ಕಾರ್ಕಳ: ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮಚಂದ್ರರ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಮೂರ್ತಿಗೆ ಕಾರ್ಕಳದ ಈದು ಗ್ರಾಮದ ಶಿಲೆ ಕಲ್ಲು ಆಯ್ಕೆಯಾಗಿದೆ. ಈ ಮೂಲಕ ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದ ಹಿರಿಮೆ ಮತ್ತಷ್ಟು ಹೆಚ್ಚಿದೆ.
ಈದು ಗ್ರಾಮದ ತುಂಗಾ ಪೂಜಾರಿ ಯವರ ಮನೆಯಿಂದ ನೆಲ್ಲಿಕಾರು ಶಿಲಾಕಲ್ಲನ್ನು ಬೃಹತ್ ಲಾರಿ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಕಾರ್ಕಳದ ನೆಲ್ಲಿಕಾರು ಶಿಲೆಯು ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣದ ಮೂಲಕ ಮತ್ತೆ ಪಾವಿತ್ರ್ಯತೆ ಪಡೆಯಲಿದೆ.
ಮೂರ್ತಿ ನಿರ್ಮಾಣಕ್ಕೆ ಯೋಗ್ಯ ಕಲ್ಲನ್ನು ಹುಡುವ ಕಾರ್ಯ ಹಲವು ತಿಂಗಳಿಂದ ನಡೆಯುತ್ತಿತ್ತು ಈ ಹಿನ್ನಲೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಖ್ಯಾತ ಶಿಲಾ ತಜ್ಞ ಕುಶೀಪ್ ಬನ್ಸಾಲ್, ಸೇರಿದಂತೆ ಇತರ ತಜ್ಞರ ಜೊತೆಗೂಡಿ ಸ್ಥಳಿಯ ಭಜರಂಗದಳ ಕಾರ್ಯಕರ್ತರು ಕಾರ್ಕಳದ ನೆಲ್ಲಿಕಾರು ಶಿಲೆಯನ್ನು ಪರಿಶೀಲಿಸಿದ್ದರು. ಈ ಶಿಲೆಯು 10 ಟನ್ ತೂಕ, ಅಡಿ ಉದ್ದ,6 ಅಡಿ ಅಗಲ ಮತ್ತು 4 ಅಡಿ ದಪ್ಪವಿದ್ದು ಯೋಗ್ಯ ಎನ್ನುವ ನಿಟ್ಟಿನಲ್ಲಿ ಅಯೋಧ್ಯೆಗೆ ಸಾಗಿಸುವ ಕಾರ್ಯಗಳು ನಡೆದಿವೆ.
ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು ದೇಶದ ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಮಾನಸ್ತಂಭ ಪ್ರತಿಕೃತಿ, ಕವಿ ಮುದ್ದಣ, ಮಿಥುನ ನಾಗ ,ಸೋಮನಾಥ ಪುರದ ದ್ವಾರ, ಗಜಸಿಂಹ,ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರು ಸೇರಿದಂತೆ ಒಟ್ಟು ಹತ್ತು ವಿಗ್ರಹಗಳನ್ನು ಇಡಲಾಗಿದೆ.
ದೆಹಲಿಯ ಗುರುಗಾವ್ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹ, ಅದಲ್ಲದೆ ದೆಹಲಿಯ ಮಹಾವೀರನ ಪ್ರತಿಮೆ, ಗುರುವಾಯೂರಿನ ಶ್ರೀಕೃಷ್ಣ, ಕೆನಡಾ ಟೊರಂಟೊದಲ್ಲಿ ದೇವೇಂದ್ರ ದೇವರ ವಿಗ್ರಹ,ಜಪಾನ್ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್ ಮ್ಯೂಸಿಯಂನಲ್ಲಿರುವ ಕೃಷ್ಣನ ವಿಗ್ರಹ, ಇತ್ತೀಚೆಗೆ ಮಲೇಷಿಯಾದಲ್ಲಿ ದುರ್ಗ ಗುರುವಾರ ಕ್ರೇನ್ ಮೂಲಕ ಮೇಲಕ್ಕೆತ್ತಿ ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸುವ ಕೆಲಸ ಮಾಡಲಾಗಿದೆ. ಗಣ್ಯರ ಸಮ್ಮುಖದಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.