Advertisement
ನಗರದ ಹೊರವಲಯದ ಟಮಕದಲ್ಲಿ ಜಮಾಗೊಂಡ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಬೈಕ್ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಪ್ರತಿಭಟನೆ ನಡೆಸಿದ ಕೇಂದ್ರ ಕಾರ್ಮಿಕ ಸಂಘಗಳು 2020ರ ಜ.8ರಂದು ನಡೆದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಸಕ್ರಿಯವಾಗಿ ಬೆಂಬಲಿಸಬೇಕು ಎಂದು ಮನವಿ ಸಲ್ಲಿಸಿದರು.
Related Articles
Advertisement
ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ಮಾತನಾಡಿ, ನರೇಂದ್ರ ಮೋದಿಯವರ ಕಾರ್ಪೊರೇಟ್ ಪರ ನೀತಿಗಳು ಬಿಜೆಪಿ ಸರ್ಕಾರವನ್ನು ಮುನ್ನಡೆಸಿದವು. ಕೃಷಿಕರ ಜೀವನೋಪಾಯ ಉದ್ದೇಶ ಪೂರ್ವಕವಾಗಿ ನಾಶಪಡಿಸಲು ಹೊರಟಿದೆ. ಬೆಳೆ ಗಳನ್ನು ಬೆಳೆಸುವವರು ರೂ.12,000 ಕೋಟಿಗಿಂತ ಹೆಚ್ಚಿನ ನಷ್ಟವನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ವಿನಾಶಕಾರಿ ಹಾದಿಯಿಂದ ಹಿಂದೆ ಸರಿಯುವಂತೆ ಮತ್ತು ರೈತರಿಗೆ ಆಗುವ ನಷ್ಟವನ್ನು ಸರಿ ದೂಗಿಸಲು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು. ಕಾರ್ಪೊರೇಟ್ ವಲಯದ ಆಜ್ಞೆಯ ಮೇರೆಗೆ ಬಿಜೆಪಿ ಸರ್ಕಾರ ಆಕ್ರಮಣಕಾರಿಯಾಗಿ ಅನುಸರಿಸು ತ್ತಿರುವ ರೈತ ವಿರೋಧಿ ಶಾಸನಗಳು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳ ವಿರುದ್ಧ ಜಾಗರೂಕರಾಗಿರಲು ಎಐಕೆಎಸ್ ಜನತೆಗೆ ಕರೆ ನೀಡುತ್ತದೆ. ಕೋಮುವಾದಿ ಶಕ್ತಿಗಳ ವಿರುದ್ಧ ವಿಶಾಲವಾದ ಐಕ್ಯತೆ ನಿರ್ಮಿಸಿ ದೇಶವನ್ನು ಕೋಮು ಧ್ರುವೀಕರಿಸುವ ಪ್ರಯತ್ನಗಳನ್ನು ಎದುರಿಸಲಾಗುವುದು ಎಂದರು.
ಕೆಪಿಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣೇಗೌಡ, ಪಿ.ಆರ್.ನವೀನ್, ಕುರ್ಕಿ ದೇವರಾಜ್, ಗಂಗಮ್ಮ, ಸಿ.ಮುನಿಸ್ವಾಮಿಗೌಡ, ತಾಲೂಕು ಅಧ್ಯಕ್ಷ ಎನ್.ಎನ್. ಶ್ರೀರಾಮ್, ಕಾರ್ಯದರ್ಶಿ ನಾರಾಯಣರೆಡ್ಡಿ, ಮುಖಂಡರಾದ ಪಿ.ವಿ.ರಮಣ್, ಮಾಲೂರು ಅಶೋಕ್,ವೆಂಕಟೇಶ್ ವೆಂಕಟಪ್ಪ ಭಾಗವಹಿಸಿದ್ದರು.