Advertisement
ಇದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಒಂದು ತಿಂಗಳಿನಿಂದ ಮುಂಗಾರು ಮಳೆ ಬರಲಿದೆ ಎಂದು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಕಾಯುತ್ತಿದ್ದ ರೈತರಿಗೀಗ ಬಿತ್ತನೆ ಮಾಡಲು ಕಾಲ ಕೂಡಿ ಬಂದಂತಾಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಮುಂದಾಗಿದ್ದಾರೆ.
Related Articles
Advertisement
ತಳ ಸೇರಿದ್ದ ನೀರಿನಮಟ್ಟ: ಕೆಆರ್‌ಎಸ್ ಜಲಾ ಶಯ ದಲ್ಲಿ ಕಳೆದ ಮಾರ್ಚ್‌ನಿಂದ ಬಿಸಿಲ ಬೇಗೆಗೆ ಜಲಾಶಯದಲ್ಲಿ ನೀರು ಕಡಿಮೆಯಾಗಿತ್ತು. 78 ಅಡಿಗೆ ಇಳಿ ಯುವ ಮೂಲಕ ಜಲಾಶಯದಲ್ಲಿರುವ ವೇಣು ಗೋಪಾಲಸ್ವಾಮಿಯ ಗೋಪುರ ಕಾಣುವಂತಾಗಿತ್ತು. ಅಲ್ಲದೆ, ಸಂಪೂರ್ಣ ತಳಮಟ್ಟಕ್ಕಿಳಿದು ಬರಡಾ ದಂತಾಗಿತ್ತು. ಇಂಥ ಸಂದರ್ಭದಲ್ಲೂ ಬೇಸಿಗೆಯ ಬೆಳೆಗೆ ನೀರು ಹರಿಸಲಾಗಿತ್ತು. ಅಲ್ಲದೆ, ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಪರಿಣಾಮ ಕೆಆರ್‌ಎಸ್ ಜಲಾಶಯಕ್ಕೆ ಕೊಂಚ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು.
ಜಲಾಶಯ ತುಂಬುವ ಭರವಸೆ ನೀಡಿದ ಒಳಹರಿವು : ಜು.3ರವರೆಗೆ ಒಂದು ಸಾವಿರಕ್ಕೂ ಕಡಿಮೆ ಕ್ಯೂಸೆಕ್ ಇದ್ದ ಜಲಾಶಯದಲ್ಲಿ ನಿಧಾನವಾಗಿ ಒಳಹರಿವು ಹೆಚ್ಚಾಗಿದೆ. ಜು.3ರಂದು 859 ಕ್ಯೂಸೆಕ್ ಇತ್ತು. ಸಂಜೆ ವೇಳೆಗೆ 1054 ಕ್ಯೂಸೆಕ್‌ಗೆ ಏರಿತ್ತು. 4ರಂದು 1151 ಕ್ಯೂಸೆಕ್‌ಗೆ ಏರಿತು. 5ರ ಸಂಜೆ ವೇಳೆಗೆ 1347 ಕ್ಯೂಸೆಕ್, 6ರ ಸಂಜೆಗೆ 2520 ಕ್ಯೂಸೆಕ್, 7ರ ಸಂಜೆಗೆ 7490 ಕ್ಯೂಸೆಕ್‌ಗೆ ಏರಿತ್ತು. ನಂತರ 8ರ ಬೆಳಿಗ್ಗೆ 13449 ಕ್ಯೂಸೆಕ್ ತಲುಪುವ ಮೂಲಕ ಜಲಾಶಯ ತುಂಬುವ ಭರವಸೆ ಮೂಡಿದೆ. ಪ್ರಸ್ತುತ ಜಲಾಶಯದಲ್ಲಿ ಒಟ್ಟು 11.695 ಟಿಎಂಸಿ ನೀರು ಸಂಗ್ರಹವಾಗಿದ್ದು, ಹೊರಹರಿವು 339 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 119.44 ಅಡಿ ಇತ್ತು. ಒಳಹರಿವು 38858 ಕ್ಯೂಸೆಕ್ ಇದ್ದರೆ, ಹೊರಹರಿವು 3453 ಕ್ಯೂಸೆಕ್ ಇತ್ತು. ಜಲಾಶಯದಲ್ಲಿ ಒಟ್ಟು 42.341 ಟಿಎಂಸಿ ನೀರು ಸಂಗ್ರಹವಾಗಿತ್ತು.
