Advertisement
ಮುಂದಿನ ಬೇಸಿಗೆ ಬೆಳೆಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹಿಂಗಾರು ಹಾಗೂ ಮುಂಗಾರು ಮಳೆ ಬೀಳದ ಕಾರಣ ಕೆಆರ್‌ಎಸ್ ಜಲಾಶಯ ಈ ಬಾರಿ ಭರ್ತಿ ಯಾಗಿಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ.
Related Articles
Advertisement
ನೀರು ಬಿಡಲು ಸಾಧ್ಯವಿಲ್ಲ ಎಂದ ಕರ್ನಾಟಕ : ಕಾವೇರಿ ನೀರು ನಿರ್ವಹಣಾ ಮಂಡಳಿಯ ಕಳೆದ ಬಾರಿಯ ಸಭೆಯಲ್ಲಿ ತಮಿಳುನಾಡಿಗೆ 9 ಟಿಎಂಸಿ ನೀರು ಹರಿಸಬೇಕು ಎಂದು ಸೂಚಿಸಿತ್ತು. ಅದರಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು. ರಾತ್ರಿ ವೇಳೆ ಅತಿ ಹೆಚ್ಚು ನೀರು ಹರಿಸುವ ಮೂಲಕ ನೀರಾವರಿ ಅ ಧಿಕಾರಿಗಳು ತಮಿಳುನಾಡಿಗೆ ಬಿಡಬೇಕಾಗಿದ್ದ ನೀರಿನ ಪ್ರಮಾಣ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಮಂಡಳಿಯ ಸಭೆಯಲ್ಲಿ ಕಾವೇರಿ ಕೊಳ್ಳದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯಾಗದ ಕಾರಣ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿದೆ. ತಮಿಳುನಾಡಿಗೆ ಒಂದು ವೇಳೆ ಹರಿಸಿದರೆ, ಆ ಭಾಗದ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದೆ. ಅದರಂತೆ ಅ.7ರೊಳಗೆ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ, ಮಳೆಯ ಪ್ರಮಾಣದ ವರದಿ ಸಲ್ಲಿಸುವಂತೆ ಮಂಡಳಿ ಸೂಚಿಸಿದ್ದು, ವರದಿ ಪರಿಶೀಲನೆ ನಂತರ ಎಷ್ಟು ಟಿಎಂಸಿ ನೀರು ಹರಿಸಬೇಕು ಎಂಬುದು ತಿಳಿಯಲಿದೆ.
ಸಂಕಷ್ಟ ಸೂತ್ರ:
ಕಳೆದ ಮೂರು ವರ್ಷಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ, ಮುಂಗಾರು ಮಳೆ ಮುಗಿಯುವ ಹೊತ್ತಿಗೆ ತಮಿಳುನಾಡಿನ ಕೋಟಾದ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಜಲಾಶಯ ತುಂಬದ ಕಾರಣ ಇನ್ನೂ ಅರ್ಧದಷ್ಟು ಕೋಟಾದ ನೀರನ್ನು ಬಿಡಲು ಸಾಧ್ಯವಾಗಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ ತಮಿಳುನಾಡಿಗೆ ನೀರು ಬಿಡಲು ಸಂಕಷ್ಟ ಸೂತ್ರ ಅನುಸರಿಸಬೇಕಾಗುತ್ತದೆ. ಆ ವೇಳೆಗೆ ಬೇಸಿಗೆ ಕಾಲ ಆರಂಭವಾಗಲಿದ್ದು, ಬೆಂಗಳೂರು,ಮೈಸೂರು, ಮಂಡ್ಯ ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಸಿಎಂಗೆ ಸದ್ಯಕ್ಕೆ ತಪ್ಪಿದ ಬಾಗಿನ ಭಾಗ್ಯ :
ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗದ ಕಾರಣ ಜಲಾಶಯಕ್ಕೆ ಪ್ರತಿವರ್ಷ ಸಿಎಂ ಬಾಗಿನ ನೀಡುವ ಸಂಪ್ರದಾಯ ಈ ಬಾರಿ ಇಲ್ಲದಂತಾಗಿದ್ದು, ಇದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾವೇರಿಗೆ ಬಾಗಿನ ಬಿಡುವ ಭಾಗ್ಯ ತಪ್ಪಿದಂತಾಗಿದೆ.ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ 2015 ರಿಂದ 2017ರವರೆಗೆ ಸತತ ಮೂರು ವರ್ಷಗಳ ಕಾಲ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರಲಿಲ್ಲ. ಹೀಗಾಗಿ ಮೂರು ಬಾರಿ ಬಾಗಿನ ನೀಡುವ ಭಾಗ್ಯ ಕಳೆದುಕೊಂಡಿದ್ದರು. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಗಳಲ್ಲಿ ಕೆಆರ್‌ಎಸ್ ಭರ್ತಿಯಾಗಿದ್ದ ಕಾರಣ ಐದು ಬಾರಿ ಕಾವೇರಿ ಮಾತೆಗೆ ಬಾಗಿನ ನೀಡಿ ಅತೀ ಹೆಚ್ಚು ಬಾರಿ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಿದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ.
