Advertisement

BJP ಸರ್ಕಾರದ ಕೋವಿಡ್ ಭ್ರಷ್ಟಾಚಾರದ ಯತ್ನಾಳ ಹೇಳಿಕೆ ತನಿಖೆಯಾಗಲಿ: ಗಣಿಹಾರ

12:07 PM Dec 27, 2023 | Suhan S |

ವಿಜಯಪುರ: ಬಿಜೆಪಿ ಸರ್ಕಾರದ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಕೋವಿಡ್ ಹಗರಣ ನಡೆದಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭಿರ ಆರೋಪ ಮಾಡಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಈ ಕುರಿತು ತನಿಖೆ ನಡೆಸಿ, ಯತ್ನಾಳ ಅವರನ್ನು ವಿಚಾರ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಹಣದಲ್ಲಿ ಕೇಂದ್ರ ನಾಯಕರ ಪಾಲು ಎಷ್ಟು ಎಂದು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.

ವಿಪಕ್ಷದ ಶಾಸಕರಾಗಿ ಯತ್ನಾಳ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರ ಎಂದೆಲ್ಲ ಟೀಕಿಸುವುದು ಸಹಜ. ಆದರೆ ಸ್ವಯಂ ಸ್ವಪಕ್ಷದ ಸರ್ಕಾರ ಇದ್ದಾಗ ನಡೆದಿರುವ ಭ್ರಷ್ಟಾಚಾರ ಹಗರಣದ ನಡೆದಿದೆ ಎನ್ನುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ತನಿಖೆ ನಡೆಸಬೇಕು‌ ಎಂದು ಆಗ್ರಹಿಸಿದರು.

ಮತ್ತೊಂದೆಡೆ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲೀ ಸಮುದಾಯದ ಮಹಿಳೆಯರ ಬಗ್ಗೆ ಅತ್ಯಂತ ಅವಹೇಳಕಾರಿ ಮಾತನಾಡಿದ್ದಾರೆ. ಇಷ್ಟಾದರೂ ಪ್ರಚೋದನೆಗೆ ಒಳಗಾಗದೇ ಸಂಯಮ ತೋರಿದ್ದು ಶ್ಲಾಘನೀಯವಾಗಿದೆ. ಆದರೆ ಸರ್ಕಾರ ಪ್ರಚೋದನಕಾರಿ ಭಾಷಣ ಮಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next