Advertisement

ಸಿದ್ದು, ಬಿಎಸ್‌ವೈ ಭೇಟಿ ಆಕಸ್ಮಿಕ ಅಷ್ಟೇ: ಧ್ರುವನಾರಾಯಣ್‌

03:50 PM Jun 08, 2022 | Team Udayavani |

ಹನೂರು: ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಭೇಟಿ ಆಕಸ್ಮಿಕ ಭೇಟಿಯಾಗಿದ್ದು ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಸಿದ್ಧರಾಮಯ್ಯ ಮತ್ತು ಬಿಎಸ್‌ವೈ ಅವರ ಭೇಟಿ ಆಕಸ್ಮಿಕ, ವಿಮಾನಕ್ಕಾಗಿ ಕಾಯುತ್ತಿದ್ದ ವೇಳೆ ಅತಿಥಿಗಳ ಕೊಠಡಿಯಲ್ಲಿ ಸೌಜನ್ಯದ ಭೇಟಿ ಮಾಡಿದ್ದಾರೆಯೇ ಹೊರತು ಯಾವುದೇ ರಾಜ ಕೀಯ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾರಾಯಣಸ್ವಾಮಿಗೆ ನೈತಿಕತೆಯಿಲ್ಲ: ರಾಜ್ಯಸಭಾ ಅಭ್ಯರ್ಥಿ ಛಲವಾದಿ ನಾರಾಯಣಸ್ವಾಮಿ ಸಿದ್ಧ ರಾಮಯ್ಯ ಅವರನ್ನು ದಲಿತವಿರೋಧಿ ಎಂದಿರುವ ಬಗ್ಗೆ ಮಾತನಾಡಿದ ಧ್ರುವನಾರಾಯಣ್‌, ನಾರಾ ಯಣಸ್ವಾಮಿ ಓರ್ವ ಅವಕಾಶವಾದಿ ರಾಜಕಾರಣಿ, ಅವರಿಗೆ ಸಿದ್ಧರಾಮಯ್ಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ಧರಾಮಯ್ಯ ಅಧಿಕಾರಾವಧಿಯಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು, ಖರ್ಗೆಯವರಿಂದ ರೈಲ್ವೇ ಬೋರ್ಡ್‌ನ ಚೇರ್‌ವೆುನ್‌ ಆಗಿದ್ದರು. ಅವರು ಕಾಂಗ್ರೆಸ್‌ನಲ್ಲಿ ಇದ್ದು ಅಧಿಕಾರ ಅನುಭವಿಸಿ ಇದೀಗ ಬಿಜೆಪಿಗೆ ಹೋಗಿದ್ದಾರೆ. ಸಿದ್ಧರಾಮಯ್ಯ ಅವರ ಸರ್ಕಾರದ ಯೋಜನೆಗಳು ಅಧಿಕಾರಾವಧಿ ಚರಿತ್ರೆಯಲ್ಲಿ ದಾಖಲಾಗುವಂತಹ ದಿನಗಳಾಗಿದ್ದು, ದಲಿತರಿಗೆ ಕೊಟ್ಟ ಕಾರ್ಯಕ್ರಮಗಳು ಸುವರ್ಣ ಅಕ್ಷರಗಳಲ್ಲಿ ಬರೆದಿ ಡುವಂತಹ ಯೋಜನೆಗಳು. ಹಾಗಾಗಿ ಅವರ ಮಾತಿಗೆ ಹೆಚ್ಚಿನ ಬೆಲೆ ಕೊಡುವ ಅವಶ್ಯಕತೆಯಿಲ್ಲ ಎಂದು ಕಿಡಿಕಾರಿದರು.

ಕೈ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ: ಚಾಮುಲ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೈಸೂರು ಹಾಲು ಒಕ್ಕೂಟದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವನ್ನು ಬೇರ್ಪಡಿಸಿ ಚಾಮುಲ್‌ ಅಸ್ತಿತ್ವಕ್ಕೆ ಬಂದಿದ್ದು ಸಿದ್ಧರಾಮಯ್ಯನವರ ಅಧಿಕಾರಾ ವಧಿಯಲ್ಲಿ. ಮಾಜಿ ಸಚಿವ ದಿ.ಮಹದೇವಪ್ರಸಾದ್‌ ಅವರ ಪರಿಶ್ರಮದಿಂದಾಗಿ ಚಾಮುಲ್‌ ರಚನೆಯಾಯಿತು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಧ್ರುವನಾರಾಯಣ್‌ ಮನವಿ ಮಾಡಿದರು.

ಮರಿತಿಬ್ಬೇಗೌಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದೇವೆ: ದಕ್ಷಿಣ ಪದವೀಧರ ಚುನಾವಣೆಯಲ್ಲಿ ಜೆಡಿಎಸ್‌ ಎಂಎಲ್‌ಸಿ ಮರಿತಿಬ್ಬೇಗೌಡ ಅವರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಅವರ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್‌ ನೀಡುವ ಬದಲು ಹಣ ನೀಡಿದ ವ್ಯಕ್ತಿಗೆ ಟಿಕೆಡ್‌ ನೀಡಿರುವುದರ ವಿರುದ್ಧ ಈ ತೀರ್ಮಾಣ ಕೈಗೊಂಡಿದ್ದಾರೆ. ಅವರನ್ನು ಈಗಾಗಲೇ ಕಾಂಗ್ರೆಸ್‌ ಪಕ್ಷಕ್ಕೆ ಆಹ್ವಾನಿಸಿದ್ದು ಮರಿತಿಬ್ಬೇಗೌಡ ಅವರು ಶಿಘ್ರ ಒಳ್ಳೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

Advertisement

ವಿವಿಧೆಡೆ ಮತಯಾಚನೆ: ಪಟ್ಟಣದ ಜಿ.ವಿ.ಗೌಡ ಪ್ರಥಮ ದರ್ಜೆ ಕಾಲೇಜು, ವಿವೇಕಾನಂದ ವಿದ್ಯಾಸಂಸ್ಥೆ, ಜಿ,ವಿಗೌಡ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ ಮತ್ತು ಕ್ರಿಸ್ತರಾಜ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಪದವೀಧರ ಮತರಾರರನ್ನು ಭೇಟಿ ಮಾಡಿದರು. ಈ ವೇಳೆ ನಿಮ್ಮ ಸಮಸ್ಯೆಗಳಿಗೆ ದನಿಯಾಗುವ ನಿಟ್ಟಿನಲ್ಲಿ ಮಧು.ಜಿ.ಮಾದೇಗೌಡ ಅವರಿಗೆ ಪ್ರಥಮ ಪ್ರಾಶ ಸ್ತÂದ ಮತ ನೀಡುವಂತೆ ಮನವಿ ಮಾಡಿದರು.

ಶಾಸಕ ಆರ್‌.ನರೇಂದ್ರ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬ್ಲಾಕ್‌ಕಾಂಗ್ರೆಸ್‌ ಅರ್ಧಯಕ್ಷರಾದ ಕೆ.ಈಶ್ವರ್‌, ದೇವರಾಜು, ಟಿಎಪಿಸಿಎಂಎಸ್‌ ನಿರ್ದೇಶಕ ಮುರುಡೇಶ್ವರ ಸ್ವಾಮಿ, ಗ್ರಾಪಂ ಉಪಾಧ್ಯಕ್ಷ ರಾಮಲಿಂಗಂ, ಮುಖಂಡರಾದ ಮಾದೇಶ್‌, ನಟರಾಜು, ಅಜ್ಜೀಪುರ ನಾಗರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next