Advertisement

ಕೆರೆಗಳ ಮಾಲಿನ್ಯ ಪ್ರಮಾಣ ತಗ್ಗಿಸಿದ ಕೋವಿಡ್

01:35 PM Sep 10, 2021 | Team Udayavani |

ಬೆಂಗಳೂರು: ಸಾರ್ವಜನಿಕರ ಗಣೇಶ ಪ್ರತಿಷ್ಠಾಪನೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ 20 ಪಟ್ಟು ಇಳಿಕೆಯಾಗಿದೆ. ಇಡೀ ನಗರದಲ್ಲಿ ಸಾರ್ವಜನಿಕರ ಗಣೇಶ ಪ್ರತಿಷ್ಠಾಪನೆ 300 ಗಡಿದಾಟುವುದು ಅನುಮಾನ!

Advertisement

ಗುರುವಾರ ತಡರಾತ್ರಿಯವರೆಗೂ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆದವರ ಸಂಖ್ಯೆ 250 ಮಾತ್ರ. ನಿಯಮ ಮೌಖಿಕ ಸಡಿಲಿಕೆ ಹಿನ್ನೆಲೆ ಶುಕ್ರವಾರವೂ 50 ಕಡೆ ಅನುಮತಿ ಪಡೆದರು ಸಂಜೆಯೊಳಗೆ 300ಕ್ಕೆ ಹೆಚ್ಚಳವಾಗ ಬಹುದು. ಇನ್ನು ಇದರಲ್ಲಿ ಬಹುತೇಕ ಮೂರ್ತಿ ಐದು ಅಡಿಗಿಂತಲೂ ಕಡಿಮೆ ಮತ್ತು ಪರಿಸರ ಸ್ನೇಹಿ ಯಾಗಿಲಿರಲಿವೆ. ಇದು ಪರೋಕ್ಷವಾಗಿ ನಗರದ ಕೆರೆಗಳ ಮಾಲಿನ್ಯ ಪ್ರಮಾಣ ತಗ್ಗಿಸಲು ಕೊಡುಗೆ ನೀಡಿದೆ.

ಕೋವಿಡ್ ಸೋಂಕು ಪೂರ್ವದಲ್ಲಿ (2019ಕ್ಕೂ ಮುಂಚೆ) ನಗರದಲ್ಲಿ ದೊಡ್ಡ ಗಣೇಶನ ಮೂರ್ತಿಗಳ ವಿಸರ್ಜನೆಗೆ 60ಕ್ಕೂ ಅಧಿಕ ಕೆರೆಗಳನ್ನು
ಗುರುತಿಸುತ್ತಿತ್ತು. ಒಂದು ಸಾವಿರಕ್ಕೂ ಅಧಿಕ ಬೃಹತ್‌ ಗಾತ್ರದ ಪಿಒಪಿ ಮೂರ್ತಿಗಳನ್ನು ಕೆರೆಗಳಿಗೆ ಸೇರುತ್ತಿದ್ದವು. ಜತೆಗೆ ಪೂಜೆ, ಸಣ್ಣ ಮೂರ್ತಿ ಗಳ ವಿಸರ್ಜನೆಯಿಂದ ಕೆರೆಗಳು ಮಾಲಿನ್ಯವಾಗುತ್ತಿತ್ತು. ಹಬ್ಬಕ್ಕಿಂತ ಮುಂಚೆ, ಹಬ್ಬದ ದಿನ ಹಾಗೂ ಹಬ್ಬದ ನಂತರ ನೀರಿನ ಭೌತಿಕ, ರಾಸಾಯನಿಕ ಪರೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತಿತ್ತು. ಪ್ರಮುಖವಾಗಿ ಕೆರೆಗಳಲ್ಲಿ ಪಿಎಚ್‌, ಬಯೋಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌, ಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌, ನಿಕ್ಕೆಲ್‌, ಕಾಪರ್‌ನಂತಹಕರಗಲ್ಪಟ್ಟಲೋಹಗಳಪ್ರಮಾಣ ಹೆಚ್ಚಳವಾಗುತ್ತಿತ್ತು.

