ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ರಾಜ ಕೀಯ ಲಾಭಕ್ಕಾಗಿ. ಇದರಿಂದ ರೈತರಿಗೆ ನಷ್ಟವೇ ಹೊರೆತು ಲಾಭವಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಹೇಳಿದರು.
ತಾಲೂಕಿನ ಮೆಣಸಿ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಕನಿಷ್ಠ ರೈತರ ಸಮಸ್ಯೆ ಕೇಳಲು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಸೌಜನ್ಯವಿಲ್ಲ. ಜನರ ಹೊಟ್ಟೆ ತುಂಬು ತ್ತಿರುವುದು ಅಂಬಾನಿ, ಅದಾನಿಯಿಂದಲ್ಲ, ರೈತರು ಬೆಳೆಯುತ್ತಿರುವ ಬೆಳೆಯಿಂದ. ಪ್ರಧಾನಿ ಮೋದಿ ಮೊದಲು ರೈತರ ಸಮಸ್ಯೆ ಕೇಳಬೇಕು. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ಸರ್ಕಾರ ತೆರೆಯಲಿ. ರೈತರಿಗೆ ಬೇಡವಾದ ಜಾನುವಾರುಗಳನ್ನು ಗೋಶಾಲೆಗೆ ಬಿಡುತ್ತಾರೆ. ರೈತರು ಬಿಡುವ ಜಾನುವಾರುಗಳಿಗೆಸರ್ಕಾರವೇ ಹಣ ನೀಡಲಿ. ಈ ಮೂಲಕ ರೈತರ ನೆರವಿಗೆ ಬರಲಿ ನಾವು ಕೂಡ ಸಹಕಾರ ನೀಡು ತ್ತೇವೆ. ರೈತ ಸಮುದಾಯ ಈಗಾಗಲೇ ಐಸಿ ಯುನಲ್ಲಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಹಸುಗಳನ್ನು ಸಾಕಿ ಡೇರಿ ಗಳಿಗೆ ಹಾಲನ್ನು ಹಾಕಿ ಬಡ ರೈತರು ಜೀವನ ನಡೆಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡೇರಿಗಳ ಪರಿಸ್ಥಿತಿಯೂ ಹೇಳತೀರದಂತಾಗುತ್ತದೆ ಎಂದರು.
ಇದನ್ನೂ ಓದಿ:ಸಮಾಜ ಕಲ್ಯಾಣ ವಸತಿ ಯೋಜನೆಗೆ ಐಕಳ ಹರೀಶ್ ಶೆಟ್ಟಿ ಅವರಿಂದ ಶಿಲಾನ್ಯಾಸ
ಕೆಎಂಎಫ್ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ಮಾತನಾಡಿ, ಕೋವಿಡ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಬಮೂಲ್ ವ್ಯಾಪ್ತಿಯಲ್ಲಿ ರೈತರಿಂದ ಖರೀದಿ ಸುವ ಹಾಲಿನ ದರವನ್ನು ಕಡಿತ ಗೊಳಿಸಲಾಗಿತ್ತು. ಇದೀಗ ಬಮೂಲ್ ಚೇತರಿಕೆ ಕಾಣುತ್ತಿದ್ದು ಫೆ.1 ರಿಂದ ಪ್ರತಿ ಲೀಟರ್ ಹಾಲಿಗೆ 2 ರೂ. ಏರಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಮತ್ತಷ್ಟು ಏರಿಕೆ ಮಾಡಲಾಗುವುದು. ರೈತರು ಹೈನುಗಾರಿಕೆ ಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಬಮೂಲ್ ಅವರ ಬೆನ್ನಿಗೆ ನಿಂತಿರುತ್ತದೆ ಎಂದರು. ದೊಡ್ಡ ಬಳ್ಳಾಪುರ ಬಮೂಲ್ ಕಚೇರಿ ಉಪ ವ್ಯವಸ್ಥಾ ಪಕ ಗೋಪಾಲಕೃಷ್ಣ, ಇಓ ಅಶ್ವತ್ಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪುಟ್ಟರಾಜು, ಮುಖಂಡ ರಾಮಕೃಷ್ಣ ಮತ್ತಿತ್ತರಿದ್ದರು.