ನಾಲೆ ಆಧುನೀಕರಣ ಕಾಮಗಾರಿ ಕೈಗೊಳಲು ಸಿದ್ಧತೆ :
ನಾಲೆಗಳ ಆಧುನೀಕರಣಕ್ಕೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ನಾಲೆಗಳಿಗೆ ನೀರು ನಿಲ್ಲಿಸಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾಲೆ ಆಧುನೀಕರಣ ಕಾಮಗಾರಿ ನಡೆಸುವ ಸಂಬಂಧ ಈಗಾಗಲೇ ಸಚಿವ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಆದರೆ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ಬಿಡಬೇಕೋ, ಕಾಮಗಾರಿನಡೆಸಬೇಕೋ ಎಂಬುದರ ಬಗ್ಗೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಂತರಇನ್ನೊಂದು ಸಭೆ ಕರೆದು ತೀರ್ಮಾನಿಸಲಾಗುವುದುಎಂದು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸಭೆ ನಡೆದಿಲ್ಲ.
ಬೆಳೆ, ಕುಡಿಯುವ ನೀರಿಗೆ ತೊಂದರೆ:
ಪ್ರತಿವರ್ಷ ತಮಿಳುನಾಡಿಗೆ 177 ಟಿಎಂಸಿ ನೀರನ್ನು ಹರಿಸಬೇಕು. ಅದರಂತೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಸದ್ಯ 124.80 ಅಡಿ ಸಾಮರ್ಥ್ಯ ಜಲಾಶಯದಲ್ಲಿ 113.20 ಅಡಿ ಮಾತ್ರ ನೀರಿದೆ. 35.063 ಟಿಎಂಸಿ ನೀರುಸಂಗ್ರಹವಾಗಿದೆ. ಇದರಲ್ಲಿ ಮುಂಗಾರು ಬೆಳೆಗಳಿಗೆ ಇನ್ನೂ ನೀರಿನ ಅಗತ್ಯವಿದೆ.ಅಲ್ಲದೆ, ಮುಂದಿನ ಬೇಸಿಗೆ ಹಾಗೂ ಕುಡಿಯುವ ನೀರು ಸರಬರಾಜಿನಜತೆಗೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಕೋಟಾವನ್ನು ಮ್ಯಾನೇಜ್ ಮಾಡಬೇಕಿದೆ. ಸದ್ಯ ಜಲಾಶಯದ ಒಳಹರಿವು 4,645 ಕ್ಯೂಸೆಕ್ ಇದ್ದರೆ, ಹೊರಹರಿವು 7,765 ಕ್ಯೂಸೆಕ್ ಇದೆ. ಇದೇ ರೀತಿ ನೀರು ಹರಿದರೆ ನಾಲ್ಕೆçದು ದಿನಗಳಲ್ಲಿ 110 ಅಡಿಗೆ ಕುಸಿಯಲಿದೆ.