Advertisement

ಆಸ್ಥಾನ ವಿದ್ವಾಂಸರು, ಪದಾಧಿಕಾರಿಗಳ ಘೋಷಣೆ

01:56 AM Jan 19, 2022 | Team Udayavani |

ಉಡುಪಿ: ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯಾವಧಿಯಲ್ಲಿ ಸೇವೆ ಸಲ್ಲಿಸಲಿರುವ ಆಸ್ಥಾನ ವಿದ್ವಾಂಸರು, ಆಡಳಿತವ ವ್ಯವಸ್ಥೆಯ ವಿವಿಧ ಪದಾಧಿಕಾರಿಗಳ ಘೋಷಣೆ ಪರ್ಯಾಯ ದರ್ಬಾರ್‌ನಲ್ಲಿ ನಡೆಯಿತು.

Advertisement

ಆಸ್ಥಾನ ವಿದ್ವಾಂಸರು
ಉಡುಪಿ ಸಂಸ್ಕೃತ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರಾದ ಕೆ. ಹರಿದಾಸ ಉಪಾಧ್ಯಯ, ಪಿ.ಲಕ್ಷ್ಮೀನಾರಾಯಣ ಶರ್ಮಾ,ಬಳ್ಳಾರಿಯ ವೀರಶೈವ ಮಹಾ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ| ಗುರುರಾಜ ಕೃ. ನಿಪ್ಪಾಣಿ, ವೇದವೇದಾಂತಾದಿ ಶಾಸ್ತ್ರ ಸಂಪನ್ನರಾದ ರಮೇಶ್‌ ಆಚಾರ್ಯ ತುಮಕೂರು, ಚಿಪ್ಪಗಿರಿ ನಾಗೇಂದ್ರಾಚಾರ್ಯ, ಬಿ. ಗೋಪಾಲಕೃಷ್ಣ ಉಪಾಧ್ಯಯ ಇವರು ಕೃಷ್ಣಾಪುರ ಮಠದ ಪರ್ಯಾಯದಲ್ಲಿ ಆಸ್ಥಾನ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದಾರೆ.

ಪದಾಧಿಕಾರಿಗಳು
ಶ್ರೀಮಠದ ದಿವಾನರು: ಕೆ. ವರದರಾಜ ಭಟ್‌, ಚೌಕಿ ಪಾರು ಪತ್ಯಗಾರು- ಪುರೋಹಿತರು: ಬಿ. ಶ್ರೀನಿವಾಸ ಉಪಾಧ್ಯ, ವ್ಯವಸ್ಥಾಪಕರು: ಕೆ.ರಾಮಮೂರ್ತಿ ಭಟ್‌, ಸಿಂಹಾಸನ: ಕೃಷ್ಣಪ್ರಸನ್ನ, ದೇವರ ಸೇವೆ: ಪಿ. ಉದಯ ತಂತ್ರಿ, ಚೇತನ ಐತಾಳ್‌, ಅಜಿತ್‌ ಭಟ್‌, (ಅಸ್ತಿಕೆ-ಅಂಕಿತಾ, ನಾರಾಯಣ, ವಾಗೀಶ ಆಚಾರ್ಯ), ಶ್ರೀ ಮುಖ್ಯಪ್ರಾಣ ದೇವರ ಪೂಜೆ: ಪಿ.ಯಾದವೇಂದ್ರ ಉಪಾಧ್ಯಾಯ, (ಅಸ್ತಿಕೆ- ಸುಧೀಂದ್ರ), ಮೃಷ್ಟಾನ್ನ ಪಾರುಪತ್ಯದಾರರು: ಕೃಷ್ಣಮೂರ್ತಿ ಭಟ್‌, ದೀಪ: ರಾಜೇಂದ್ರ ಭಟ್‌, ಕೊಟ್ಟಾರಿ: ಕೆ.ರಾಘವೇಂದ್ರ ರಾವ್‌, ಭಂಡಾರಿ: ಜನಾರ್ದನ ಮೇಲಾಂಟ, ಭೋಜನಶಾಲೆ ಮುಖ್ಯಪ್ರಾಣ ದೇವರ ಪೂಜೆ: ನಾಗರಾಜ ಭಟ್‌, ಸುಬ್ರಹ್ಮಣ್ಯ ದೇವರ ಪೂಜೆ: ರಾಘವೇಂದ್ರ ಉಪಾಧ್ಯಾಯ, ನವಗ್ರಹ ಪೂಜೆ: ರಾಮಕೃಷ್ಣ ಕಾರಂತ, ಭಾಗೀರಥಿ ದೇವರ ಪೂಜೆ: ಶ್ರೀಕಾಂತ್‌ ಭಟ್‌, ಚೌಕಿ ಅಡುಗೆ: ರಾಘವೇಂದ್ರ ಭಟ್‌, ಭೋಜನಾಶಾಲೆ ಅಡುಗೆ: ಅನಂತಕೃಷ್ಣ ಭಟ್‌ ಕೆ.ವಿ., ಪಯ: ಕೇಶವ ಭಟ್‌, ಭಕ್ಷ್ಯ: ರಮೇಶ್‌ ಭಟ್‌, ಉರುಳಿ ನೈವೇದ್ಯ: ಪವನ್‌ ಭಟ್‌ ಚೌಕಿ, ಚಂದ್ರಶಾಲೆ ಪುರಾಣ: ಬಿ.ಗೋಪಾಲಕೃಷ್ಣ ಉಪಾಧ್ಯಾಯ, ಭಾಗವತಿಕೆ: ನಾರಾಯಣ ಸರಳಾಯ, ಮೇಸ್ತ್ರಿ: ಪದ್ಮನಾಭ ಶೇರಿಗಾರ್‌.

ಕೃತಿ ಬಿಡುಗಡೆ : ದ್ವೈವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವದ ಸ್ಮರಣಾರ್ಥ ಪ್ರಕಾಶನಗೊಂಡ ಭಾವಿಸಮೀರ ಶ್ರೀ ವಾದಿರಾಜರ ವಾš¾ಯ ನಿಧಿ ಗ್ರಂಥವನ್ನು ಪರ್ಯಾಯ ದರ್ಬಾರ್‌ನಲ್ಲಿ ಅಷ್ಟಮಠದ ಯತಿಗಳು ಲೋಕಾರ್ಪಣೆ ಮಾಡಿದರು. ಈ ಗ್ರಂಥವು ವಾದಿರಾಜರ ಸಾಹಿತ್ಯಗಳ ಸಾರ ಸಂಗ್ರಹವಾಗಿದ್ದು ಡಾ| ಜಿ.ಕೆ.ನಿಪ್ಪಾಣಿ ಗ್ರಂಥಕರ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next