Advertisement

ಕೋವಿಡ್ ಭವಿಷ್ಯ ನಿಜವಾಯಿತು ; ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು

11:12 AM Jun 05, 2020 | mahesh |

ಬೆಳ್ತಂಗಡಿ: ಕೋವಿಡ್ ಭೀತಿಯ ಬಗ್ಗೆ ಏಳು ವರ್ಷಗಳ ಹಿಂದೆಯೇ ನಾನು ಭವಿಷ್ಯ ಹೇಳಿದ್ದು, ಅದು ನಿಜವಾಗಿದೆ. ಕೋವಿಡ್ ವೈರಸ್‌ ಶೀಘ್ರದಲ್ಲಿ ಪೂರ್ಣ ನಿರ್ಮೂಲನೆ ಆಗಲಿದೆ ಎಂದು ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು ಹೇಳಿದರು. ಧರ್ಮಸ್ಥಳದ ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಮಂಗಲ ಪ್ರವಚನ ನೀಡಿದ ಅವರು, ದೇವರ ಮೇಲೆ ಭಕ್ತಿ-ಶ್ರದ್ಧೆ, ಧರ್ಮಾನುಷ್ಠಾನ, ಶಿಸ್ತು ಬದ್ಧ ಜೀವನ ಶೈಲಿ ಮತ್ತು ಹಿತ-ಮಿತ ಆಹಾರ ಸೇವನೆಯಿಂದ ಕೊರೊನಾ ನಿರ್ಮೂಲನೆ ಮಾಡಿ ಆರೋಗ್ಯ ಭಾಗ್ಯ ಹೊಂದಬಹುದು ಎಂದರು.

Advertisement

ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖೀ ಸಮಾಜಸೇವೆ ಹಾಗೂ ಧರ್ಮ ಪ್ರಭಾವನ ಕಾರ್ಯಗಳು ವಿಶ್ವಕ್ಕೆ ಮಾದರಿಯಾಗಿವೆ. ಆತ್ಮಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ ಎಂದರು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.

ಶಿರಸಿಯತ್ತ ವಿಹಾರ
ಮಹಾರಾಷ್ಟ್ರದಲ್ಲಿ 1943ರಲ್ಲಿ ಜನಿಸಿದ ಮುನಿ ಮಹಾರಾಜರು 19ನೇ ವರ್ಷದಲ್ಲಿ ಕ್ಷುಲ್ಲಕ ದೀಕ್ಷೆ ಪಡೆದರು. ಅವರು ಜೂ. 5ರಂದು ಧರ್ಮಸ್ಥಳದಿಂದ ಉಜಿರೆ, ವೇಣೂರು, ಮೂಡುಬಿದಿರೆಯಾಗಿ ಶಿರಸಿಯತ್ತ ವಿಹಾರಗೈಯಲಿದ್ದಾರೆ.

ಭಾರತಕ್ಕೆ ಉಜ್ವಲ ಭವಿಷ್ಯ
2022 ಮತ್ತು 2028ನೇ ವರ್ಷ ಅತ್ಯಂತ ಕಠಿನವಾಗಿದ್ದು, ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 2030ರ ಬಳಿಕ ಭಾರತಕ್ಕೆ ಉಜ್ವಲ ಭವಿಷ್ಯವಿದೆ.
– ಶ್ರೀ 108 ಮಹಾಸಾಗರ ಮುನಿ ಮಹಾರಾಜರು

Advertisement

Udayavani is now on Telegram. Click here to join our channel and stay updated with the latest news.

Next