ಶ್ರೀರಂಗಪಟ್ಟಣ: ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿಗೆ 13 ಸಾವಿರ ಕ್ಯುಸೆಕ್ಸ್ ಗೂ ಹೆಚ್ಚಿನ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ಕೆಅರ್ ಎಸ್ ಜಲಾಶಯಕ್ಕೆ 31 ಸಾವಿರಕ್ಕೂ ಅಧಿಕ ನೀರು ಹರಿದು ಬರುತ್ತಿದೆ. ಈಗಾಗಲೆ ಜಲಾಶಯದ ನೀರಿನ ಮಟ್ಟ 122 ಅಡಿ ಏರಿಕೆಯಾಗಿದ್ದು, ಈ ಹಿನ್ಮೆಲೆಯಲ್ಲಿ ಹೆಚ್ಚಿನ ನೀರನ್ನು ಜಲಾಶಯದ ನೀರು ಹೊರ ಬಿಡುವ ಸಾಧ್ಯತೆ ಇದೆ.
ಕೆಆರ್ ಎಸ್ ಜಲಾಶಯ ಭರ್ತಿ ಗೆ 2 ಅಡಿ ಬಾಕಿ. ಒಳಹರಿವು 31 ಕ್ಯುಸೆಕ್ ಹಾಗೂ ಹೊರ ಹರಿವು 13 ಸಾವಿರ ಕ್ಯುಸೆಕ್ ಇದೆ. ಜಲಾಶಯದ ಕೆಳಭಾಗದ ನದಿ ತೀರದ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಯಾವ ಸಮಯದಲ್ಲಾದರೂ ಇನ್ನಷ್ಟು ಹೆಚ್ಚಿನ ನೀರನ್ನು ಹೊರ ಬಿಡುವ ಸಾಧ್ಯತೆಯಿಂದ ನದೀ ತೀರದ ಗ್ರಾಮಗಳ ಜನ ಜಾನುವಾರುಗಳನ್ನು ತೆಗೆದುಕೊಂಡು ಹೋಗದಂತೆ ಆಯಾ ಗ್ರಾ ಪಂ ಮಟ್ಟ ಹಳ್ಳಿಗ ಜನರಿಗೆ ಗೆ ನೋಟಿಸ್ ಜಾರಿ ಮಾಡಿ ತಿಳುವಳಿಕೆ ನೀಡಿ ಎಚ್ಚರಿಸಲಾಗಿದೆ
ಪ್ರಸಿದ್ದ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರ ದೋಣಿವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
ಕೆ.ಆರ್.ಸಾಗರ ಅಣೆಕಟ್ಟೆ
ನೀರಿನ ಮಟ್ಟ :122.05
ಒಳಹರಿವು : 31792
ಹೊರಹರಿವು : 13511
ಸಂಗ್ರಹ. : 45.698