ಆದರೆ, ಹಿಂದಿನ ವರ್ಷ ಮತ್ತು ಪ್ರಸಕ್ತ ವರ್ಷದಲ್ಲಿ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಗಣೇಶ ಮೂರ್ತಿ ಎತ್ತರ ಮತ್ತು ಪ್ರತಿಷ್ಠಾಪನೆ ಸಾಕಷ್ಟು ನಿರ್ಬಂಧಗಳನ್ನು ಏರಿದೆ. ಇದರ ಫ‌ಲವಾಗಿ ಕೊರೊನಾಗಿಂತ ಪೂರ್ವದಂತೆ ಬೃಹದಾಕಾರದ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶಗಳು,
ಸಾವಿರಾರು ಮೂರ್ತಿಗಳ ಪ್ರತಿಷ್ಠಾಪನೆಯಾಗುತ್ತಿಲ್ಲ. 12 ಕೆರೆಗಳ ಮುಂಭಾಗದಲ್ಲಿ ಕೃತಕವ್ಯವಸ್ಥೆಮಾಡಿದೆ.ಯಾವುದೇ ಕಾರಣಕ್ಕೂ ಕೆರೆಗಳಿಗೆ ನೇರವಾಗಿ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ. ಹೀಗಾಗಿ, ನಗರದ 60ಕ್ಕೂ ಅಧಿಕ ಕೆರೆಗಳು ಗಣೇಶ ಹಬ್ಬದ ಮಾಲಿನ್ಯದಿಂದ ದೂರ ಉಳಿದಿವೆ.

ಪ್ರಮುಖ ಕೆರೆಗಳು ಸೇಫ್!
ಪ್ರಮುಖವಾಗಿ ಸ್ಯಾಂಕಿಟ್ಯಾಂಕ್‌,ಯಡಿಯೂರುಕೆರೆ, ಜ್ಞಾನಜ್ಯೋತಿನಗರದ ಮಲ್ಲತ್ತಹಳ್ಳಿಕೆರೆ,ಮಾದವಾರಕೆರೆ, ಕಾಚೋಹಳ್ಳಿ ಕೆರೆ, ಹೇರೋ ಹಳ್ಳಿಕೆರೆ, ಗಾಂಧಿನಗರಕೆರೆ (ಕೆಂಗೇರಿ),ಹೂಡಿ- ಸಾದರಮಂಗಲ ಕೆರೆ, ದೊಡ್ಡನೆಕ್ಕುಂದಿ ಕೆರೆ,ಚಿನ್ನಪ್ಪನಹಳ್ಳಿಕರೆ,ಕಾಡುಗೋಡಿ ಬಳಿಯ ದಕ್ಷಿಣ ಪಿನಾಕಿನಿ ನದಿ,ವರ್ತೂರು ಕೋಡಿಕೆರೆ, ದೇವರ ಬೀಸನಹಳ್ಳಿಕೆರೆ, ಕೈಗೊಂಡನಹಳ್ಳಿ ಟ್ಯಾಂಕ್‌, ಕೆ.ಆರ್‌. ಪುರದ ವೆಂಗಯ್ಯನಕೆರೆ, ಹುಳಿಮಾವುಕೆರೆ,  ಅರಕೆರೆಕೆರೆ, ಸಾರಕ್ಕಿಕೆರೆಮುಂಭಾಗ-ಹಿಂಭಾಗ, ಬೇಗೂರುಕೆರೆಹಿಂಭಾಗ,ಯಲಹಂಕಕೆರೆಕಲ್ಯಾಣಿ, ಅಟ್ಟೂರುಕೆರೆ, ರಾಚೇನಹಳ್ಳಿಕೆರೆ,ಅಲ್ಲಾಳಸಂದ್ರಕೆರೆ, ಹೆಬ್ಟಾಳಕೆರೆ, ತಿರುಮೋನಹಳ್ಳಿಕೆರೆ,ಜಾಲಹಳ್ಳಿಕೆರೆ, ಜಕ್ಕೂರುಕೆರೆ, ದೊಡ್ಡಬೊಮ್ಮಸಂದ್ರಕೆರೆ ಸೇರಿದಂತೆ ಮತ್ತಿತರಕಡೆಗಳಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜನೆಗೆ ಕಡಿವಾಣಹಾಕಲಾಗಿದೆ.

