Advertisement

ಮಂಗಳೂರಿನಲ್ಲಿ ಕೋವಿಡ್ 19 ಮೊದಲ ಪಾಸಿಟಿವ್ ಪ್ರಕರಣ ಪತ್ತೆ

11:20 AM Mar 27, 2020 | Hari Prasad |

ಮಂಗಳೂರು: ಮಾರ್ಚ್ 19ರಂದು ದುಬಾಯಿಯಿಂದ ಬಂದ ವಿಮಾನದಲ್ಲಿದ್ದ 22 ವರ್ಷದ ಯುವಕನಲ್ಲಿ ಕೋವಿಡ್ 19 ಪ್ರಕರಣ ದೃಢಪಟ್ಟ ವರದಿ ಲಭಿಸಿದೆ.

Advertisement

ದುಬಾಯಿಯಿಂದ ಮಾರ್ಚ್ 19ರಂದು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 22 ವರ್ಷದ ಭಟ್ಕಳ ಮೂಲದ ಯುವಕನನ್ನು ಅಂದು ತಪಾಸಣೆ ನಡೆಸಿ ಆತನ ಗಂಟಲ ಸ್ರಾವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮತ್ತು ಆ ದಿನವೇ ಈತನನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ದಾಖಲಿಸಲಾಗಿತ್ತು.

ಆ ಪರೀಕ್ಷೆಯ ವರದಿ ಇಂದು ಲಭ್ಯವಾಗಿದ್ದು ಪಾಸಿಟಿವ್ ಎಂದು ವರದಿ ಬಂದಿದೆ ಮತ್ತು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕೋವಿಡ್ 19 ಪ್ರಕರಣ ಪತ್ತೆಯಾದಂತಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೀಗ ಈ ಯುವಕನ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಈ ಯುವಕನಿಗೆ ವೆನ್ಲಾಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂಬ ಮಾಹಿತಿಯನ್ನೂ ಜಿಲ್ಲಾಧಿಕಾರಿಯವರು ಈ ಸಂದರ್ಭದಲ್ಲಿ ನೀಡಿದ್ದಾರೆ.

ಈ ಯುವಕನ ಜೊತೆ ಆ ದಿನ ಪ್ರಯಾಣಿಸಿದ್ದ 165 ಮಂದಿಯ ವಿಳಾಸ ಪತ್ತೆಯಾಗಿದ್ದು ಅವರನ್ನು ಸಂಪರ್ಕಿಸಿ ತಪಾಸಣೆ ನಡೆಸಲಾಗುವುದು ಹಾಗೂ ನಿಗಾ ಅಗತ್ಯವಿದ್ದಲ್ಲಿ ಮನೆಯಲ್ಲಿ ನಿಗಾ ಅಥವಾ ಆಸ್ಪತ್ರೆ ನಿಗಾವಣೆಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ‍ಧಿಕಾರಿಯವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next