ಮಳೆಗಾಗಿ ವಿವಿಧ ರೀತಿಯಲ್ಲಿ ಪ್ರಾರ್ಥನೆ ಮಾಡಿದ್ದ ರೈತರು : ಮಳೆಯಾಗಲಿ ಎಂದು ಜಿಲ್ಲಾದ್ಯಂತ ರೈತರು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ, ವಿವಿಧ ಗ್ರಾಮಗಳಲ್ಲಿ ವರುಣದೇವನ ಒಲಿಸಿಕೊಳ್ಳಲು ವಿವಿಧ ವಿಭಿನ್ನ ಆಚರಣೆಗಳನ್ನು ಮಾಡಿದ್ದರು. ಅದರ ಫಲವೋ ಅಥವಾ ಕಾಕತಾಳೀಯ ಎಂಬಂತೆ ಜುಲೈನಲ್ಲಿ ವರುಣ ಕೃಪೆ ತೋರಿದ್ದು, ಉತ್ತಮ ಮಳೆಯಾಗುತ್ತಿದೆ. ಇದರಿಂದ ರೈತರು ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಆತಂಕ ಮೂಡಿಸಿದ್ದ ಮುಂಗಾರು ಮಳ ವಿಳಂಬ : ಈ ಬಾರಿ ಹಿಂಗಾರು ಮಾರುತುಗಳು ವಿಳಂಬವಾದ ಹಿನ್ನೆಲೆಯಲ್ಲಿ ಜಲಾಶಯದ ನೀರು ಸಹ ಬಾರಿ ಕುಸಿತ ಕಂಡಿತ್ತು. ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದಂತೆ ನೀರಾವರಿ ಅ ಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿ ಜಲಾಶಯದಲ್ಲಿ ಇರುವ ನೀರನ್ನು ಕುಡಿಯಲು ಮಾತ್ರ ಬಳಸಲು ಮುಂದಾಗಿದ್ದರು. ಅತ್ತ ತಮಿಳುನಾಡು ಸಹ ಕಾವೇರಿ ನದಿ ನೀರು ನಿರ್ವಹಣಾ ಪ್ರಾ ಧಿಕಾರ ಮುಂದೆ ನೀರು ಬಿಡುವಂತೆ ವಾದ ಮಂಡಿಸಿದ್ದಲ್ಲದೆ, ತಮಿಳುನಾಡು ಸರ್ಕಾರ ಪ್ರಾ ಧಿಕಾರಕ್ಕೆ ಪತ್ರ ಬರೆದಿತ್ತು. ಇದರಿಂದ ಕರ್ನಾಟಕ ಕಾವೇರಿ ಕೊಳ್ಳದಲ್ಲಿ ಮಳೆಯಾಗದ ಪರಿಣಾಮ ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಇದರಿಂದ ಕಾವೇರಿ ನೀರು ಹಂಚಿಕೆ ವಿವಾದ ಭುಗಿಲೇಳುವ ಮುನ್ನವೇ ವರುಣದೇವ ಕೃಪೆ ತೋರಿರುವುದು ಸಂತಸ ತಂದಿದೆ.
ಸತತ 5 ವರ್ಷ ತುಂಬಿ ದಾಖಲೆ ಬರೆದಿದ್ದ ಜಲಾಶಯ : ಕಳೆದ 5 ವರ್ಷಗಳಿಂದ ಭರ್ತಿಯಾಗಿದ್ದ ಜಲಾಶಯ ಪ್ರಸ್ತುತ ವರ್ಷ ಮಳೆಯಾಗದೆ ಖಾಲಿಯಾಗಿತ್ತು. 2018 ರಿಂದ ಸತತವಾಗಿ ಗರಿಷ್ಠ ಮಟ್ಟ ತಲುಪಿದ್ದ ಜಲಾಶಯದಲ್ಲಿ ಈ ಬಾರಿ ಮಳೆ ಇಲ್ಲದೆ, ಸಂಪೂರ್ಣ ಖಾಲಿ ಯಾಗುವ ಸಂಭವ ಎದುರಾಗಿತ್ತು. ಕಳೆದ ವರ್ಷ ಜು.11ರಂದು ಜಲಾಶಯ ಗರಿಷ್ಠ ತಲುಪುವ ಮೂಲ ಕ ಕಳೆದ 15 ವರ್ಷಗಳ ಜಲಾಶಯದ ಇತಿಹಾಸದಲ್ಲಿ ಸತತ ಐದು ವರ್ಷ ತುಂಬಿದ ದಾಖಲೆ ಬರೆದಿತ್ತು