Advertisement
ಉಡುಪಿಯಿಂದ ದೂರದಲ್ಲಿರುವ ಅಮೆರಿಕ, ಇಲ್ಲಿನ ಪೂರ್ವ ಭಾಗದ ನ್ಯೂಜೆರ್ಸಿಯಲ್ಲಿ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ 1008 ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು 2002 ಡಿಸೆಂಬರ್‌ನಲ್ಲಿ ಶ್ರೀಕೃಷ್ಣ ವೃಂದಾವನವನ್ನು ಸ್ಥಾಪಿಸಿದರು. ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನದಲ್ಲಿ ಸಹ ಶ್ರೀ ಕೃಷ್ಣ ಜನ್ಮ ಜಯಂತಿಯನ್ನು ಆಗಸ್ಟ್ 26ರಂದು ಭವ್ಯವಾಗಿ ಆಚರಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪ್ರಾತಃ ಪೂಜೆಯಿಂದ ಆರಂಭವಾಗಿ ಮಹಾಪೂಜೆಯ ಅನಂತರ ವೇದಪಾರಾಯಣವನ್ನು ಮಾಡಲಾಗುತ್ತದೆ. ಮಧ್ಯಾಹ್ನ ಮುಂದುವರೆದು ಗೀತಾ ಪಾರಾಯಣ ನಡೆಯುತ್ತದೆ. ಸಂಜೆ ಮತ್ತೂಮ್ಮೆ ಪೂಜೆಯ ಅನಂತರ ಅನೇಕ ವಾದ್ಯಗೋಷ್ಠಿಗಳ ಸಂಗೀತ ಕಾರ್ಯಕ್ರಮಗಳನ್ನು ಭಕ್ತರು ಆನಂದಿಸಬಹುದು. ಹಾಗೆಯೇ ಭಜನೆ ಸಹ ನಿರಂತರವಾಗಿ ಮುಂದುವರೆದು ಪಂಚಾಮೃತ ಅಭಿಷೇಕದೊಂದಿಗೆ ಮಹಾ ಪೂಜೆಯು ಸಹ ಆಗುತ್ತದೆ.
Related Articles
Advertisement
ನ್ಯೂಜೆರ್ಸಿಯ ಶ್ರೀಕೃಷ್ಣ ವೃಂದಾವನಶ್ರೀಕೃಷ್ಣ ವೃಂದಾವನವು ಸುಜ್ಞಾನ ಧಾರ್ಮಿಕ ಮತ್ತು ಧಾತೃತ್ವ ಫೌಂಡೇಶನ್ (SRCF) ಗೆ ಸಂಬಂಧಪಟ್ಟಿದೆ. 2009ರ ಜನವರಿ ತನಕ, ಈ ಸಂಸ್ಥೆ ಪಾರ್ಲಿನ್‌ನ ದ್ವಾರಕಾದೀಶ ದೇವಾಲಯ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿತು. 2009ರ ಜನವರಿಯಲ್ಲಿ ಶ್ರೀಕೃಷ್ಣ ವೃಂದಾವನವು 215ಮೇ ಸ್ಟ್ರೀಟ್, ಎಡಿಸನ್, NJನಲ್ಲಿ ತನ್ನ ಹೊಸ ಶಾಶ್ವತ ಭವ್ಯ ದೇವಾಲಯವನ್ನು ಕಂಡುಕೊಂಡಿತು. ಈ ಶಾಶ್ವತ ಸ್ಥಳವು ದಕ್ಷಿಣ ಎಡಿಸನ್‌ನಲ್ಲಿರುವ 3.5 ಎಕ್ರೆ ವಿಸ್ತೀರ್ಣದಲ್ಲಿದೆ ಮತ್ತು ಸುಮಾರು 15,000 ಚದರ ಅಡಿಗಳ ನಿರ್ಮಿತ ವಿಸ್ತೀರ್ಣವಿದೆ. ದೇವಾಲಯದ ಆವರಣವು ಪೂಜಾ ಮಂಟಪ, ಪ್ರಸಾದ ಹಾಲ್ ಮತ್ತು ಪೂಜಾರಿಗಳ ವಾಸದ ಕಟ್ಟಡಗಳನ್ನು ಒಳಗೊಂಡಿದೆ. ಇದು ಸುಮಾರು 280 ಜನರನ್ನು ಹೊಂದುವ ಸಾಮರ್ಥ್ಯವಿರುವ ಬಹುಉದ್ದೇಶ ಸಮುದಾಯ ಭವನವನ್ನೂ ಹೊಂದಿದೆ. ವೃಂದಾವನದ ಆಸ್ಥಾನ ದೇವರು ಉಡುಪಿ ಶ್ರೀ ಕೃಷ್ಣ. ಹರಿಸರ್ವೋತ್ತಮತ್ವ-ವಾಯು ಜೀವೋತ್ತಮತ್ವದ ಹಾದಿಯಲ್ಲಿಯೇ, ವೃಂದಾವನದಲ್ಲಿ ಮುಖ್ಯಪ್ರಾಣ, ಅಂದರೆ ಶ್ರೀಹನುಮಾನ್ ರೂಪದ ದೇವರನ್ನು ಪೂಜಿಸಲಾಗುತ್ತಿದೆ. ಈ ಕಲಿಯುಗದಲ್ಲಿ, ಕೋಟ್ಯಾಂತರ ಭಕ್ತರು ಇಲ್ಲಿ ಸ್ಥಾಪಿತ ಮತ್ತು ಪೂಜಿಸಲ್ಪಡುವ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಯ ಮೃತಿಕಾ ಬೃಂದಾವನದ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಪ್ರತೀ ದಿನ ಮೂವರು ದೇವತೆಗಳಿಗೆ ಉಡುಪಿ ಸಂಪ್ರದಾಯದಲ್ಲಿ ವೇದ ಮಂತ್ರಗಳ ಪಠಣದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ, ಅನಂತರ ಅನ್ನದಾನ (ಪ್ರತೀ ದಿನ ಎರಡು ಬಾರಿ) ನಡೆಯುತ್ತದೆ.