Advertisement

ಬಿಡುಗಡೆಯಾಗಲಿದೆ ‘ಬ್ಲಾಂಕ್‌’ ಸಾಂಗ್‌!

01:55 PM Dec 13, 2021 | Team Udayavani |

ಎನ್‌. ಪಿ. ಮಂಜುನಾಥ್‌ ಪ್ರಸನ್ನ ಅವರು ನಿರ್ಮಿಸಿರುವ “ಬ್ಲಾಂಕ್‌’ ಚಿತ್ರಕ್ಕಾಗಿ ಗಾಯಕ ವಿಜಯ್‌ ಪ್ರಕಾಶ್‌ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್‌ ಹಾಡಿರುವ ಹಾಡು ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

Advertisement

ಚಿತ್ರಕ್ಕೆ ಶ್ರೀಶಾಸ್ತ ಸಂಗೀತ ನೀಡಿದ್ದಾರೆ. ಎಸ್‌. ಜಯ್‌ ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ:ಪಿಆರ್‌ಕೆಯನ್ನು ಅಶ್ವಿ‌ನಿ ನೋಡಿಕೊಳ್ಳುತ್ತಾರೆ…: ರಾಘಣ್ಣ ಮಾತು

ಎಸ್‌. ಜಯ್, ಅಂಬರೀಶ್‌ ಪತ್ತಾರ್‌ ಹಾಗೂ ಶ್ರೀಕಾಂತ್‌ ಆಂಜಲ್‌ ಸಂಭಾಷಣೆ ಬರೆದಿದ್ದಾರೆ. ಜೆ.ಪಿ.ಮ್ಯಾನ್‌ ಛಾಯಾಗ್ರಹಣ, ಅಶೋಕ್‌ ಸಾಹಸ ನಿರ್ದೇಶನ ಹಾಗೂ ವಿಜಯ್‌ ಅವರ ನೃತ್ಯ ನಿರ್ದೇಶನ “ಬ್ಲಾಂಕ್‌’ ಚಿತ್ರಕ್ಕಿದೆ.

ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಪ್ರಶಾಂತ್‌ ಸಿದ್ದಿ, ಸುಚೇಂದ್ರ ಪ್ರಸಾದ್‌, ಭರತ್‌ ಹಾಸನ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next