Advertisement

ಕೆಆರ್‌ಎಸ್‌ ನೀರಿನ ಮಟ್ಟ 69 ಅಡಿಗೆ ಕುಸಿತ

07:00 AM May 19, 2018 | Team Udayavani |

ಶ್ರೀರಂಗಪಟ್ಟಣ: ಬೇಸಿಗೆ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 69.37 ಅಡಿಗಳಿಗೆ ಕುಸಿದಿದೆ.
ಒಳ ಹರಿವು 482 ಕ್ಯುಸೆಕ್‌, ಹೊರಹರಿವು 943 ಕ್ಯುಸೆಕ್‌ ಇದೆ. ಒಟ್ಟು ಜಲಾಶಯದಲ್ಲಿ 6.82 ಟಿಎಂಸಿ ನೀರಿನ
ಸಂಗ್ರಹವಿದೆ.

Advertisement

ಜಲಾಶಯದಿಂದ ಪ್ರತಿದಿನ 900 ಕ್ಯುಸೆಕ್‌ ನೀರನ್ನು ಕುಡಿಯಲು ಬಿಡಲಾಗುತ್ತಿದೆ. 4.2 ಟಿಎಂಸಿ ನೀರು
ಡೆಡ್‌ ಸ್ಟೋರೆಜ್‌ ಇದೆ. ಇದನ್ನು ಬಿಟ್ಟು ಉಳಿದ 2.4 ಟಿಎಂಸಿ ನೀರನ್ನು ಕುಡಿಯಲು ಬಳಸಬಹುದು. ಜೊತೆಗೆ, ಕಬಿನಿ ಜಲಾಶಯದಿಂದ ಬರುವ ತಿಂಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಆ ನೀರನ್ನೂ ಕುಡಿಯಲು
ಬಳಸಬಹುದು. ಹೀಗಾಗಿ, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಕಳೆದ ವರ್ಷ ಇದೇ ತಿಂಗಳಲ್ಲಿ
ಜಲಾಶಯದಲ್ಲಿ 70 ಅಡಿ ನೀರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರು, ಮೈಸೂರು,
ರಾಮನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಭಾಗಗಳಿಗೆ ಕುಡಿಯಲು ಮಾತ್ರ ಜಲಾಶಯದ ನೀರನ್ನು ಬಳಸಲಾಗುತ್ತಿದೆ. 

ಈ ಮಧ್ಯೆ, ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು,ಇದರಿಂದಾಗಿ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿಯೂ ನೀರು ಬತ್ತಿ ಹೋಗುತ್ತಿದೆ. ಇದರಿಂದಾಗಿ ಕೆಆರ್‌ಎಸ್‌ ಜಲಾಶಯದ ಕೆಳಗಿನ ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗುವ ಪರಿಸ್ಥಿತಿ ಉಂಟಾಗಿದೆ. ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next