Advertisement
ಕಳೆದ 3-4 ದಿನಗಳಿಂದ ಕೃಷ್ಣಾ ಹಾಗೂ ಘಟಪ್ರಭಾ ಎರಡು ನದಿಗಳ ನೀರಿನ ಪ್ರಮಾಣ ನದಿಯ ನೀರಿನ ಹರಿವು ಕಡಿಮೆಯಾಗುತ್ತಿದೆ. ಮುಚ್ಚಿಕೊಂಡ ಬಹುತೇಕ ಸೇತುವೆ ಹಾಗೂ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಜಲಾವೃತವಾಗಿರುವ ಕಬ್ಬು ನಾಶವಾಗಿ ರೈತರು ಕಣ್ಣಿರು ಸುರಿಸುವಂತಾಗಿದೆ.
Related Articles
Advertisement
4 ಲಕ್ಷ ಕ್ಯೂಸೆಕ್ಸ್ ದಾಟಿದ್ದ ಕೃಷ್ಣಾ ನದಿ ನೀರು ಇಂದು ಬುಧವಾರ ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ 78 ಸಾವಿರ ಕ್ಯೂಸೆಕ್ಸ್ ವರೆಗೆ ಬಂದು ನಿಂತಿದ್ದು, ಜಲಾಶಯದಿಂದ 1 ಲಕ್ಷ 77 ಸಾವಿರ ಕ್ಯೂಸೆಕ್ಸ್ ನೀರನ್ನು ಮುಂಭಾಗಕ್ಕೆ ಬೀಡಲಾಗುತ್ತಿದೆ. ಹಿಪ್ಪರಗಿ ಜಲಾಶಯದ ನೀರಿನ ಮಟ್ಟ 524.20 ಮೀ ಇದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ ತಿಳಿಸಿದ್ದಾರೆ.
ತಾಲೂಕಿನ ಘಟಪ್ರಭಾ ಪ್ರವಾಹದಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳ ಸಂಪರ್ಕ ಪುನ: ಕಲ್ಪಿಸುವ ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿ, ತೇರದಾಳ-ಹಳಿಂಗಳಿ, ಮದನಮಟ್ಟಿ-ಅಸ್ಕಿ, ರಬಕವಿ-ಮದನಮಟ್ಟಿ-ಹಳಿಂಗಳಿ ರಸ್ತೆ, ಕುಲಹಳ್ಳಿ ಹಿಪ್ಪರಗಿ ತೋಟದರಸ್ತೆ, ಕುಲಹಳ್ಳಿ -ಗೊಂಬಿಗುಡ್ಡ -ಅಸ್ಕಿ ರಸ್ತೆಗಳು ಹಾಗೂ ರಬಕವಿ ಬನಹಟ್ಟಿ ಜಾಕವೆಲ್ಗೆ ಹೋಗುವ ರಸ್ತೆ ಕೂಡಾ ಸಂಚಾರಕ್ಕೆ ಮುಕ್ತವಾಗಿವೆ. ಇದರಿಂದ ಸಾರ್ವಜನಿಕರಿಗೆ ಮತಷ್ಟು ಅನುಕೂಲವಾಗಿದೆ.
– ಕಿರಣ ಶ್ರೀಶೈಲ ಆಳಗಿ