Advertisement

ಗೌತಮ್‌ ಭಾವೋದ್ವೇಗ

11:10 PM Feb 19, 2021 | Team Udayavani |

“ಆಗಷ್ಟೇ ಅಹ್ಮದಾಬಾದ್‌ ತಲುಪಿದ್ದೆವು. ಟಿವಿ ಹಾಕಿದಾಗ ಹರಾಜಿನಲ್ಲಿ ನನ್ನ ಹೆಸರು ಬಂದಿತ್ತು. ದುಬಾರಿ ಮೊತ್ತಕ್ಕೆ ಮಾರಾಟವಾಗುತ್ತಿದ್ದಂತೆ ನಾನು ಭಾವೋದ್ವೇಗಕ್ಕೆ ಒಳಗಾದೆ. ರೋಹಿತ್‌ ಮತ್ತು ಪಾಂಡ್ಯ ನನ್ನ ರೂಮ್‌ನ ಬಾಗಿಲು ಬಡಿಯುತ್ತಿದ್ದರು. ದೊಡ್ಡ ಮೊತ್ತಕ್ಕೆ ಮಾರಾಟಗೊಂಡ ನನ್ನನ್ನು ಇಬ್ಬರೂ ಬಲವಾಗಿ ತಬ್ಬಿಕೊಂಡರು. ಮನೆಯವರ ಸಂಭ್ರಮಕ್ಕಂತೂ ಪಾರವೇ ಇಲ್ಲ…’ ಎಂದು ಪ್ರತಿಕ್ರಿಯಿಸಿದವರು ಕರ್ನಾಟಕದ ಲೆಗ್‌ಸ್ಪಿನ್‌ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌.

Advertisement

ಕೇವಲ 20 ಲಕ್ಷ ರೂ. ಮೂಲ ಬೆಲೆಯ ಕೆ. ಗೌತಮ್‌ 9.25 ಕೋಟಿ ರೂ.ಗಳ ದಾಖಲೆ ಮೊತ್ತಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾಲಾಗಿದ್ದರು. ಹರಾಜಿನಲ್ಲಿ ಭಾರೀ ಮೊತ್ತ ಪಡೆದ ಭಾರತೀಯ, ಅದರಲ್ಲೂ “ಅನ್‌ಕ್ಯಾಪ್ಡ್’ ಆಟಗಾರನೆಂಬುದು ಗೌತಮ್‌ ಪಾಲಿನ ಹಿರಿಮೆ.

ಸದ್ಯ ಕೆ. ಗೌತಮ್‌ ನೆಟ್‌ ಬೌಲರ್‌ ಆಗಿ ಟೀಮ್‌ ಇಂಡಿಯಾ ಜತೆ ಇದ್ದಾರೆ. 2018ರಿಂದ ಮೊದಲ್ಗೊಂಡು 3 ಐಪಿಎಲ್‌ ಋತುವಿನಲ್ಲಿ ರಾಜಸ್ಥಾನ್‌ ಮತ್ತು ಪಂಜಾಬ್‌ ತಂಡಗಳನ್ನು ಪ್ರತಿನಿಧಿಸಿದ್ದು, 13 ವಿಕೆಟ್‌ ಉರುಳಿಸುವ ಜತೆಗೆ 186 ರನ್‌ ಮಾಡಿದ್ದಾರೆ.

“ನಾನಿನ್ನು ಧೋನಿ ತಂಡದ ಸದಸ್ಯ. ಅವರನ್ನು ಭೇಟಿಯಾದ ಕೂಡಲೇ, ನನ್ನ ಆಟವನ್ನು ಮುಂದಿನ ಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ ಎಂದು ಕೇಳಲಿದ್ದೇನೆ’ ಎಂಬುದಾಗಿ ಕೆ. ಗೌತಮ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next