Advertisement
ಈ ಬೆದರಿಕೆ ಕರೆಗಳು ಯಾರಿಂದ ಮತ್ತು ಎಲ್ಲಿಂದ ಬಂದಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ನಡುವೆ ಡಾ.ಆಂಥೋನಿ ಫೌಸಿ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ದಿ ವಾಷಿಂಗ್ಟನ್ ಪೋಸ್ಟ್ ಹೇಳಿದೆ.
ಈ ಕುರಿತು ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದ ಕೋವಿಡ್-19 ವೈರಸ್ ಎಕ್ಸ್‌ಪರ್ಟ್ ಡಾ| ಆಂಥೋನಿ ಫೌಸಿ ಗೆ ಭದ್ರತೆಯ ಆವಶ್ಯಕತೆ ಇಲ್ಲ. ಅವರನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದಿದ್ದಾರೆ. ಕೋವಿಡ್-19 ವೈರಸ್ ಸೋಂಕು ಅನ್ನು ತಡೆಯಲು ಹಲವು ನಿರ್ಬಂಧಗಳನ್ನು ಹೇರಲು ಟ್ರಂಪ್ ಗೆ ಇವರೇ ಸೂಚಿಸಿದ್ದರು. ಆರಂಭದಿಂದಲೇ ಅಮೆರಿಕ ಮುಂಜಾಗ್ರತೆ ವಹಿಸಿತ್ತು. ಇದನ್ನು ಕಡೆಗಣಿಸಿದರೆ ಸುಮಾರು 1-2 ಲಕ್ಷ ಜನ ಸಾವನ್ನಪ್ಪಬಹುದು ಎಂದು ಡಾ.ಆಂಥೋನಿ ಫೌಸಿ ಎಚ್ಚರಿಸಿದ್ದರು. ಇಂತಹ ಭೀಕರ ಸಂದರ್ಭದಲ್ಲಿ ಪೌಸಿ ಅವರ ಮೇಲೆ ದಾಳಿಯಾದರೆ ಕೋವಿಡ್-19 ವಿರುದ್ಧದ ಸಮರದಲ್ಲಿ ಹಿನ್ನಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಟ್ರಂಪ್ ಅವರೇ ಡಾ.ಆಂಥೋನಿ ಫೌಸಿ ಅವರ ಭದ್ರ ತೆಯ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ. ಇತ್ತೀಚೆಗಷ್ಟೇ ಡಾ. ಫೌಸಿ, ಲಾಕ್‌ಡೌನ್ ನಿಯಮ ಪಾಲಿಸಿ ಮನೆಯೊಳಗಿರದಿದ್ದರೆ ಭಾರೀ ಬೆಲೆ ತೆರಬೇಕಾದೀತು. ಕೋವಿಡ್-19 ಎದುರಿಸಲು ಸಾಮಾಜಿಕ ಅಂತರ ಪಾಲನೆಯೇ ದೊಡ್ಡ ಅಸ್ತ್ರ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದ್ದರು. ಜತೆಗೆ ಇದನ್ನು ಮೀರಿದರೆ 2 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಬಹುದು ಎಂದಿದ್ದರು.