Advertisement

ಮೂಲ್ಕಿ ಕೃಷಿ ಹಬ್ಬಕ್ಕೆ ಸಂಭ್ರಮದ ಚಾಲನೆ: ಗಮನಸೆಳೆದ ವಸ್ತು ಪ್ರದರ್ಶನ, ಕೃಷಿ ಪ್ರಾತ್ಯಕ್ಷಿಕೆ

04:37 PM Mar 12, 2022 | Team Udayavani |

ಮೂಲ್ಕಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕೊಲಾ°ಡು ಬಳಿಯ ವಿಶಾಲ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಬೃಹತ್‌ ಕೃಷಿ ಮೇಳ ಕೃಷಿಸಿರಿ -2022ಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರೆಯಿತು.

Advertisement

ಸಮ್ಮೇಳನದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಬಳಿಯ ಮೈದಾನದಲ್ಲಿ ವಿಶಾಲವಾದ ವೇದಿಕೆ ನಿರ್ಮಿಸಲಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಕೃಷಿಕರು, ಆಸಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಎಂ.ಆರ್‌. ಪೂಂಜ ವೇದಿಕೆಯಲ್ಲಿ ಆರಂಭಗೊಂಡ ಕೃಷಿ ಮೇಳಕ್ಕೆ ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ದೀಪ ಬೆಳಗಿಸಿ ಚಾಲನೆ ನೀಡಿ ದರು. ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಸ್ವಾಮೀಜಿ ಅವರು ಪಂಜುರ್ಲಿ ಚಾವಡಿಯಲ್ಲಿ ಉದ್ಘಾಟಿಸಿದರು. ಬಳಿಕ ಅವರು ಗೋಪೂಜೆ ನೆರವೇರಿಸಿ, ಮಳಿಗೆ, ವಸ್ತು ಪ್ರದರ್ಶನ, ಕೃಷಿ ಪ್ರಾತ್ಯಕ್ಷಿಕೆ ನಡೆ ಯುವಲ್ಲಿ ಭೇಟಿ ನೀಡಿ ವೀಕ್ಷಿಸಿದರು.

ಟ್ರಾಫಿಕ್‌ ನಿರ್ವಹಣೆ
ಹೆದ್ದಾರಿ ಬದಿಯಲ್ಲಿ ರಾಜ್ಯ ಸಮ್ಮೇಳನ ಆಯೋಜನೆ ಗೊಂಡಿದ್ದರಿಂದಾಗಿ ಟ್ರಾಫಿಕ್‌ ನಿರ್ವ ಹಣೆ ಸವಾಲಾಗಿದ್ದರೂ ಇದನ್ನು ಮೂಲ್ಕಿ ಪೊಲೀಸ್‌ ಠಾಣೆಯ ಉಸ್ತುವಾರಿ ಯಲ್ಲಿ ಉತ್ತಮವಾಗಿ ನಿರ್ವಹಿಸ ಲಾ ಗಿದೆ. ವಿವಿಧ ಕಾಲೇಜಿನ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಇದಕ್ಕೆ ಸಹಕರಿಸಿದ್ದಾರೆ. ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದು ಶುಕ್ರವಾರ ಸುಮಾರು 5,000ಕ್ಕೂ ಅಧಿಕ ಮಂದಿ ಸಮ್ಮೇಳನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಸಾಂಸ್ಕೃತಿಕ ಲೋಕವೇ ಧರೆಗಿಳಿದಿದೆ ಇಲ್ಲಿ ! ನಾಡಿನ ಗಮನ ಸೆಳೆಯುತ್ತಿದೆ ಕಾರ್ಕಳ ಉತ್ಸವ

Advertisement

ಗಮನ ಸೆಳೆದ ಪಾರಂಪರಿಕ ಗ್ರಾಮ
ಮಂಗಳೂರು ವಿ.ವಿ.ಯಿಂದ ಪ್ರಾಯೋಜಿತಗೊಂಡ ಪಾರಂಪರಿಕ ಗ್ರಾಮ, ವಸ್ತುಗಳ ಮಳಿಗೆ ಸಮ್ಮೇಳನದಲ್ಲಿ ವಿಶೇಷ ಆಕರ್ಷಣೆ ಪಡೆಯಿತು. ಗ್ರಾಮೀಣ ಜನರ ನಿತ್ಯ ಬದುಕು, ಕಸಬು ನಡೆಸುವ ಬಗೆಯನ್ನು ಇಲ್ಲಿ ತೋರಿಸಲಾಗಿದೆ. ಮಂಗನಿಗೆ ಕಲ್ಲು ಹೊಡೆಯುವ ಕೋವಿಯಿಂದ ಹಿಡಿದು, ಎತ್ತರದ ಮರಗಳಿಂದ ಹಣ್ಣು ಕೊಯ್ಯುವ ಸಾಧನಗಳು, ಕತ್ತಿ, ಬುಟ್ಟಿ ಮತ್ತು ಹಲವು ಪರಿಕರ ಗಳು, ಹೊಸ ಅವಿಷ್ಕಾರದ ವಿವಿಧ ಕೃಷಿ ಬಳಕೆಯ ಸಾಧನಗಳು ಪ್ರದರ್ಶನಗಳು ಸಮ್ಮೇಳನದಲ್ಲಿ ಆಕಷಣೀ ಯವಾ ಗಿದ್ದವು. ಹೆದ್ದಾರಿಯ ಎರಡು ಬದಿಯಲ್ಲಿ ಮೇಳದ ವೇದಿಕೆ ಮತ್ತು ಸ್ಟಾಲ್‌ಗ‌ಳ ವ್ಯವಸ್ಥೆ ಮೂಡು ದಿಕ್ಕಿನಲ್ಲಿ ಮಾಡಲಾಗಿದೆ. ಪಶ್ಚಿಮ ದಿಕ್ಕಿನಲ್ಲಿ ವಿವಿಧ ಮನೋರಂಜನೆಯ ಆಟದ ಪರಿಕರಗಳನ್ನು ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next