Advertisement

ಕೃಷ್ಣನ ಸಂದೇಶ ಸದಾ ಪ್ರಸ್ತುತ

11:00 AM Aug 15, 2017 | |

ಜೇವರ್ಗಿ: ಜೀವನದ ಮೌಲ್ಯ, ಆಧ್ಯಾತ್ಮ, ಸಮಾಜ ಸುಧಾರಣೆ ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣ ತನ್ನ ಶ್ಲೋಕದ ಮೂಲಕ ನೀಡಿರುವ ಸಂದೇಶ ಸಮಾಜಕ್ಕೆ ಸದಾ ಪ್ರಸ್ತುತವಾಗಿದೆ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ
ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶ್ರೀಕೃಷ್ಣ ಅನೇಕ ವಿಷಯಗಳಿಗೆ ಸಂಬಂ ಧಿಸಿದಂತೆ ತನ್ನದೇ ಆದ ಮೌಲಿಕ ವಿಚಾರ ತಿಳಿಸಿದ್ದಾನೆ. ಸಮಾಜದಲ್ಲಿ
ಅನೀತಿ, ಅಧರ್ಮ ಮೆಟ್ಟಿ ಧರ್ಮ ಸ್ಥಾಪಿಸಲು ಶ್ರೀಕೃಷ್ಣ ಪರಮಾತ್ಮ ಜನ್ಮತಾಳಿದಂತೆ ಪ್ರಸ್ತುತ ಸಮಾಜದಲ್ಲಿ ಭ್ರಷ್ಟಾಚಾರದಂತಹ ಅಧರ್ಮ ಮೆಟ್ಟಿ ನಿಲ್ಲಬೇಕು. ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣನ ಮಹಿಮೆ ಅಪಾರವಾಗಿದೆ. ಶ್ರೀಕೃಷ್ಣನ ಬೋಧನೆ ಒಳಗೊಂಡ
ಭಗವದ್ಗೀತೆ ಸಮಾಜಕ್ಕೆ ದಾರಿದೀಪವಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲಸ ಮಾಡುವ ಶ್ರೀಕೃಷ್ಣನ ಜೀವನ ಧರ್ಮ ಅಮೋಘವಾಗಿದೆ. ಪ್ರತಿಯೊಬ್ಬರೂ ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕು ಎಂದು ಹೇಳಿದರು. ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಯಾದವ ಸಮಾಜದ ಉಪಾಧ್ಯಕ್ಷ ನಿಂಗಣ್ಣ ಹೆಗ್ಗನಾಳ, ಕರವೇ ಮುಖಂಡ ಭಗವಂತ್ರಾಯ ಬೆಣ್ಣೂರ, ಚಂದ್ರಶೇಖರ
ಸೀರಿ, ಚನ್ನಮಲ್ಲಯ್ಯ ಹಿರೇಮಠ, ಮೈಲಾರಿ ಬಣಮಿ, ಜಯ-ಕರ್ನಾಟಕ ಸಂಘಟನೆ ಅದ್ಯಕ್ಷ ಸುಧೀಂದ್ರ ಇಜೇರಿ ನೀರಲಕೋಡ, ಬಸಣ್ಣ ಸರಕಾರ ಕೋಳಕೂರ, ವಿಜಯಕುಮಾರ ಯಾದವ, ಪೀರಣ್ಣ ಯಾದವ ಕೋಳಕೂರ, ತಿಪ್ಪಣ್ಣ ಹೆಗ್ಗನಾಳ, ನಿಂಗಣ್ಣ ನಾಯ್ಯೋಡಿ
ಧರ್ಮಣ್ಣ ನಾಯ್ಯೋಡಿ, ಭೀಮಣ್ಣ ನಾಯ್ಯೋಡಿ, ದೇವಪ್ಪ ಯಾದವ, ಕಲ್ಲಪ್ಪ ಯಾದವ, ಶಿವಣ್ಣ ಯಾದವ, ನಾಗಪ್ಪ, ದೇವಿಂದ್ರಪ್ಪ ಹೆಗ್ಗನಾಳ, ವೆಂಕಣ್ಣ ಅವರಾದ, ವಿಶ್ವನಾಥ ಅವರಾದ, ಶ್ರೀಕಾಂತ ರಾಂಪೂರ, ಸುರೇಶ ರಾಂಪುರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next