Advertisement

ಬಸವಣ್ಣನಿಂದಲೇ ಬದಲಾವಣೆ 

06:10 AM Feb 26, 2018 | Team Udayavani |

ಜಮಖಂಡಿ: ಬಸವಣ್ಣನವರ ಸಿದ್ಧಾಂತದಿಂದ ಲಕ್ಷಾಂತರ ಜನರ, ರೈತರ ಜೀವನ ಬದಲಾವಣೆಯಾಗಿದೆ ಎಂದು ಎಐಸಿಸಿ
ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಭಾನುವಾರ ಶ್ರಮಬಿಂದು ಸಾಗರಕ್ಕೆ ಬಾಗಿನ ಅರ್ಪಣೆ ಹಾಗೂ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯ ಬೃಹತ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗದ ರೈತರ ಬೆವರಿನಿಂದ ರಾಜ್ಯ, ದೇಶದ ಚಿತ್ರಣವೇ ಬದಲಾವಣೆಗೊಳ್ಳುತ್ತಿದೆ.

ಹಿನ್ನೀರು ತುಂಬುವ ಯೋಜನೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಬಸವಣ್ಣವರ ಜನ್ಮಭೂಮಿ ಬಸವಕಲ್ಯಾಣದಲ್ಲಿ 12ನೇಶತಮಾನದ ಅನುಭವ ಮಂಟಪಕ್ಕೆ  ಭೇಟಿ ನೀಡಿದ್ದೇನೆ. ಎಲ್ಲರೂ ಒಂದೇ ಭಾವನೆಗಳ ಮೂಲಕ ಬದುಕು ಸಾಗಿಸುವ ಜನರನ್ನು ನೋಡಿ ಬಹಳಷ್ಟು ಖುಷಿಯಾಗಿದೆ. ಕಾಂಗ್ರೆಸ್‌ ಜಾತಿ, ಧರ್ಮ, ಶ್ರೀಮಂತಿಕೆಯನ್ನು ಸಮಾನ ದೃಷ್ಟಿಯಿಂದ ನೋಡುವ ಮೂಲಕ ಒಂದೇ ದಾರಿಯಲ್ಲಿ ಸಾಗಿದರೆ, ಬಿಜೆಪಿ ವಿರುದಟಛಿ ದಿಕ್ಕಿನಲ್ಲಿ ಸಾಗುತ್ತಿದೆ. ಜನರಿಗಾಗಿ ಕಾಂಗ್ರೆಸ್‌ ಇದ್ದರೆ, ಬಿಜೆಪಿ ಕೆಲವು ಶ್ರೀಮಂತರಿಗೆ ಮೀಸಲಾಗಿದೆ ಎಂದರು.

ಪ್ರತಿಯೊಂದು ಯೋಜನೆ ತಮ್ಮದೇ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿ,ಸುಷ್ಮಾ ಸ್ವರಾಜ್‌, ರಾಜನಾಥ ಸಿಂಗ್‌,
ಎಲ್‌.ಕೆ.ಆಡ್ವಾಣಿ ಸಹಿತ ಹಲವರ ಶ್ರಮವಿಲ್ಲವೇ ಎಂದು ಬಿಜೆಪಿ ಪಕ್ಷ ಹಾಗೂ ನಾಯಕರ ವಿರುದಟಛಿ ವಾಗ್ಧಾಳಿ ನಡೆಸಿದರು.

ಇನ್ನು ವಿಜಯಪುರ ಜಿಲ್ಲೆ ಮುಳವಾಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್‌,ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲೇ
ಜನ್ಮತಳೆದ ಕಾಂಗ್ರೆಸ್‌ ಭಾರತಕ್ಕೆ ವಿಶ್ವವೇ ಬೆರಗಾಗುವ ಅತಿ ದೊಡ್ಡ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯನ್ನು ನೀಡಿದೆ.
ಕಾಂಗ್ರೆಸ್‌ ಪಕ್ಷ ಬಸವೇಶ್ವರರ ಆಶಯದಲ್ಲೇ ನಡೆಯುತ್ತಿದೆ ಎಂದು ಹೇಳಿದರು.

Advertisement

ಭಾಷಣ ವೇಳೆ ಸಿದ್ದು ಸಖತ್‌ ನಿದ್ದೆ: ಬಾಡಗಂಡಿಯಲ್ಲಿ ನಡೆದ ಜನಾ ಶೀರ್ವಾದ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಗಡದ್ದಾಗಿ ನಿದ್ದೆ ಮಾಡಿದರು. 

ರಾಹುಲ್‌ ಗಾಂಧಿ ಭಾಷಣ ಆರಂಭಿಸಿ, ಮುಗಿಸುವವರೆಗೂ ಸಿದ್ದರಾಮಯ್ಯ ಅವರು ನಿದ್ದೆ ಮಾಡಿದರು. ಕೆಲವೊಮ್ಮೆ ವಿವಿಧ ವಿಷಯಗಳಿಗಾಗಿ ಒಮ್ಮೆ ಜೆ.ಟಿ.ಪಾಟೀಲ, ಇನ್ನೊಮ್ಮೆ ಎಸ್‌.ಆರ್‌. ಪಾಟೀಲ ಸಿದ್ದರಾಮಯ್ಯ ಅವರ ಬಳಿಗೆ ಬಂದರು. ಆಗ ಎದ್ದು ಮಾತನಾಡಿ, ಮತ್ತೆ ನಿದ್ರೆಗೆ ಜಾರಿದರು.

ರಾಹುಲ್‌ಗೆ ರೈತರ ಸನ್ಮಾನ
ಬೀಳಗಿ (ಬಾಗಲಕೋಟೆ ):
ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬೀಳಗಿ ತಾಲೂಕಿನ ಬಾಡಗಂಡಿಗೆ ಆಗಮಿಸಿದ್ದ
ರಾಹುಲ್‌ ಗಾಂಧಿ ಅವರನ್ನು ಬೀಳಗಿ ತಾಲೂಕಿನ ರೈತರ ಪರವಾಗಿ ಕಂಬಳಿ, ರುಮಾಲು ಹಾಗೂ ಬೆಳ್ಳಿಯ ಗದೆ ನೀಡಿ ಸನ್ಮಾನಿಸಲಾಯಿತು.

ಕಾಂಗ್ರೆಸ್‌ ಮುಖಂಡ ಶಿವಾನಂದ ನಿಂಗನೂರ ನೇತೃತ್ವದಲ್ಲಿ ರೈತ ಮುಖಂಡರು,ರಾಹುಲ್‌ ಗಾಂಧಿ ಅವರಿಗೆ ಕಂಬಳಿ, ರುಮಾಲು ಹಾಗೂ ಬೆಳ್ಳಿ ಗದೆ ನೀಡಿದರು.

ಕಾಂಗ್ರೆಸ್‌ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರು ನಮ್ಮ ತಾಲೂಕಿಗೆ ಬಂದಿರುವ ಹಿನ್ನೆಲೆಯಲ್ಲಿ ನಮ್ಮ ತಾಲೂಕಿನ ಸಮಸ್ತ ರೈತರ ಪರವಾಗಿ ಸನ್ಮಾನಿಸಲಾಗಿದೆ ಎಂದು ಶಿವಾನಂದ ನಿಂಗನೂರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next