Advertisement

ಕೃಷ್ಣ  ಕ್ರಿಯಾಶೀಲ ರಾಜಕಾರಣಿಯಲ್ಲ: ಕಾಗೋಡು

03:45 AM Feb 03, 2017 | Harsha Rao |

ಉದಯವಾಣಿ ದೆಹಲಿ ಪ್ರತಿನಿಧಿ: ಕಾಂಗ್ರೆಸ್‌ ತೊರೆದ ಮಾಜಿ ಸಿಎಂ ಎಸ್‌.ಎಂ. ಕೃಷ್ಣ  ನಡೆಯನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪತೀಕ್ಷ್ಣ ಪದಗಳಲ್ಲಿ ಖಂಡಿಸಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅವರಿಗೆ ಇನ್ನೇನಾದರೂ (ಸ್ಥಾನಮಾನ) ಕೊಡಲು ಬಾಕಿಯಿದೆಯಾ? ರಾಜಕೀಯ ವ್ಯವಹಾರ ಅಲ್ಲ. ಪಕ್ಷದ ತತ್ವ ಸಿದ್ಧಾಂತ, ಕಾರ್ಯಕ್ರಮಗಳಿಗೆ ಹೊಂದಿಕೊಂಡು ಇರಬೇಕು. ಅಧಿಕಾರ ಬರುತ್ತೆ, ಹೋಗುತ್ತೆ. ಕೃಷ್ಣ ಅವರಿಗೆ ನೀಡಿದಷ್ಟು ಸ್ಥಾನಮಾನ ದಕ್ಷಿಣ ಭಾರತದ ಯಾವುದೇ ರಾಜಕಾರಣಿಗೆ ಸಿಕ್ಕಿಲ್ಲ ಎಂದು ಕುಟುಕಿದ್ದಾರೆ.

ರಾಜಕೀಯದಲ್ಲಿ ಹುದ್ದೆ ಬೇಕಿದ್ದರೆ ಪ್ರವಾಸ ಮಾಡಬೇಕು. ಕಾರ್ಯಕರ್ತರನ್ನು ಮಾತನಾಡಿಸಬೇಕು. ಹೋರಾಟ ಮಾಡಬೇಕು. ಆದರೆ ಕೃಷ್ಣ ಮಂಕಾಗಿದ್ದರು. ಅವರು ಸ್ವಲ್ಪ$ಸಕ್ರಿಯರಾಗಿದ್ದರೆ ಪಕ್ಷದ ನಾಯಕತ್ವವನ್ನು ಪಡೆಯಬಹುದಿತ್ತು. ಕೃಷ್ಣ ಬುದ್ಧಿವಂತ, ವಿಚಾರವಂತ ಆದರೆ ಕ್ರಿಯಾಶೀಲ ರಾಜಕಾರಣ ಮಾಡಿದವರಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು.

ಪೂಜಾರಿ ವರ್ತನೆ ಸಂಸ್ಕೃತಿಯಲ್ಲ
ಜನಾರ್ದನ ಪೂಜಾರಿ ಅವರಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಅವರಿಗೆ ಅತೃಪ್ತಿಯಿದ್ದರೆ ಹೈಕಮಾಂಡ್‌ಗೆ ಬಂದು ಹೇಳಬೇಕು. ಆದರೆ ಅವರು ಈ ರೀತಿ ಮಾಡುತ್ತಿರುವುದು ಸಂಸ್ಕೃತಿಯಲ್ಲ. ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದರು.
——
ಬಿಜೆಪಿಗೆ ನೈತಿಕತೆಯಿಲ್ಲ: ಭೈರೇಗೌಡ
ಉದಯವಾಣಿ ದೆಹಲಿ ಪ್ರತಿನಿಧಿ:
 ಕೃಷ್ಣ ಅವರನ್ನು ಕಾಂಗ್ರೆಸ್‌ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಟೀಕಿಸುತ್ತಾ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ಬಿಜೆಪಿ ಮುಂದಾಗಿರುವುದು ಸರಿಯಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರಲ್ಲಿ ವಾಜಪೇಯಿಗಿಂತಲೂ ಪ್ರಧಾನ ಭೂಮಿಕೆ ನಿಭಾಯಿಸಿದ್ದ  ಎಲ್‌.ಕೆ. ಅಡ್ವಾಣಿ ಅವರನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ. ಇವತ್ತು ಬಿಜೆಪಿ ಈ ಹಂತಕ್ಕೆ ಬೆಳೆದಿದ್ದರೆ ಅದಕ್ಕೆ ಅಡ್ವಾಣಿ  ಕೊಡುಗೆ ಮಹತ್ವದ್ದು. ಆದರೆ ಬಿಜೆಪಿ  ಅಡ್ವಾಣಿ ಅವರಿಗೇ ಗೌರವ ಕೊಟ್ಟಿಲ್ಲ. ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next