ಮೂಲತಃ ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಇಡಗುಂಜಿಯವರಾದ ಕೃಷ್ಣ ನಾಯ್ಕರಿಗೆ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ. ಮುಂದೆ ಕುವೆಂಪು ಕಾಲೇಜಿನಲ್ಲಿ ಬಿ.ಎಫ್.ಎ. ಪದವಿ ಗಳಿಸಿದ ಇವರು ಪ್ರಸಿದ್ಧ ಶಿಲ್ಪಕಲಾವಿದ ಗಣೇಶ್ ಎಲ್. ಭಟ್‌ರ ಬಳಿ ವಿದ್ಯಾಭ್ಯಾಸ ಮುಂದುವರಿಸಿದರು. ಫೈಬರ್ ಬಳಸಿ ಶಿಲ್ಪಗಳನ್ನು ನಿರ್ಮಿಸುವುದರಲ್ಲಿ ಇವರು ನಿಪುಣರು.
Advertisement
ಬುದ್ಧನ ಚಿಂತನೆಗಳೆಡೆಗೆ ಆಕರ್ಷಿತರಾಗಿರುವ ಕೃಷ್ಣ ನಾಯ್ಕರು, ಬುದ್ಧನ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಕನ್ನಡ ಭವನದ ಮುಂದಿನ ಧ್ಯಾನಾಸಕ್ತ ಬುದ್ಧ, ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ಮುಂಭಾಗದಲ್ಲಿರುವ ಬುದ್ಧ ಹಾಗೂ ಬಸವ, ಮೈಸೂರಿನ ಭೋಗಾದಿಯಲ್ಲಿ, ಬಳಕೂರಿನ ನೀಲಗೋಡ್ ದೇವಾಲಯ ಮುಂತಾದ ಶಿಲ್ಪಗಳಿಗೆ ಜೀವ ಕೊಟ್ಟವರು ಇವರೇ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ಕಲಾಪ್ರದರ್ಶನದಲ್ಲಿ ಅವರ ಕಲಾನೈಪುಣ್ಯವನ್ನು ಸವಿಯಬಹುದು.
ಯಾವಾಗ?: ಸೆಪ್ಟೆಂಬರ್ 1-5, ಬೆಳಗ್ಗೆ 10-7 ಬಳಕೂರು ವಿ.ಎಸ್.ನಾಯಕ