Advertisement

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

01:50 AM Jan 19, 2022 | Team Udayavani |

ಉಡುಪಿ: ವಿಶಿಷ್ಟವಾದ ಕಾಲಘಟ್ಟದಲ್ಲಿ ಶ್ರೀಕೃಷ್ಣ ಪೂಜಾ ದೀಕ್ಷಿತರಾಗಿ ದ್ದೇವೆ. ವಿಶಿಷ್ಟ ಸಂದರ್ಭ ಯಾವುದು ಎಂದು ನಿಮಗೆಲ್ಲ ಗೊತ್ತೇ ಇದೆ. ಇದಕ್ಕೆ ನನ್ನದೇ ಆದ ಪರಿಹಾರವನ್ನು ಕಂಡುಕೊಂಡಿದ್ದೇನೆ. ದೇಶದ ಕಲ್ಯಾಣಕ್ಕಾಗಿ ನಾವು ಕೇಳುವುದಕ್ಕಿಂತ ಭಗವಂತನ ಏಕಾಂತ ಭಕ್ತರಾದ ಮಧ್ವಾಚಾರ್ಯರು ಮತ್ತು ವಾದಿರಾಜರ ಮೂಲಕ ಕೇಳಿದರೆ ಅದು ಭಗವಂತನಿಗೆ ಕೇಳಿಸುತ್ತದೆ. ಈ ದಾರಿಯಲ್ಲಿ ಸಮಸ್ಯೆ ಸದ್ಯದಲ್ಲಿಯೇ ಬಗೆಹರಿಯುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದು ಶ್ರೀಕೃಷ್ಣ ಮಠದ ನೂತನ ಪರ್ಯಾಯ ಪೀಠಾಧೀಶ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ನುಡಿದರು.

Advertisement

ಮಂಗಳವಾರ ಬೆಳಗ್ಗೆ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ಸಂದೇಶ ನೀಡಿದ ಅವರು, ನಮ್ಮ ಪರ್ಯಾಯ ಅವಧಿಯಲ್ಲಿ ಎಂದೂ ಕೇಳ ಬಾರದು. ತನಗೋಸ್ಕರ ಏನನ್ನೂ ಕೇಳಬಾರದು ಎಂದು ಶಾಸ್ತ್ರ ಹೇಳುತ್ತದೆ. “ನಾನು ಮಾಡುತ್ತೇನೆ’ ಅಂದರೆ ಆಗುವುದಿಲ್ಲ, “ನಾನು’ ಎಂಬ ಭಾವನೆ ಬಂದರೆ ಅಲ್ಲಿಗೆ ಕೆಲಸ ಕೆಟ್ಟಿತು. “ನಾನು’ ಎಂದು ಬಂದರೆ ಆಗ ವ್ಯಾಪಾರಿ ಎಂದರ್ಥವಾಗುತ್ತದೆ. ನಮ್ಮ ಪರವಾಗಿ ನೀವು ಪ್ರಾರ್ಥನೆ ಮಾಡಿ, ನಮಗಾಗಿ ನೀವು ಕೇಳಿ, ನೀವು ನಿಮಗಾಗಿ ಕೇಳುವುದಲ್ಲ ಎಂದು ಮಧ್ವರು, ವಾದಿರಾಜರಿಗೆ ಹೇಳಿದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.

ಮಧ್ವರು, ವಾದಿರಾಜರು ಈಗಲೂ ಅವರ ಶಾಸ್ತ್ರಗ್ರಂಥಗಳ ಮೂಲಕ ಇದ್ದಾರೆ. ಅದರ ಸಂಕೇತವಾಗಿ ವಾದಿರಾಜರ ಕುರಿತ ಗ್ರಂಥವನ್ನು ಹೊರತರಲಾಗಿದೆ ಎಂದರು. ಕೊರೊನಾ ಕಾಲಘಟ್ಟದಲ್ಲಿ ಜನರು ನೀಡಿದ ಸಹಕಾರ ನೋಡಿ ನಮಗೆ ಆಶ್ಚರ್ಯವಾಗುತ್ತಿದೆ. ಸಹಕಾರ ಕೊಟ್ಟವರಿಗೆ ನಾವೇನು ಕೊಡಲು ಸಾಧ್ಯ? ನಾವೇನೋ ಹರಿಗುರುಗಳನ್ನು ನಂಬಿಕೊಂಡು ಬಂದಿದ್ದೇವೆಯಷ್ಟೆ. ಇದನ್ನು ಉಳಿಸಿಕೊಳ್ಳುವ ಶಕ್ತಿ ಬರಬೇಕು. ನಿಮ್ಮೆಲ್ಲರ ಅಭಿಲಾಷೆ ಈಡೇರಿಸಲು ಮಧ್ವರು-ವಾದಿರಾಜರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next