Advertisement

ಕೆಪಿಎಸ್‌ಸಿ: ಸೂಪರ್‌ ನ್ಯೂಮರರಿ ಹುದ್ದೆ ಸೃಷ್ಟಿ

01:52 AM Jun 07, 2019 | Sriram |

ಬೆಂಗಳೂರು: ಕೆಪಿಎಸ್‌ಸಿಯಿಂದ 1998 ನೇ ಸಾಲಿನಲ್ಲಿ ನೇಮಕಗೊಂಡ ಕೆಎಎಸ್‌ ಅಧಿಕಾರಿಗಳ ಪರಿಷ್ಕೃತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾ ಭದ್ರತೆ
ಸಿಗದಿರುವ ಪ್ರಕರಣಗಳಲ್ಲಿ ಅಂತವರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ.

Advertisement

ಸಂಪುಟ ಸಭೆ ನಂತರ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಈ ಕ್ರಮದಿಂದ 1998 ರ ನಂತರದ ವರ್ಷಗಳಲ್ಲಿ ನೇಮಕಗೊಂಡ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ಮುಂಬಡ್ತಿಗಾಗಲಿ, ಹಿತಾಸಕ್ತಿಗಾಗಲಿ ಧಕ್ಕೆಯಾಗದಂತೆಯೂ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದರು.

1998 ರಲ್ಲಿ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆಸಿದ ಪರೀಕ್ಷೆ ಹಾಗೂ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಅನರ್ಹರನ್ನು ತೆಗೆದುಹಾಕಿ ಆರ್ಹರಿಗೆ ಹುದ್ದೆ ನೀಡುವಂತೆ ಆದೇಶಿಸಿತ್ತು.ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದ್ದರಿಂದ 25 ಜನ ಹಿರಿಯ ಕೆಎಎಸ್‌ ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುವಂತಾಗಿತ್ತು.ಈಗಾಗಲೇ 20 ವರ್ಷ ಸೇವೆ
ಸಲ್ಲಿಸಿರುವ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಸಮಂಜಸವಲ್ಲ ಎಂಬ ಕಾರಣದಿಂದ ಅವರ ರಕ್ಷಣೆಗೆ ಕರ್ನಾಟಕ ನಾಗರಿಕ ಸೇವಾ ವಿಧೇಯಕಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿತ್ತು.

ಈ ಮೂಲಕ 1998 ನೇ ಸಾಲಿನಲ್ಲಿ ನೇಮಕಗೊಂಡು ಸುಪ್ರೀಂಕೋರ್ಟ್‌ ಆದೇಶದಂತೆ ಅನರ್ಹತೆ ಭೀತಿ ಎದುರಿಸುತ್ತಿದ್ದ 25 ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿತ್ತು. ಹೊಸದಾಗಿ ನೇಮಕಗೊಳ್ಳಬೇಕಿರುವ 28 ಅಭ್ಯರ್ಥಿಗಳಿಗಾಗಿ ಸೂಪರ್‌ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸುವುದು ಹಾಗೂ ಈ ನೇಮಕಾತಿ ಇದೊಂದೇ ಅವಧಿಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next