Advertisement

ಈ ಹಿಂದೆ ಹೇಗಿತ್ತು ಹಬ್ಬದ ಮಾಲಿನ್ಯ
-ಪ್ರತಿ ಅಡಿ ಗಣಪತಿಗೆ ಕನಿಷ್ಠ 3ರಿಂದ 5 ಕೆಜಿ ಹಾಗೂ ಸರಾಸರಿ 5 ಅಡಿ ಗಣಪನಿಗೆ ಕನಿಷ್ಠ 60 ಕೆಜಿ ಪಿಒಪಿ ಬೇಕಾಗುತ್ತದೆ. ಅದೇ ರೀತಿ, ಪ್ರತಿ ಅಡಿ ಬಣ್ಣದ ಗಣಪನಿಗೆ 20 ಗ್ರಾಂ ಸೀಸ ಬಳಸಲಾಗುತ್ತದೆ. ಇಡೀ ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳಿಗೆ ಲೆಕ್ಕಹಾಕಿದರೆ, ನೂರಾರು ಟನ್‌ ಆಗುತ್ತದೆ.
– ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ನೀರಿನಲ್ಲಿ ಕರಗಲು ಕನಿಷ್ಠ 20 ವರ್ಷ ಬೇಕಾಗುತ್ತದೆ. ಕರಗಿದರೂ ಆ ನೀರು ಸೇವಿಸುವುದರಿಂದ ದೇಹದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಸೀಸ ಕರಗದಿರುವ ನೀರನ್ನು ಸೇವಿಸುವುದರಿಂದ ಬುದ್ಧಿ ಮಾಂದ್ಯತೆ ಉಂಟಾಗುವ ಸಾಧ್ಯತೆ ಹೆಚ್ಚು. ಕೆರೆಗಳು ಕೂಡ ಮೊದಲಿನ ಸ್ಥಿತಿಗೆ ಬರುವುದು ಕೂಡ ಕಷ್ಟ ಎನ್ನುತ್ತಾರೆ ಜಲತಜ್ಞರು.
– ಕೆರೆಗಳಲ್ಲಿ ವಿಸರ್ಜಿಸಲಾಗುತ್ತಿದ್ದ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿಗಳಿಂದ ಅಪಾಯಕಾರಿ ಬಣ್ಣ ಹಾಗೂ ರಾಸಾಯನಿಕ ಅಂಶಗಳು ನೀರಿಗೆ ಸೇರುತ್ತಿತ್ತು. ಅವುಗಳೇ ನಿಧಾನವಾಗಿ ಅಂತರ್ಜಲದಲ್ಲಿ ಸೇರಿ ಕೆರೆಯ ಜತೆಗೆ ಕೊಳವೆ ಬಾವಿ ನೀರನ್ನು ಮಾಲಿನ್ಯ ಮಾಡುತ್ತಿತ್ತು.
– ಈಗಾಗಲೇ ನಗರದಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗಳಿಗೆ ಕುಸಿದಿದೆ. ಇದೇ ರೀತಿ ರಾಸಾಯನಿಕ ಪದಾರ್ಥ ಸೇರ್ಪಡೆ ಪ್ರಮಾಣ ಅಧಿಕವಾಗುತ್ತಿದ್ದಂತೆ ಅಂತರ್ಜಲದ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಕೆರೆಗಳಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ.

ಪಾಲಿಕೆ ವ್ಯಾಪ್ತಿಯಲ್ಲಿ 160ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಒಂದೇ ಕಡೆ ಗಣೇಶ ಪ್ರತಿಷ್ಠಾಪನೆಗೆ ಸಮಿತಿಗಳು ಒಪ್ಪಿವೆ. ತಡರಾತ್ರಿವರೆಗೂ 250 ಸಮಿತಿಗಳು ಮಾತ್ರ ಪ್ರತಿಷ್ಠಾಪನೆಗೆ ಅನುಮತಿ ಪಡೆದಿವೆ.
– ಡಿ.ರಂದೀಪ್‌,
ಆರೋಗ್ಯ ವಿಭಾಗದ ವಿಶೇಷ ಆಯುಕ್ತರು

– ಜಯಪ್ರಕಾಶ್‌ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next