Advertisement

ಕೃಷ್ಣಾ ನದಿಗೆ 2.83 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ : ನದಿ ಮಾರ್ಗದ ಸೇತುವೆಗಳು ಜಲಾವೃತ

01:59 PM Aug 20, 2020 | sudhir |

ನಾರಾಯಣಪುರ: ಆಲಮಟ್ಟಿ ಶಾಸ್ತ್ರಿ ಜಲಾಶಯ ಹಾಗೂ ಮಲಪ್ರಭಾ ನದಿಯಿಂದ ಒಟ್ಟು 2.70 ಲಕ್ಷ ಕ್ಯೂಸೆಕ್‌ ನಷ್ಟು ಬಸವಸಾಗರಕ್ಕೆ ಒಳಹರಿವು ಇದ್ದು, ಬುಧವಾರ ಜಲಾಶಯದ 28 ಕ್ರಸ್ಟಗೇಟ್‌ ಗಳನ್ನು ತೆರೆದು 2.83 ಲಕ್ಷ ಕ್ಯೂಸೆಕ್‌ನಷ್ಟು
ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಹರಿಬಿಡಲಾಗುತ್ತಿದೆ. ಕಳೆದ ಅ.6ರಿಂದಲೂ ಬಸವಸಾಗರದಿಂದ ನಿರಂತರವಾಗಿ
ನದಿಗೆ ಗರಿಷ್ಠ ಪ್ರಮಾಣದ ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಪ್ರಹಾದ ಬೀತಿ ಉಂಟಾಗಿದ್ದು ನದಿ ಮಾರ್ಗವಾಗಿ ಬರುವ ಸೇತುವೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

Advertisement

ಅಣೆಕಟ್ಟು ಅಧಿಕಾರಿಗಳ ಮಾಹಿತಿಯಂತೆ ಪ್ರಸ್ತುತ ಜಲಾಶಯಕ್ಕೆ ಎಷ್ಟು ಒಳಹರಿವಿನ ಪ್ರಮಾಣವಿದೆಯೋ ಅಷ್ಟೆ ಪ್ರಮಾಣದ ಹೊರಹರಿವನ್ನು ನದಿಗೆ ಹರಿಬಿಡಲಾಗುತ್ತಿದೆ. ಕೃಷ್ಣಾ ನದಿ ಹಾಗೂ ಉಪನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹಂತ ಹಂತವಾಗಿ ಏರಿಕೆ ಕಂಡು ಬರುತಿದ್ದು, ಸದ್ಯ ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ 2.37 ಲಕ್ಷ ಕ್ಯೂಸೆಕ್‌ ನಷ್ಟು ಒಳಹರಿವು ಹರಿದು ಬರುತ್ತಿದೆ.

ಹೊರ ಹರಿವು (ಬಸವಸಾಗರಕ್ಕೆ) 2.50 ಲಕ್ಷ ಕ್ಯೂಸೆಕ್‌ ಇದೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ 6 ಗಂಟೆಯ
ಮಾಹಿತಿಯಂತೆ ಬಸವಸಾಗರ ಜಲಾಶಯ ಗರಿಷ್ಠ ಮಟ್ಟದಲ್ಲಿ 489.86 ಮೀಟರ್‌ಗೆ ನೀರು ಬಂದು ತಲುಪಿದ್ದು, 23.49 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ತಿಳಿದು ಬಂದಿದೆ.

ಜಲಾಶಯದಲ್ಲೆ ಬೀಡು ಬಿಟ್ಟ ಅಧಿಕಾರಿಗಳು: ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಗಳಿಗೆ ಅಡ್ಡಲಾಗಿ
ನಿರ್ಮಿಸಲಾದ ಅಣೆಕಟ್ಟುಗಳಲ್ಲಿ ಕರ್ತವ್ಯ ನಿರ್ವಹಿಸುವುದು ಅ ಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಹಿರಿಯ,
ಕಿರಿಯ ಅ ಧಿಕಾರಿಗಳು ಅಣೆಕಟ್ಟಿನಲ್ಲೆ ಬೀಡು ಬಿಟ್ಟಿದ್ದಾರೆ. ಇಲ್ಲಿನ ಬಸವಸಾಗರ ಜಲಾಶಯಕ್ಕೆ ದಿನದ 24 ಗಂಟೆಯೂ
ಸತತ ಒಳಹರಿವು ಹರಿದು ಬರುತ್ತಿದೆ. ಆ ನೀರನ್ನು ಜಲಾಶಯದ ಕ್ರಸ್ಟಗೇಟ್‌ಗಳ ಮೂಲಕ ನದಿಗೆ ಹರಿಬಿಡುವ ಪ್ರಕ್ರಿಯೆ
ನಿರಂತರ ನಡೆಯುತ್ತಿದೆ. ಇದನ್ನು ಸಮರ್ಥವಾಗಿ ನಿಭಾಯಿಸಲೆಂದು ಕೃಷ್ಣಾ ಭಾಗ್ಯ ಜಲ ನಿಗಮವು ದಿನದ  24 ಗಂಟೆಗಳಲ್ಲಿ 12 ಗಂಟೆಗಳಿಗೆ 2 ಪಾಳೆಯದಲ್ಲಿ ಅಭಿಯಂತರರು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಹಗಲು ರಾತ್ರಿ ಎನ್ನದೆ ಪ್ರವಾಹದ ನಿರ್ವಹಣೆ ಕಾರ್ಯ ನಿಭಾಯಿಸುತ್ತಿದ್ದಾರೆ.

ಪ್ರವಾಹದ ಮುನ್ಸೂಚನೆ ವಿನಮಯಕ್ಕೆ ವಾಟ್ಸ್‌ ಆ್ಯಫ್‌ ಗ್ರೂಪ್‌ ರಚಿಸಿಕೊಂಡಿದ್ದು, ಉಭಯ ಜಲಾಶಯಗಳ ಕೆಬಿಜೆಎನ್‌
ಎಲ್‌ ಹಿರಿಯ ಅಧಿಕಾರಿಗಳು, ಯಾದಗಿರಿ, ರಾಯಚೂರು ಜಿಲ್ಲಾಡಳಿತ, ಪೊಲೀಸ್‌, ಕಂದಾಯ ಇಲಾಖೆ, ಇತರೆ
ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರೂಪ್‌ ಸದಸ್ಯರಿದ್ದಾರೆ. ಅವರಿಗೆ ಪ್ರತಿ ಗಂಟೆಗೊಮ್ಮೆ ನದಿಗೆ ನೀರು ಹರಿಸುವ
ಸಂದೇಶ ತಲುಪಿಸಲಾಗುತ್ತಿದೆ ಎಂದು ಅಣೆಕಟ್ಟು ಉಪ ವಿಭಾಗದ ಎಇಇಟಿ.ಎನ್‌. ರಾಮಚಂದ್ರ ಪತ್ರಿಕೆಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next