗ ಸಿದ್ದರಾಮಯ್ಯ ಅವರು ಮಾಡಿದ್ದು ಈಗ ಯಡಿಯೂರಪ್ಪ ಅವರ ಕೈಲಿ ಮಾಡಿಸೋಣ ಎಂದರು. ನೀವು ನಮ್ಮ ಜತೆ ಇದ್ದರೆ ಅವರೂ ಒಪ್ಪಿಕೊಳ್ಳುತ್ತಾರೆ ಎಂದು ರಮೇಶ್‌ಕುಮಾರ್ ಚಟಾಕಿ ಹಾರಿಸಿದರು. ಅದಕ್ಕೆ ಈಶ್ವರಪ್ಪ ಅವರು ನೀವು ಜತೆಗಿದ್ದರೆ ಸಾಕು ಎಂದರು.
ಶಾಸಕರು ಕುಡಿಯುವ ನೀರಿಗಾಗಿ ಪಡುತ್ತಿರುವ ಪಡಿಪಾಟಲು ಅಧಿಕಾರಿಗಳಿಗೂ ಗೊತ್ತಾಗಬೇಕು. ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ಕೊಡಿ. ಮುಖ್ಯಮಂತ್ರಿಯವರು ಇರಲಿ, ನಾನೂ ಇರುತ್ತೇನೆ, ಅಧಿಕಾರಿಗಳು ಇರಲಿ, ಅವರಿಗೂ ಎಲ್ಲವೂ ಗೊತ್ತಾಗಲಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು. ಅದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒಪ್ಪಿದರು.