ಬೆಂಗಳೂರು : ದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟ ಅಲ್ಲ, ಸಂವಿಧಾನದ ಪರ-ವಿರುದ್ಧದ ನಡುವಿನ ಹೋರಾಟ ನಡೆಯುತ್ತಿದೆ, ನ್ಯಾಯಯುತವಾಗಿ ದೇಶವನ್ನ ಕಟ್ಟಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಗುರುವಾರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈ ಕಾರ್ಯಕ್ರಮದ ಕೇಂದ್ರಬಿಂದು ನಲಪಾಡ್, ಹಳ್ಳಿಯಲ್ಲಿ ಒಂದು ಮಾತು ಹೇಳ್ತಾರೆ. ಮುಂಗಾರು ಮಳೆಗೆ ಸಿಗಬೇಡ , ಭಾಷಣದಲ್ಲಿ ಕೊನೆಗೆ ಸಿಗಬೇಡ ಅಂತ ಹೇಳ್ತಾರೆ. ನಾನು ಇಲ್ಲಿ ಮಾತನಾಡೋಕ್ಕೆ ಏನ್ ಉಳಿದಿಲ್ಲ. ನನಗೂ 60 ವರ್ಷ ಆಗೋಯ್ತು. ಐ ಆಮ್ ಎ ಓಲ್ಡ್ ಬಟ್ ಯಂಗ್ ಇನ್ ಹಾರ್ಟ್ . ನನ್ನ ಸೋದರ ನಲಪಾಡ್ ಗೆ ಶುಭ ಕೋರುತ್ತೇನೆ ಎಂದರು.
ಸೋತರೆ ಪ್ರಯತ್ನ ಬಿಡಬಾರದು, ನಾನು ಕೂಡ ಸೋತಿದ್ದೆ, ಆದ್ರೆ ಗೆಲ್ಲುವ ಶ್ರಮ ಬಿಡಲಿಲ್ಲ. ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರೋದಿಲ್ಲ ಎಂದು ಸೋನಿಯಾ ಅವರು ಹೇಳಿದ್ದರು. ಅವಕಾಶವನ್ನ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ನಲಪಾಡ್ ಭಾಷಣ ಇಷ್ಟ ಆಯ್ತು ಅವರು ಏನ್ ಯೋಜನೆಗಳು ಹೇಳಿದ್ರೋ, ಅಷ್ಟು ಮಾಡಿದ್ರೆ ಸಾಕು. ಯುವ ಧ್ವನಿ ಎಂಬ ಹೊಸ ಯೋಜನೆ ಬಗ್ಗೆ ಮುಂದಿನ ದಿನಗಳಲ್ಲಿ ಹೇಳ್ತೀನಿ. ಹೊಸ ಬ್ಲಡ್ ನ ಕಾಂಗ್ರೆಸ್ ನಲ್ಲಿ ಇಂಜೆನ್ಟ್ ಮಾಡಿಸಬೇಕು. ಸದಸ್ಯತ್ವ ಹೆಚ್ಚು ಮಾಡುವುದೇ ಸದ್ಯಕ್ಕೆ ಇರುವ ನಿಮ್ಮ ಗುರಿ ಎಂದರು.
೧೮ ವರ್ಷದ ಯುವಕರಿಗೆ ವೋಟ್ ಅಧಿಕಾರ ನೀಡಬಾರದೆಂದು ಬಿಜೆಪಿ ವಿರೋಧಿಸಿತ್ತು, ೧೮ ವರ್ಷದ ಯುವಕರನ್ನ ದೇಶ ಕಾಯಲು ಬಿಡುತ್ತೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯನ್ನ ಆಯ್ಕೆ ಮಾಡಲು ಯುವಕರಿಗೆ ಮತದಾನದ ಹಕ್ಕು ನೀಡಬೇಕು. ಎನ್ ಇ ಪಿ ಬಗ್ಗೆ ದೊಡ್ಡ ಚರ್ಚೆ ಮಾಡಬೇಕಾಗಿದೆ. ಇದು ನಾಗ್ಪುರ್ ಎಜುಕೇಷನ್ ಪಾಲಿಸಿ. ಬೇರೆ ರಾಜ್ಯಗಳಲ್ಲಿ ಜಾರಿಗೆ ತರಲು ಆಗ್ತಾಯಿಲ್ಲ. ಫಸ್ಟ್ ನಮ್ಮ ರಾಜ್ಯದಲ್ಲೇ ಜಾರಿಗೆ ತರ್ತಾರೆ ಅಂತೆ.23 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಎನ್ ಇಪಿಯನ್ನ ಸುಡುವ ಕೆಲಸ ಮಾಡುತ್ತೇವೆ ಎಂದು ಕಿಡಿ ಕಾರಿದರು.
ಬಣ ರಾಜಕೀಯಕ್ಕೆ ಡಿ ಕೆ ಶಿವಕುಮಾರ್ ಎಚ್ಚರಿಕೆ
ಆ..ಗುಂಪು.. ಈ… ಗುಂಪು ಅಂತ ಇರಬಾರದು. ಆ ತರಹ ಏನಾದ್ರು ಕಂಡುಬಂದ್ರೆ, ಎತ್ತಿ ಪಕ್ಕಕ್ಕೆ ಇಡುತ್ತೇನೆ. ಈಗಲೇ ಎಂಪಿ,ಎಂಎಲ್ ಎ ಟಿಕೇಟ್ ಬೇಕು ಅಂತ ಬರಬೇಡಿ. ಮೊದಲು ಕಾಂಗ್ರೆಸ್ ಪಕ್ಷ ಕಟ್ಟಿ. ಆ ಮೇಲೆ ಅಧಿಕಾರ ತಾನಾಗಿಯೇ ಬರುತ್ತೆ.ನಾವೆಲ್ಲರೂ ಕೆಳ ಹಂತದಿಂದ ಮೇಲಕ್ಕೆ ಬಂದಿದ್ದೇವೆ. ಪಕ್ಷ ಸಂಘಟನೆ ಮೊದಲು ಮಾಡಿ. ನಲಪಾಡ್ ಮತ್ತು ರಕ್ಷಾ ರಾಮಯ್ಯ ಬಣ ರಾಜಕೀಯಕ್ಕೆ ಡಿಕೆಶಿ ಎಚ್ಚರಿಕೆ ನೀಡಿದರು.
ಯಾರು ಯಾರ ಮೇಲೆ ಚಾಡಿ ಹೇಳುವ ಪ್ರಶ್ನೇಯೇ ಇಲ್ಲ. ಓನ್ಲಿ ಕೆಲಸ… ಕೆಲಸ…ಪಕ್ಷ ಸಂಘಟನೆ ಮಾತ್ರ ಗಮನ ಕೊಡಿ ಎಂದು ಮತ್ತೆ ಎಚ್ಚರಿಕೆ ನೀಡಿದರು..