Advertisement
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಕೃಷ್ಣಾ, ಭೀಮಾ ನದಿಗಳ ಪ್ರವಾಹ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಮಹಾರಾಷ್ಟ್ರ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ಉಭಯ ರಾಜ್ಯಗಳು ಕ್ಷಣ ಕ್ಷಣಕ್ಕೂ ಮಳೆ ಪ್ರಮಾಣ, ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೆಗೆ ತೀರ್ಮಾನ ಮಾಡಲಾಯಿತು. ಬೇಸಿಗೆ ಕಾಲದಲ್ಲಿ 4 ಟಿಎಂಸಿ ನೀರು ಪಡೆದು, ಮಳೆಗಾಲದಲ್ಲಿ 4 ಟಿಎಂಸಿ ನೀರು ಬಿಡುಗಡೆ ಮಾಡಲು ಚರ್ಚೆ ಮಾಡಲಾಗಿದೆ ಎಂದರು.
Related Articles
Advertisement
ಕೃಷ್ಣಾ ನದಿ ನೀರು ಹಂಚಿಕೆ ವಿವಾದ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಇರುವ ಪ್ರಕರಣದ ಕುರಿತು ಜಂಟಿಯಾಗಿ ಹೋರಾಟಕ್ಕೆ ನಿರ್ಧಾರ ಮಾಡಿದ್ದೇವೆ ಎಂದರು.
ಬಳಿಕ ಮಾತನಾಡಿದ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರವಾಹ ಬಂದಾಗ ಒಂದೇ ಸಲ ನೀರು ಬಿಡಬೇಡಿ ಎಂದು ಕೇಳಿಕೊಳ್ಳಲಾಗಿದೆ. ಅದಕ್ಕೆ ಮಹಾರಾಷ್ಟ್ರ ಸಚಿವರು ಒಪ್ಪಿಕೊಂಡಿದ್ದಾರೆ. ದೂದ್ ಗಂಗಾ ಯೋಜನೆಗೆ ಮಹಾರಾಷ್ಟ್ರ ಪಾಲನ್ನು ನೀಡಲು ಒಪ್ಪಿಕೊಂಡಿದ್ದಾರೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗುತ್ತಿತ್ತು ,ಅದಕ್ಕೆ ನಾಲ್ಕು ಟಿಎಂಸಿ ನೀರು ಕೊಡುಕೊಳ್ಳುವಿಕೆ ಬಗ್ಗೆ ಒಪ್ಪಿಗೆ ಆಗಿದೆ ಎಂದು ಹೇಳಿದರು.