Advertisement

KPSC Appointment: ಕೆಪಿಎಸ್‌ಸಿಯಲ್ಲಿ “ಬಿತ್ತಿದಂತೆ ಬೆಳೆ’: ಸಿ.ಟಿ.ರವಿ

01:23 AM Jul 19, 2024 | Team Udayavani |

ಬೆಂಗಳೂರು: “ಬಿತ್ತಿದಂತೆ ಬೆಳೆ’ ಎಂಬಂತೆ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯಲ್ಲಿ ನಡೆಯುವ ಜಾತಿ ಮತ್ತು ಹಣದ ಪ್ರಭಾವ ಇತರ ನೇಮಕಾತಿಗಳ ಮೇಲೂ ಆಗುತ್ತದೆ ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕೆಪಿಎಸ್‌ಸಿ ಮೂಲಕ ನಡೆಯುವ ನೇಮಕಾತಿಗಳಲ್ಲಿ ಆಗುತ್ತಿರುವ ವಿಳಂಬ, ಪಾರದರ್ಶಕ ವ್ಯವಸ್ಥೆ ಇಲ್ಲದಿರುವುದನ್ನು ಪ್ರಸ್ತಾವಿಸಿ ಸರಕಾರದ ವಿರುದ್ಧ ಆರೋಪ ಮಾಡಿದ ಅವರು, ಇಡೀ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಳ್ಳದ ಕಾರಣ ಬಹುತೇಕ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತಿವೆ. ನೇಮಕಾತಿಗಳಲ್ಲಿ “ಕ್ಯಾಷ್‌’ ಮತ್ತು “ಕಾಸ್ಟ್‌’ ಪ್ರಭಾವ ಬೀರುತ್ತದೆ. ಮದುವೆಗೆ ಒಪ್ಪಿಕೊಂಡರೆ ನೇಮಕಾತಿ ಆಗುವ “ಶಾದಿಭಾಗ್ಯ, ತಾಳಿಭಾಗ್ಯ’ ಯೋಜನೆಗಳು ಜಾರಿಯಲ್ಲಿವೆ ಎಂದರು.

ಇದಕ್ಕೆ ಮುಖ್ಯಮಂತ್ರಿಯವರ ಪರವಾಗಿ ಉತ್ತರಿಸಿದ ಸಚಿವ ಎನ್‌.ಎಸ್‌. ಬೋಸರಾಜ್‌, ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ಮತ್ತು ಪಾರದರ್ಶಕತೆ ತರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next