Advertisement

ಕಲಬುರಗಿಯಲ್ಲಿ ನಾಳೆಯಿಂದ ಕ್ರೆಡಾಯ್‌ ಎಕ್ಸ್‌ಪೋ

12:40 PM Jan 18, 2017 | Team Udayavani |

ಕಲಬುರಗಿ: ನಗರದ ಏಷಿಯನ್‌ ಬಿಸಿನೆಸ್‌ ಸೆಂಟರ್‌ ಆವರಣದಲ್ಲಿ ಸುಸಜ್ಜಿತ ಕಟ್ಟಡಗಳ ಸಾಮಾಗ್ರಿಗಳ ಪ್ರದರ್ಶನದ ಕ್ರೆಡಾಯ್‌ ಎಕ್ಸಪೋ-2017 ಜ. 19ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಉತ್ತಮ ಕಟ್ಟಡಗಳ ನಿರ್ಮಾಣಕ್ಕಾಗಿ ಗುಣಮಟ್ಟದ ಸಾಮಗ್ರಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದೇ ಸೂರಿನಡಿ ಲಭ್ಯವಾಗಲು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕ್ರೆಡಾಯ್‌ ಸ್ಥಳೀಯ ಶಾಖೆ ಅಧ್ಯಕ್ಷ ಸಂಜೋಗ್‌ ರಾಠಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

Advertisement

ಜ. 19ರಿಂದ 22ರ ವರೆಗೆ ನಡೆಯುವ ಪ್ರದರ್ಶನದಲ್ಲಿ ಸುಮಾರು 120 ಮಳಿಗೆಗಳು ಸ್ಥಾಪನೆಯಾಗಲಿವೆ. ಜ. 19ರಂದು ಸಂಜೆ 5:00ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಶಾಸಕರಾದ ಖಮರುಲ್‌ ಇಸ್ಲಾಂ, ದತ್ತಾತ್ರೇಯ ಪಾಟೀಲ ರೇವೂರ, ಮಹಾಪೌರ ಸೈಯ್ಯದ್‌ ಅಹ್ಮದ್‌, ಕ್ರೇಡಿಯಾ ಕರ್ನಾಟಕ ಮುಖ್ಯಸ್ಥ ಆರ್‌. ನಾಗರಾಜ, ರಾಜ್ಯಾಧ್ಯಕ್ಷ ಡಾ| ವಿ.ಕೆ. ಜಗದೀಶಬಾಬು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಪ್ರದರ್ಶನದಲ್ಲಿ ಖಾಸಗಿ ಬಿಲ್ಡಸ್‌ ìಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಭಾಗವಹಿಸಲಿದ್ದು, ಅಗತ್ಯ ಮಾಹಿತಿ ಒದಗಿಸಲಿದ್ದಾರೆ. ಸ್ವಂತ ಮನೆ ಹೊಂದುವ ಕನಸು ಕಂಡವರು ಪ್ರದರ್ಶನದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕು. ಕಟ್ಟಡ ನಿರ್ಮಾಣದ ಎಲ್ಲ ಸಾಮಗ್ರಿಗಳು ಹಾಗೂ ಮಧ್ಯಮ ಪ್ರಮಾಣದ ವಸ್ತುಗಳು ಪ್ರದರ್ಶನದಲ್ಲಿ ಲಭ್ಯವಿವೆ. ಈ ಭಾಗದ ಜನರಿಗೆ ಇದರಿಂದ ಉಪಯೋಗ ಆಗಲಿದೆ ಎಂದು ತಿಳಿಸಿದರು. 

ಜ. 19ರಂದು ನಗರದ ಉದ್ಯಾನವನದಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕ್ರೆಡಾಯ್‌ ರಾಜ್ಯ ಘಟಕದ ಸಾಮಾನ್ಯ ಸಭೆ ನಡೆಯಲಿದೆ. ಘಟಕದ ರಾಜ್ಯ ಪದಾಧಿಕಾರಿಗಳೂ ಸೇರಿದಂತೆ ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮುಂತಾದ ಜಿಲ್ಲಾ ಘಟಕಗಳ ಅಧ್ಯಕ್ಷರು ಸಭೆಯಲ್ಲಿ  ಪಾಲ್ಗೊಳ್ಳುವರು. ಸಭೆಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಕಾನೂನು ಸೇರಿದಂತೆ 500 ಮತ್ತು 1000ರೂ.ಗಳ ಮುಖಬೆಲೆಯ ನೋಟುಗಳ ರದ್ದತಿ ಕುರಿತು  ಚರ್ಚಿಸಲಾಗುವುದು.

1000 ಹಾಗೂ 500 ರ ನೋಟು ರದ್ಧತಿ ನಂತರ ರಿಯಲ್‌ ಎಸ್ಟೆಟ್‌ ಮೇಲೆ ಭಾರಿ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಆದರೆ ವಾಸ್ತವವಾಗಿ ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಪ್ರಗತಿ ಕಾಣಲಾಗುತ್ತಿಲ್ಲ ಎಂದು ಅವರು ತಿಳಿಸಿದರು. ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ ಮೊಹ್ಮದ್‌ ರμಯುದ್ದೀನ್‌, ಜಿಲ್ಲಾ ಕಾರ್ಯದರ್ಶಿ ಅಶ್ಪಾಕ್‌ ಅಹ್ಮದ್‌, ಜಿಲ್ಲಾ ಉಪಾಧ್ಯಕ್ಷ ಮೊಹ್ಮದ್‌ ನಜೀಬ್‌, ಖಜಾಂಚಿ ಗಣೇಶ ತಾಪಾಡಿಯಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿನಾಥ ದೇವರಮನಿ, ಉದಯ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.   

Advertisement
Advertisement

Udayavani is now on Telegram. Click here to join our channel and stay updated with the latest news.

Next