Advertisement

ಚಾಮರಾಜನಗರದಲ್ಲಿ ನಾಲ್ಕೇ ದಿನದಲ್ಲಿ ಕೋವಿಡ್ ಸಂಖ್ಯೆ ದುಪ್ಪಟ್ಟು

08:16 PM Apr 09, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. 10 ದಿನಗಳ ಹಿಂದೆ ನಿತ್ಯ ಪ್ರಕರಣಗಳ ಸಂಖ್ಯೆ ಒಂದಂಕಿ ದಾಟಿರಲಿಲ್ಲ. ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 64 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

Advertisement

ಪ್ರಸ್ತುತ 186 ಸಕ್ರಿಯ ಪ್ರಕರಣಗಳಿದ್ದು, ಇವರಲ್ಲಿ 150 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಪ್ರಸ್ತುತ 30 ಮಂದಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾರ 64 ಮಂದಿಗೆ ಪಾಸಿಟಿವ್‌ ಆಗಿದೆ. ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಸೋಮವಾರ ಒಂದೇ ದಿನ 30 ಮಂದಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿತ್ತು.

ಬುಧ ವಾರ 42 ಪ್ರಕರಣ ದಾಖಲಾಗಿದ್ದು, ಗುರುವಾರ 64 ಪ್ರಕರಣ ಗಳು ವರದಿಯಾಗಿವೆ. ಈ ಬೆಳವಣಿಗೆ ಗಮನಿಸಿದರೆ ಪ್ರತಿ ನಿತ್ಯದ ಪ್ರಕರಣಗಳ ಸಂಖ್ಯೆ ಇನ್ನು ಹೆಚ್ಚುತ್ತಾ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಇದುವರೆಗೆ ಒಟ್ಟು 7,258 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, 6940 ಮಂದಿ ಗುಣಮುಖ ರಾಗಿದ್ದಾರೆ. 132 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾದ ನಂತರ ದಾಖಲಾಗುತ್ತಿದ್ದ ಪ್ರಕರಣಗಳಿಗೆ ಹೋಲಿಸಿದರೆ, ಈಗ ಸೋಂಕು ಹರಡುತ್ತಿರುವ ವೇಗ ಹೆಚ್ಚಾಗಿದೆ.

ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಹಾಸಿಗೆಗಳ ಸಾಮರ್ಥ್ಯ: ಜಿÇÉೆಯಲ್ಲಿ ಕೋವಿಡ್‌ ಸೋಂಕಿತರಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಒಟ್ಟು 115 ಹಾಸಿಗೆಗಳಿವೆ. ಇದರಲ್ಲಿ 40 ಹಾಸಿಗೆಗಳು ಐಸಿಯು ವ್ಯವಸ್ಥೆ ಹೊಂದಿವೆ. 20 ವೆಂಟಿಲೇಟರ್‌ಗಳಿವೆ. 1ನೇ ಅಲೆಯಲ್ಲಿ ತೆರೆಯಲಾಗಿದ್ದ ಗುಂಡ್ಲುಪೇಟೆ ಮತ್ತು ಸಂತೆಮರಹಳ್ಳಿಯ ಕೋವಿಡ್‌ ಆಸ್ಪತ್ರೆಗಳನ್ನು ಮತ್ತೆ ಸನ್ನದ್ಧಗೊಳಿಸಲಾಗುತ್ತಿದೆ. ಸಂತೆಮರಹಳ್ಳಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳಿದ್ದು, ಇವುಗಳಲ್ಲಿ 5 ಐಸಿಯು ಮತ್ತು 2 ವೆಂಟಿಲೇಟರ್‌ಗಳಿವೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ 40 ಹಾಸಿಗೆಗಳಿದ್ದು, 5 ಐಸಿಯು, 5 ವೆಂಟಿಲೇಟರ್‌ಗಳಿವೆ. ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ಗಮನಿಸಿದರೆ ಹಾಸಿಗೆಗಳ ಕೊರತೆ ಬೀಳುವ ಸಾಧ್ಯತೆಗಳೂ ಇಲ್ಲದಿಲ್ಲ. ಆಗ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಪಡೆಯಬೇಕಾಗಬಹುದು. ಅಥವಾ ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗವನ್ನು ನಗರದ ಜೆಎಸ್‌ ಎಸ್‌ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್‌ ಚಿಕಿತ್ಸಾ ಕೇಂದ್ರವನ್ನಾಗಿ ಮಾಡುವ ಸಂಭವ ಇದೆ.

Advertisement

Udayavani is now on Telegram. Click here to join our channel and stay updated with the latest news.

Next