Advertisement

ಸರ್ಕಾರದ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ: ಕೃಷ್ಣ ಬೈರೇಗೌಡ

12:51 PM Sep 01, 2020 | Suhan S |

ವಿಜಯಪುರ: “ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ ಮುಖಂಡರು ಕಾರ್ಯಕರ್ತರು ಮಾಡುತ್ತಿದ್ದೇವೆ. ಸಮಾಜ ಸೇವೆ ಜತೆಗೆ ಪಕ್ಷ ಸಂಘಟನೆ ಕಾರ್ಯವನ್ನೂ ಮಾಡಲು ನಮಗೆ ಅವಕಾಶ ಸಿಕ್ಕಿದೆ. ಆದರೆ, ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಣದ ನೆಪದಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುವ ದಂಧೆಗೆ ಇಳಿದಿದೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಆರೋಪಿಸಿದರು.

Advertisement

ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಆರೋಗ್ಯ ಹಸ್ತ ಕಾರ್ಯಕ್ರಮ, ತರಬೇತಿ ಉದ್ಘಾಟನೆಯಲ್ಲಿ ಮಾತನಾಡಿ, ಮೊದಲಿಗೆ ಅತ್ಯಂತ ಕಡಿಮೆ ಸೋಂಕಿತರ ಸಂಖ್ಯೆ ಇದ್ದ ಭಾರತದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳಾಗಲಿ, ಪ್ರಧಾನಿ ಮೋದಿಯವರಾಗಲಿ ಈ ಬಗ್ಗೆ ಯೋಚಿಸುವುದನ್ನು ಬಿಟ್ಟು ತಮ್ಮ ಖಾಸಗಿ ವಿಚಾರಗಳಲ್ಲಿ ತೊಡಗಿಕೊಂಡಿದ್ದಾರೆಂದರು.

ಉದಾಸೀನ ಮಾಡಲ್ಲ:ಕಾಂಗ್ರೆಸ್‌ ಅಷ್ಟು ಸುಲಭವಾಗಿ ಜನರಿಗೆ ಆಗುತ್ತಿ ರುವ ಕಷ್ಟ ನಷ್ಟಗಳನ್ನು ನೋಡುತ್ತಾ ಕುಳಿತುಕೊಳ್ಳುವಷ್ಟು ಉದಾಸೀನರಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವ ಕುಮಾರ್‌ ಅವರ ಸಲಹೆ ಸೂಚನೆಯಂತೆ ತಕ್ಷಣವೇ ರಾಜ್ಯದ ಮೂಲೆ ಮೂಲೆಗಳಲ್ಲೂ ಆರೋಗ್ಯ ಹಸ್ತ ಕಾರ್ಯಕ್ರಮ ಕೈಗೊಂಡಿದೆ. ವೈದ್ಯರ ಮೂಲಕವೇ ಕೊರೊನಾ ವಾರಿಯರ್ಸ್‌ಗಳಾದ ಕಾಂಗ್ರೆಸ್‌ ಕಾರ್ಯ ಕರ್ತರಿಗೆ ತರಬೇತಿ ನೀಡಿ ಕೊರೊನಾ ಗುಣ ಲಕ್ಷಣಗಳನ್ನು ಪತ್ತೆ ಹಚ್ಚುವ ಜನರಲ್ಲಿ ಧೈರ್ಯ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನಿರ್ಲಕ್ಷ್ಯಬೇಡ: ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಕೋವಿಡ್ ನಿಯಂತ್ರಣವಿರಲಿ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಹೀಗಾಗಿ ನಮ್ಮ ಕಾಂಗ್ರೆಸ್‌ ಪಕ್ಷ “ಆರೋಗ್ಯ ಹಸ್ತ’ ಕಾರ್ಯಕ್ರಮ ಹಮ್ಮಿ ಕೊಂಡಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಾಗಲಿ, ಖಾಸಗಿ ಆಸ್ಪತ್ರೆ ಗಳಾಗಲಿ ಕೋವಿಡ್ ರೋಗಿಗಳನ್ನು ಅಥವಾ

ಸತ್ತ ಶವಗಳನ್ನು ಹಸ್ತಾಂತರ ಮಾಡುವಲ್ಲಿ ಬೇವಾಬ್ದಾರಿತನ, ನಿರ್ಲಕ್ಷ್ಯ, ಹೆಣದ ಮೇಲೆ ಹಣ ಮಾಡುವ ನೀಚತನ ತೋರುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಎಂದಿಗೂ ಜನರ ಕಷ್ಟಕ್ಕೆ ಸ್ಪಂದಿಸುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್‌ ಸೇರ್ಪಡೆ: ಕಾರಹಳ್ಳಿ ಗ್ರಾಪಂ ಕಾಂಗ್ರೆಸ್‌ ಮುಖಂಡರಾದ ಆರ್‌.ಜಯರಾಮ್, ಕೆ.ಲಕ್ಷಣಗೌಡ, ಎಸ್‌.ರಾಜಣ್ಣ ಅವರ ಮುಂದಾಳತ್ವದಲ್ಲಿ ಜೆಡಿಎಸ್‌ನ ಕಾರಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪಟಾಲಪ್ಪ, ಅನು ನರಸಿಂಹಮೂರ್ತಿ, ಸದಸ್ಯ ತೈಲಗೆರೆ ಡಿ.ಎಸ್‌. ರಾಜಣ್ಣ, ಕೇಶವ, ನಾರಾಯಣಸ್ವಾಮಿ, ಕುಮಾರ್‌, ಮನೋಜ್‌ ಕುಮಾರ್‌ ಮತ್ತಿತರರು ಜೆಡಿಎಸ್‌ ತೊರೆದು ಕೃಷ್ಣ ಬೈರೇಗೌಡ, ಕಾಂಗ್ರೆಸ್‌ ತಾಲೂಕು ಉಪಾಧ್ಯಕ್ಷ ಶಾಂತಕುಮಾರ್‌ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

Advertisement

ಮಾಜಿ ಸಂಸದ ನಾರಾಯಣಸ್ವಾಮಿ, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಶಾಸಕ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ತಾಲೂಕು ಉಪಾಧ್ಯಕ್ಷ ಶಾಂತಕುಮಾರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜು, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಮಾರುತಿ, ಚಿನ್ನಪ್ಪ, ಲಕ್ಷ್ಮಣಮೂರ್ತಿ, ಶ್ರೀನಿವಾಸಗೌಡ, ಚಂದ್ರಶೇಖರ್‌, ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್‌, ಪುರಸಭೆ ಮಾಜಿ ಅಧ್ಯಕ್ಷ ಎಂ.ಸತೀಶ್‌ ಕುಮಾರ್‌ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next