Advertisement

‘ಕ್ರಾಂತಿ’ ಶೂಟಿಂಗ್‌ ಸೆಟ್‌ನಲ್ಲಿ ‘ಮೆಜೆಸ್ಟಿಕ್‌’ ಸೆಲೆಬ್ರೆಶನ್‌

11:14 AM Feb 10, 2022 | Team Udayavani |

ಇದೇ ಫೆ. 8ಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಮೆಜೆಸ್ಟಿಕ್‌’ ಸಿನಿಮಾ ಬಿಡುಗಡೆಯಾಗಿ 20 ವರ್ಷಗಳಾಯಿತು. ಈ ಹಿನ್ನೆಲೆಯಲ್ಲಿ, ನಟ ದರ್ಶನ್‌, “ಮೆಜೆಸ್ಟಿಕ್‌’ ಚಿತ್ರದ ನಿರ್ಮಾಪಕ ಎಂ. ಜಿ ರಾಮಮೂರ್ತಿ ಹಾಗೂ ಚಿತ್ರತಂಡ ಒಟ್ಟಾಗಿ ಸೇರಿ ಕೇಕ್‌ ಕತ್ತರಿಸುವ ಮೂಲಕ “ಮೆಜೆಸ್ಟಿಕ್‌’ ಎರಡು ದಶಕದ ಖುಷಿಯನ್ನು ಸಂಭ್ರಮಿಸಲಾಯಿತು.

Advertisement

ಸದ್ಯ ದರ್ಶನ್‌ “ಕ್ರಾಂತಿ’ ಸಿನಿಮಾದಲ್ಲಿ ಬಿಝಿಯಾಗಿದ್ದು, ಚಿತ್ರೀಕರಣದ ನಡುವೆಯೇ ಬಿಡುವು ಮಾಡಿಕೊಂಡು ದರ್ಶನ್‌ “ಮೆಜೆಸ್ಟಿಕ್‌’ ಸಂಭ್ರಮದಲ್ಲಿ ಭಾಗಿಯಾದರು. ಈ ವೇಳೆ “ಕ್ರಾಂತಿ’ ಚಿತ್ರತಂಡ ಕೂಡ ಈ ಸಂಭ್ರಮಕ್ಕೆ ಸಾಥ್‌ ನೀಡಿದ್ದು, ನಿರ್ಮಾಪಕಿ ಶೈಲಜಾ ನಾಗ್‌, ಬಿ. ಸುರೇಶ್‌, ನಿರ್ದೇಶಕ ವಿ. ಹರಿಕೃಷ್ಣ ಸೇರಿದಂತೆ “ಕ್ರಾಂತಿ’ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಕೂಡ “ಮೆಜೆಸ್ಟಿಕ್ಟ್’ ಇಪ್ಪತ್ತರ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಗರಡಿ ಮನೆಯಲ್ಲಿ ಹೊಸ ಬದಲಾವಣೆ: ರಚಿತಾ ರಾಮ್‌ ಜಾಗಕ್ಕೆ ಸೋನಾಲ್‌ ಎಂಟ್ರಿ

ಅಂದಹಾಗೆ, ಇದೇ ಫೆ. 16ರಂದು ನಟ ದರ್ಶನ್‌ ಬರ್ತ್‌ಡೇ ಪ್ರಯುಕ್ತ “ಮೆಜೆಸ್ಟಿಕ್‌’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next