Advertisement

ಕೃಷಿಕರ ಹಬ್ಬಕ್ಕೆ ಸಿದ್ಧಗೊಳ್ಳುತ್ತಿದೆ ಮೂಲ್ಕಿ : 3 ದಿನಗಳ ಕಾಲ ನಡೆಯುವ ಬೃಹತ್‌ ಸಮ್ಮೇಳನ

01:02 PM Mar 10, 2022 | Team Udayavani |

ಮೂಲ್ಕಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕೊಲಾ°ಡು ಬಳಿಯ ವಿಶಾಲ ಮೈದಾನದಲ್ಲಿ ಮಾ. 11 ರಿಂದ 13ರ ವರೆಗೆ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಬೃಹತ್‌ ಕೃಷಿ ಮೇಳ ಕೃಷಿಸಿರಿ -2022 ಕಾರ್ಯ ಕ್ರಮದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

Advertisement

ಬೃಹತ್‌ ವೇದಿಕೆ ನಿರ್ಮಾಣ
ಸಮ್ಮೇಳನಕ್ಕಾಗಿ ಸುಮಾರು 12 ಎಕ್ರೆ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿ ದೆ. ಸಾವಿರರಾರು ಮಂದಿ ಭಾಗವಹಿ ಸುವ ನಿರೀಕ್ಷೆಯಿದ್ದು, ಬೃಹತ್‌ ವೇದಿಕೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಉಳಿದ ಕಾರ್ಯಗಳು ಬಿರುಸಿನಿಂದ ಸಾಗಿವೆ.

ಮಣ್ಣು ಪರೀಕ್ಷೆ ಗೆ ಅವಕಾಶ
ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಫ‌ಲಪುಷ್ಪ ಪ್ರದರ್ಶನ, ಎಲ್ಲ ವರ್ಗಗಳ ಕುಲ-ಕಸುಬಿನ ಮತ್ತು ಗುಡಿ ಕೈಗಾರಿಕೆಗಳ ಪ್ರದರ್ಶನ, ಮಾರಾಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತರಕಾರಿ, ಹಣ್ಣು -ಹಂಪಲುಗಳ ಮಾರಾಟ, ವಿಷ ಮುಕ್ತ ಆಹಾರ ವಸ್ತುಗಳ ಮಾಹಿತಿ, ಗೋಪೂಜೆ, ತೋಟದ ಮಣ್ಣು ತಂದಲ್ಲಿ ಮಣ್ಣು ಪರೀಕ್ಷೆ ಮಾಡಿ ಸಲು ಅವಕಾಶ ಮಾಡಿ ಕೊಡಲಾಗಿದೆ.

3 ದಿನಗಳ ಸಮ್ಮೇಳನದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು, ಕೃಷಿ ತಜ್ಞರು, ಸಂಪನ್ಮೂಲ ವ್ಯಕ್ತಿಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಕೃಷಿ ಕುರಿತು ಚಿಂತನ-ಮಂಥನ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ವಿಚಾರಗೋಷ್ಠಿ, ಚರ್ಚೆಗಳು ಮತ್ತು ಇಲಾಖೆಗಳ ಮೂಲಕ ಮಾಹಿತಿ ಸವಲತ್ತುಗಳ ಅರ್ಜಿ ಸ್ವೀಕಾರ, ಮಂಜೂರಾತಿ ಹಾಗೂ ಫಲಾನುಭವಿಗಳಿಗೆ ವಿತರಣೆ ನಡೆಯಲಿವೆ. ಮಂಗಳೂರು ವಿ.ವಿ.ಯ ಸಂಯೋಜನೆಯಲ್ಲಿ ಪಾರಂಪರಿಕ ಗ್ರಾಮ ನಿರ್ಮಾಣ ಈಗಾಗಲೇ ಇಲ್ಲಿರುವ ಕರ್ಮಾರ್‌ ಹಾಡಿನೊಳಗೆ ಬಹು ಸುಂದರವಾಗಿ ಮೂಡಿಬಂದಿದೆ. ಕೃಷಿಕರ ಸವಲತ್ತುಗಳಿಗಾಗಿ ಡಿಜಿಟಲ್‌ ನೋಂದಣಿಗೆ ಅವಕಾಶ ಇದ್ದು, ಸೂಕ್ತ ದಾಖಲೆ ನೀಡಿದ್ದಲ್ಲಿ ನೋಂದಣಿ ಮಾಡಬಹುದಾಗಿದೆ.
ಸರಕಾರದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯು ಮೇಳದಲ್ಲಿ ಸಂಪೂರ್ಣವಾಗಿ ತನ್ನ ಕಾರ್ಯಕ್ರಮಗಳನ್ನು ರೈತರ ಅಭಿ ವೃದ್ಧಿಗಾಗಿ ವಿನಿಯೋಗಿಸಲಿದೆ.

Advertisement

6 ಎಕ್ರೆ ಜಾಗದಲಿ ಪಾರ್ಕಿಂಗ್‌ ವ್ಯವಸ್ಥೆ
ರಾಜ್ಯ ಸಮ್ಮೇಳನದಲ್ಲಿ ಬರುವ ವಾಹನಗಳ ನಿಲುಗಡೆಗಾಗಿ ಸುಮಾರು 6 ಎಕ್ರೆ ಜಾಗದಲ್ಲಿ 4 ವಿಭಾಗಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಯಾರಿ ಗಾಗಿ ಸ್ಕೌಟ್ಸ್‌ ಮತ್ತು ಇತರ ಕಾಲೇಜುಗಳ ವಿದ್ಯಾರ್ಥಿಗಳ 500ಕ್ಕೂ ಅಧಿಕ ಸ್ವಯಂ ಸೇವಕರ ನಿಯೋಜನೆ ಮಾಡ ಲಾಗಿದೆ. ಪೊಲೀಸ್‌ ಇಲಾಖೆಯಿಂದಲೂ ಭದ್ರತೆ, ಟ್ರಾಫಿಕ್‌ ನಿರ್ವಹಣೆಗಾಗಿ ತಂಡವನ್ನು ರಚಿಸಲಾಗಿದೆ.
ಎಲ್ಲ ಬಗೆಯ ಸಿದ್ಧತೆಗಳು ಗುರುವಾರ ಸಂಜೆಯೊಳಗೆ ಪೂರ್ಣಗೊಳ್ಳಲಿವೆ. ಸಮ್ಮೇಳನ ಯಶಸ್ಸಿಗೆ ಎಲ್ಲರ ಸಹ ಕಾ ರಕ್ಕೆ ಸಮಿತಿ ವಿನಂತಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಸರಕಾರದ ವಿವಿಧ ಇಲಾಖೆಗಳ ಸಹಭಾಗಿ ತ್ವದಲ್ಲಿ ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಮೇಲುಸ್ತುವಾರಿಯಲ್ಲಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ ಕೊಲಾ°ಡು ಅವರ ಮುತುವರ್ಜಿಯಲ್ಲಿ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next