ನಟ ಅಜೇಯ್ ರಾವ್ ಸಿನಿ ಕೆರಿಯರ್‌ನಲ್ಲೇ ವಿಭಿನ್ನ ಎಂದು ಹೇಳಲಾಗುತ್ತಿರುವ “ಕೃಷ್ಣ ಟಾಕೀಸ್’ ಚಿತ್ರ ಇದೇ ಏ. 9ರಂದು ತೆರೆಗೆ ಬರುತ್ತಿದೆ. ಸದ್ಯ “ಕೃಷ್ಣ ಟಾಕೀಸ್’ನ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಹಿಟ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೊತೆಗೆ ಚಿತ್ರದ ತಾಂತ್ರಿಕ ಕಾರ್ಯಗಳು ಕೂಡ ಅದೇ ರೀತಿ ನೋಡುಗರ ಗಮನ ಸೆಳೆಯುತ್ತಿದೆ. ಇನ್ನು ಕೇಳುಗರ ಗಮನ ಸೆಳೆಯುತ್ತಿರುವ “ಕೃಷ್ಣ ಟಾಕೀಸ್’ ಚಿತ್ರದ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತಸಂಯೋಜಿಸಿದ್ದಾರೆ.
ಚಿತ್ರದ ಹಾಡುಗಳ ಬಗ್ಗೆ ಮಾತನಾಡುವ ಶ್ರೀಧರ್ ವಿ. ಸಂಭ್ರಮ್, “ಅಜೇಯ್ ರಾವ್ ಅವರ ಕೃಷ್ಣ ಸೀರಿಸ್‌ನಲ್ಲಿ ನಾನು ಮಾಡಿದ ಹಿಂದಿನ ಎಲ್ಲಾ ಸಿನಿಮಾಗಳ ಹಾಡುಗಳು ಹಿಟ್ ಆಗಿದ್ದವು. “ಕೃಷ್ಣ ಟಾಕೀಸ್’ ಆ ಸೀರಿಸ್‌ನ ಐದನೇ ಸಿನಿಮಾ. ಈಗ ಇದರ ಹಾಡುಗಳೂ ಹಿಟ್ ಲೀಸ್ಟ್ ಸೇರಿದೆ. ಇಡೀ “ಕೃಷ್ಣ ಟಾಕೀಸ್’ ತಂಡದ ಜೊತೆಗೆ ನನ್ನದೊಂದು ಅದ್ಭುತ ಜರ್ನಿ. ಎಲ್ಲರ ಸಹಕಾರದಿಂದ ಇಷ್ಟು ಒಳ್ಳೆಯ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. “ಕೃಷ್ಣ ಟಾಕೀಸ್’ ಸಾಂಗ್ಸ್ ಹಿಟ ಆಗಿದ್ದರಿಂದ, ಇನ್ನೂ ಎರಡು ಹೊಸ ಸಿನಿಮಾಕ್ಕೆ ಮ್ಯೂಸಿಕ್ ಮಾಡೋದಕ್ಕೆ ಚಾನ್ಸ್ ಸಿಕ್ಕಿದೆ’ ಎನ್ನುತ್ತಾರೆ.
ಇದನ್ನೂ ಓದಿ:‘ನಿನ್ನ ಸನಿಹಕೆ’ ಹಾಡಿನ ಸೌಂಡ್ ಜೋರು
ಇನ್ನು “ಕೃಷ್ಣ ಟಾಕೀಸ್’ ಚಿತ್ರಕ್ಕೆ ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ, ಶ್ರೀಕಾಂತ್ ಸಂಕಲನವಿದೆ. ಮೊದಲ ಬಾರಿಗೆ ಅಜೇಯ್ ರಾವ್ ಅವರ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾಕ್ಕೆ ಸಂಕಲನ ಮಾಡಿರುವ ಶ್ರೀಕಾಂತ್, “ಸಿನಿಮಾ ಪ್ರತಿಕ್ಷಣಕ್ಕೂ ಕುತೂಹಲ ಕೆರಳಿಸುತ್ತ ಕೊನೆಯವರೆಗೂ ಸಾಗುತ್ತದೆ. ಸಿನಿಮಾದಲ್ಲಿ ಬರುವ ಸಾಕಷ್ಟು ಟ್ವಿಸ್ಟ್-ಟರ್ನ್ಸ್ ಆಡಿಯನ್ಸ್‌ಗೆ ಡಿಫರೆಂಟ್ ಎಕ್ಸ್‌ಪೀರಿಯನ್ಸ್ ಕೊಡುತ್ತದೆ. ಇಲ್ಲಿಯವರೆಗೂ ಎಲ್ಲೂ ಕಂಡಿರದ ಅಜೇಯ್ ರಾವ್ ಹೊಸ ಶೇಡ್, ಹೊಸ ಗೆಟಪ್ ಆಡಿಯನ್ಸ್‌ನ ಸೀಟ್ ತುದಿಯಲ್ಲಿ ಕೂರುವಂತೆ ಮಾಡುತ್ತದೆ’ ಎನ್ನುತ್ತಾರೆ.
“ಅಜೇಯ್ ರಾವ್ ಎಂಥ ಆ್ಯಕ್ಷನ್ ದೃಶ್ಯಗಳನ್ನಾದರೂ ರಿಸ್ಕ್ ತೆಗೆದುಕೊಂಡು ಮಾಡಬಲ್ಲಂಥ ನಟ. ಹಾಗಾಗಿಯೇ ಸಿನಿಮಾದಲ್ಲಿ ಬರುವ ಫೈಟ್ಸ್, ಚೇಸ್ ಎಲ್ಲವೂ ನೈಜವಾಗಿ ಮೂಡಿಬರಲು ಸಾಧ್ಯವಾಯ್ತು. ಸಸ್ಪೆನ್ಸ್-ಥ್ರಿಲ್ಲರ್ ದೃಶ್ಯಗಳ ಜೊತೆಗೆ ಆ್ಯಕ್ಷನ್ ದೃಶ್ಯಗಳು ಕೂಡ ಆಡಿಯನ್ಸ್‌ಗೆ ಇಷ್ಟವಾಗುತ್ತಿದೆ’ ಎನ್ನುತ್ತಾರೆ ಚಿತ್ರದ ಸಾಹಸ ನಿರ್ದೇಶಕ ವಿಕ್ರಂ.
ಇದನ್ನೂ ಓದಿ: ‘ರಣಂ’ ಹೋರಾಟ ನನ್ನ ಮನಮುಟ್ಟಿದ ಕಥೆ- ಚೇತನ್
“ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜೇಯ್ ರಾವ್‌ಗೆ ಅಪೂರ್ವ ಮತ್ತು ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ಶೋಭರಾಜ್, ಶ್ರೀನಿವಾಸ ಪ್ರಭು, ಪ್ರಮೋದ್ ಶೆಟ್ಟಿ, ನಿರಂತ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಗೋಕುಲ ಎಂಟರ್ ಟೈನರ್’ ಬ್ಯಾನರ್‌ನಲ್ಲಿ ಗೋವಿಂದರಾಜು ಆಲೂರ್ ನಿರ್ಮಿಸಿರುವ “ಕೃಷ್ಣ ಟಾಕೀಸ್’ ಚಿತ್ರಕ್ಕೆ ವಿಜಯಾನಂದ್ ಆ್ಯಕ್ಷನ್-ಕಟ್ ಹೇಳಿದ್ದಾರೆ.