ಮೈಸೂರು: ಮೈಸೂರಿನ ಕೃಷ್ಣರಾಜ ಸಾಗರ (ಕೆಆರ್ ಎಸ್) ಡ್ಯಾಂ ಅನ್ನು ನಿರ್ಮಿಸಿದ್ದು ಯಾರು ಎಂಬ ಪ್ರಶ್ನೆಗೆ ತಟ್ಟನೆ ವಿಶ್ವೇಶ್ವರಯ್ಯ ಎಂಬ ಉತ್ತರ ಬರುವುದು ಸಹಜ. ಆದರೆ ಪ್ರೊ.ನಂಜರಾಜ್ ಅರಸ್ ಅವರು ಬರೆದಿರುವ ಪುಸ್ತಕದಲ್ಲಿ ಕೆಆರ್ಎಸ್ ಡ್ಯಾಂ ಕಟ್ಟಿದ್ದು ಬ್ರಿಟಿಷ್ ಅಧಿಕಾರಿ ಎಂದು ಉಲ್ಲೇಖಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಪ್ರೊ.ನಂಜರಾಜ್ ಅರಸ್ ಅವರು ಬರೆದಿರುವ “ನಾನು ಕನ್ನಂಬಾಡಿ ಕಟ್ಟೆ ಹೀಗೊಂದು ಆತ್ಮಕಥೆ ಪುಸ್ತಕದಲ್ಲಿ’ ಕೆಆರ್ ಎಸ್ ಡ್ಯಾಂ ಅನ್ನು ಬ್ರಿಟಿಷ್ ಅಧಿಕಾರಿ ಡಾಸ್ ಎಂಬವರು ಕಟ್ಟಿರುವುದಾಗಿ ಉಲ್ಲೇಖಿಸಿದ್ದಾರೆ. ಹಾಗಾಗಿ ಕನ್ನಂಬಾಡಿ ಅಣೆಕಟ್ಟು ಕಟ್ಟುವಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆ ಏನು ಇಲ್ಲವೇ ಎಂಬುದು ಇತಿಹಾಸ ತಜ್ಞರ ತರ್ಕವಾಗಿದೆ.
ಕೆಆರ್ಎಸ್ಗೆ ಮೂಲ ಕಾರಣಕರ್ತ ಬ್ರಿಟಿಷ್ ಅಧಿಕಾರಿ ಡಾಸ್. ಡ್ಯಾಂ ಕಟ್ಟುವಾಗ ಸರ್.ಎಂ.ವಿ ಅಧಿಕಾರದಲ್ಲಿದ್ದದ್ದು ಕೇವಲ 1ವರ್ಷ. ಹೀಗಿರುವಾಗ ವಿಶ್ವೇಶ್ವರಯ್ಯ ಡ್ಯಾಂ ನಿರ್ಮಿಸಲು ಹೇಗೆ ಸಾಧ್ಯ? ಎಂದು ಪ್ರೊ.ನಂಜರಾಜ್ ಅರಸ್ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ.