Advertisement
ಈ ಹಿಂದೆ ಪ್ರೌಢಶಾಲೆ ಮತ್ತು ಕಾಲೇಜು ಮಾತ್ರಕಾರ್ಯನಿರ್ವಹಿಸುತ್ತಿದ್ದವು. ಮೈತ್ರಿ ಸರ್ಕಾರದಲ್ಲಿಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾತಿಮಾಡಿದ್ದರು. ಅದರಂತೆ ತಾಲೂಕಿಗೆ ವಿಶ್ವನಾಥಪುರಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಂಜೂರಾತಿ ನೀಡಿತ್ತು.
Related Articles
Advertisement
ಕಾಲೇಜು ಸುತ್ತಮುತ್ತಲೂ ಗಿಡಗಂಟೆ: ಪದವಿ ಪೂರ್ವ ಕಾಲೇಜು ಆವರಣ ಒಳಗೊಂಡಿರುವ ಕರ್ನಾಟಕ ಪಬ್ಲಿಕ್‌ಶಾಲೆ ಸುತ್ತಮುತ್ತಲು ಮರ, ಗಿಡ, ಹಾಳುದ್ದ ಹುತ್ತ, ಕಸದರಾಶಿ, ಗಿಡಗಂಟಿಗಳು ಬೆಳೆದಿದ್ದು, ರಾತ್ರಿ ವೇಳೆ ಮದ್ಯವನ್ನು ಸೇವಿಸಿ ಅಲ್ಲಿಯೇ ಬಿಟ್ಟಿ ನಮಗೂ ಅದಕ್ಕೂಸಂಬಂಧವಿಲ್ಲದಂತೆ ಕೆಲವು ಕಿಡಿಗೇಡಿಗಳು ಕೃತ್ಯ ಎಸಗುತ್ತಿದ್ದಾರೆ. ಕಾಲೇಜಿಗೆ ಕಾಂಪೌಂಡ್ ನಿರ್ಮಾಣಮಾಡಿಕೊಟ್ಟರೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಾಗುತ್ತದೆ.
ಸ್ವತ್ತಿನ ರಕ್ಷಣೆ ಸರ್ಕಾರದ ಜವಬ್ದಾರಿ: ಹೊಸದಾಗಿ ಬಂದಿರುವ ತಹಶೀಲ್ದಾರ್ ಅವರು ಕಾಲೇಜಿನ ಜಮೀನಿಗೆಪೋಡಿ, ಹದ್ದುಬಸ್ತು ಮಾಡಿ ಸರ್ಕಾರಿ ಜಾಗವನ್ನುಉಳಿಸಬೇಕು. ಈ ಹಿಂದೆ ಇದ್ದ ಅಧಿಕಾರಿಗಳು ಸ್ಪಂದಿಸಿಲ್ಲ.ಎರಡು ಮೂರು ಬಾರಿ ಅರ್ಜಿ ಸಲ್ಲಿಸಿದರೂ ಸಹಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರದ ಸ್ವತ್ತನ್ನುಉಳಿಸಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ.ಕೋಟ್ಯಾಂತರ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ನೂರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆಗಾಗಿ ಕಾಲೇಜು ಆವರಣಕ್ಕೆಸರಿಯಾದ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ. ಈನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ವಿಶ್ವನಾಥಪುರ ಎಸ್‌ಡಿಎಂಸಿ ಉಪಾಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್ ಒತ್ತಾಯಿಸಿದ್ದಾರೆ.
ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ದಿಗೆ 2 ಕೋಟಿ ರೂ.ಅನುದಾನ ಮಂಜೂರಾಗಿ ಟೆಂಡರ್‌ಪ್ರಕ್ರಿಯೆಗೆ ಹೋಗಿದೆ. ಶೀಘ್ರದಲ್ಲಿಯೇತಡೆಗೋಡೆ ನಿರ್ಮಾಣವಾಗಲಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆಪೋಲೀಸ್ ಠಾಣೆಯ ವ್ಯಾಪ್ತಿಯಪೊಲೀಸರು ಗಮನಹರಿಸಿ ಅಂತಹವರಿಗೆ ಕಠಿಣ ಶಿಕ್ಷೆ ನೀಡಬೇಕು. -ಎಲ್.ಎನ್.ನಾರಾಯಣಸ್ವಾಮಿ, ಶಾಸಕ.
ಈ ವರ್ಷ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬರಲಿದೆ.ಅನುದಾನ ಬಂದಕೂಡಲೇ ತಡೆಗೋಡನಿರ್ಮಾಣವಾಗುತ್ತದೆ. ಪ್ರಾಂಶುಪಾಲರುಸರ್ವೆ ಮಾಡಿಸಬೇಕು ಎಂದು ಸೂಚಿಸಿದ್ದೇನೆ. ಸರ್ವೆ ಕಾರ್ಯದ ನಂತರಜಾಗವನ್ನು ಗುರ್ತಿಸಿ ತಡಗೋಡೆ ನಿರ್ಮಿಸಲಾಗುತ್ತದೆ. -ಅಶ್ವತ್ಥನಾರಾಯಣ್, ಕ್ಷೇತ್ರ ಶಿಕ್ಷಣಾಧಿಕಾರಿ.
ಕಾಲೇಜಿನ ಆವರಣಕ್ಕೆ ತಡೆಗೋಡೆಯೇ ಇಲ್ಲದಿರುವುದು ಅನೈತಿಕ ತಾಣವಾಗಿ ಮಾರ್ಪಡಲು ಕಾರಣವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆತರಲಾಗಿದೆ. ಜತೆಗೆ ಸ್ಥಳೀಯ ಗ್ರಾಪಂಗೂ ಮನವಿ ಸಲ್ಲಿಸಲಾಗಿದೆ. ಕಾಲೇಜು ತೆರೆದಮೈದಾನವಾಗಿದ್ದು, ಯಾವ ಸಮಯದಲ್ಲಿ ಪುಂಡರು ಬಂದು ಹೋಗುತ್ತಿದ್ದಾರೆಎಂಬುದು ತಿಳಿಯುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕಾಲೇಜಿಗೆ ಬರುವವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ. ಸೂಕ್ತ ರಕ್ಷಣೆ ಜರೂರಾಗಿ ಆಗಬೇಕಿದೆ. -ರಂಗಪ್ಪ , ಪ್ರಾಂಶುಪಾಲರು, ಕೆಪಿಎಸ್ ಶಾಲೆ
ಕಾಲೇಜಿನ ರಸ್ತೆಗೆ ಸರಿಯಾದ ಡಾಂಬರೀಕರಣ ಇಲ್ಲ. ಸುತ್ತಿಬಳಸಿಕಾಲೇಜಿಗೆ ಮಕ್ಕಳು ಹೋಗಬೇಕಾಗುತ್ತದೆ. ಜತೆಗೆ ಕಾಲೇಜಿಗೆ ಸರಿಯಾದ ಕಾಂಪೌಂಡ್ ವ್ಯವಸ್ಥೆ ಇಲ್ಲ, ಹಾಗಾಗಿಯಾರು ಬೇಕಾದರೂ ಆವರಣದಲ್ಲಿಸುತ್ತಾಡಬಹುದು. ಇದಕ್ಕೆ ಕಡಿವಾಣಹಾಕಿದರೆ ಕೆಪಿಎಸ್ ಶಾಲೆಗೆ ಮರುಜೀವನೀಡಿದಂತಾಗುತ್ತದೆ. ಈ ಬಗ್ಗೆಅಧಿಕಾರಿಗಳು ಮುಂದಾಗಿಕ್ರಮಕೈಗೊಳ್ಳಬೇಕಷ್ಟೇ. -ನಾರಾಯಣಸ್ವಾಮಿ, ಗ್ರಾಮಸ್ಥ, ವಿಶ್ವನಾಥಪುರ
ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗ್ರಾಪಂನಿಂದಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ.ಶಿಕ್ಷಣ ಇಲಾಖೆಯಿಂದ ಪೋಡಿಕಾರ್ಯವಾಗಬೇಕಿದೆ. ಈಗಾಗಲೇ ಕಾಲೇಜಿಗೆ ಖಾತೆ ಮಾಡಿಕೊಡಲಾಗುತ್ತಿದೆ. ತಡೆಗೋಡೆ ನಿರ್ಮಾಣಕ್ಕೆ ನೆರೇಗಾದಲ್ಲಿ ಅವಕಾಶ ಇದೆ. ಕನ್ವರ್‌ಜನ್ಸ್ ಅಡಿಯಲ್ಲಿಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಸರ್ವೆ ಕಾರ್ಯಕ್ಕೆ ಪತ್ರ ವ್ಯವಹಾರ ನಡೆಸಲಾಗುವುದು. -ಗಂಗರಾಜು , ಪಿಡಿಒ, ವಿಶ್ವನಾಥಪುರ ಗ್ರಾಪಂ
-ಎಸ್.ಮಹೇಶ್