ಟೋಕಿಯೊ: ಈ ಬಾರಿಯ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಪಟುಗಳು ಇತಿಹಾಸ ನಿರ್ಮಿಸುತ್ತಿದ್ದಾರೆ. ಕೂಟದ ಕೊನೆಯ ದಿನವಾದ ಇಂದು ಭಾರತಕ್ಕೆ ಬಂಗಾರ ಬೇಟೆ ಮುಂದುವರೆದಿದೆ.
ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ ಎಚ್ 6 ವಿಭಾಗದಲ್ಲಿ ಭಾರತದ ಕೃಷ್ಣ ನಾಗರ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಹಾಂಗ್ ಕಾಂಗ್ ನ ಚು ಮನ್ ಕೈ ಅವರನ್ನು ಸೋಲಿಸಿದ ಕೃಷ್ಣ ನಾಗರ್ ಭಾರತಕ್ಕೆ ಐದನೇ ಚಿನ್ನದ ಪದಕ ತಂದಿತ್ತರು.
ಇದನ್ನೂ ಓದಿ:ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಗೆದ್ದ ಜಿಲ್ಲಾಧಿಕಾರಿ: ಹಾಸನದ ಸುಹಾಸ್ ಕಥೆಯೇ ರೋಚಕ
43 ನಿಮಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಕೃಷ್ಣ ಅವರು ಎದುರಾಳಿಯ ವಿರುದ್ಧ 21-17, 16-21, 21-17 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು.
ಇಂದು ಮುಂಜಾನೆ ನಡೆದ ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ಎಲ್ 4 ವಿಭಾಗದ ಫೈನಲ್ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಸೋತರೂ ಬೆಳ್ಳಿ ಪದಕ ಗೆದ್ದರು. ಹಾಸನದ ಸುಹಾಸ್ ಅವರು ನೋಯ್ಡಾದಲ್ಲಿ ಜಿಲ್ಲಾಧಿಕಾರಿಯಾಗಿದ್ದು, ಪ್ಯಾರಾಲಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ದಾಖಲೆ ಬರೆದರು.
ಇದರೊಂದಿಗೆ ಭಾರತ ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ 19ನೇ ಪದಕ ಗೆದ್ದುಕೊಂಡಿತು. ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಭಾರತದ ಕ್ರೀಡಾಪುಟಗಳು ಗೆದ್ದುಕೊಂಡಿದ್ದಾರೆ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದೆ.