Advertisement
ಪ್ರತಿದಿನ ಸಾವಿರಾರು ಜನರು ಹಾಗೂ ಸ್ಥಳೀಯ ಗ್ರಾಮಗಳ ಜನರು ವಾಹನಗಳಲ್ಲಿ ಈ ರಸ್ತೆ ಮೂಲಕವೇ ಮೈಸೂರು, ಇಲವಾಲ, ಹುಣಸೂರು, ಕೆಆರ್.ನಗರ, ಕೊಡಗಿಗೆ ಹೋಗಬೇಕಿದೆ. ಕಳೆದ ಎರಡು ವರ್ಷದ ಹಿಂದೆ ಈ ರಸ್ತೆಯನ್ನು ಕಿತ್ತು ಹೊಸದಾಗಿ ಆಧುನೀಕರಣಗೊಳಿಸಲಾಯಿತು. 2021ರ ಪಾರಂಪರಿಕ ದಸರೆ ಕಾರ್ಯಕ್ರಮಗಳ ಆಯೋಜನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದೆ. ಗುಂಡಿ ಬಿದ್ದ ರಸ್ತೆಯ ಕಾಮಗಾರಿ ನಡೆಸಲು ಲೋಕೋಪಯೋಗಿ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ.
Related Articles
Advertisement
ದಸರಾ ಆರಂಭಕ್ಕೆ ಇನ್ನು 15 ದಿನ ಬಾಕಿಯಿದ್ದು, ಸರ್ಕಾರ ಎಚ್ಚೆತ್ತುಕೊಂಡು ಲೋಕೋಪ ಯೋಗಿಇಲಾಖೆ ಮೂಲಕ ಗುಂಡಿ ಬಿದ್ದ ರಸ್ತೆ ದುರಸ್ತಿ ಕಾರ್ಯ ನಡೆಸುವ ಕಾರ್ಯಕ್ಕೆ ಮುಂದಾಗುತ್ತದೆಯೋ ಕಾದು ನೋಡಬೇಕು.
ದಸರಾ ಆರಂಭಕ್ಕೆ ಮುನ್ನ : ದುರಸ್ತಿ ಪಾಲಹಳ್ಳಿ ನೀಲಗಿರಿ ತೋಪಿನಿಂದ ರಸ್ತೆಗೆ ಡಾಂಬಾರ್‌ನಿಂದ ತೇಪೆ ಕಾರ್ಯ ನಡೆಯುತ್ತಿದ್ದು, ಹೊಸಹಳ್ಳಿ ವರೆಗೂ ಸಾಗಿದೆ. ಪಂಪ್‌ಹೌಸ್ ವೃತ್ತ ಹಾಗೂ ಹೊಸ ಆನಂದೂರು ಮಾರ್ಗ ಮಧ್ಯದ ಗುಂಡಿಗಳನ್ನು ಮುಚ್ಚಲಾಗುತ್ತದೆ. ನಂತರ ಬೆಳಗೋಳದ ಬಳಿ ಮೂರ್ನಾಲ್ಕು ದೊಡ್ಡ ಗುಂಡಿಯಿದ್ದು, ಅದನ್ನು ಮುಚ್ಚಿಸಿ ನಂತರ ಇಲವಾಲದವರೆಗೂ ತೇಪೆ ದುರಸ್ತಿ ಮಾಡಲಾಗುತ್ತದೆ. ಕಾಮಗಾರಿ ನಡೆಸುವ ಗುತ್ತಿಗೆದಾರನಿಗೂ ಈ ವಿಷಯ ತಿಳಿಸಲಾಗಿದ್ದು, ತ್ವರಿತವಾಗಿ ದಸರಾ ಆರಂಭದೊಳಗೆ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಶ್ರೀರಂಗಪಟ್ಟಣದ ಪಿಡಬ್ಯೂಡಿ ಇಲಾಖೆ ಎಇ ಉದಯಕುಮಾರ್ ಉದಯವಾಣಿಗೆ ತಿಳಿಸಿದರು.
–ಗಂಜಾಂ ಮಂಜು